ನವದೆಹಲಿ: ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ನ್ಯಾಯಲಯವೇ ಹೇಳಿದೆ ಆದರೂ ರಾಜ್ಯ ಕಾಂಗ್ರೆಸ್ (Congress) ಸರ್ಕಾರ ನಿರಂತರವಾಗಿ ತುಷ್ಠೀಕರಣ ರಾಜಕೀಯ ಮಾಡುತ್ತಿದ್ದು ಅವರ ತುಷ್ಠೀಕರಣ ಎಲ್ಲೆ ಮೀರಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಕ್ರೋಶ ಹೊರ ಹಾಕಿದ್ದಾರೆ.
ಟೆಂಡರ್‌ನಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ (Delhi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ 10,000 ಕೋಟಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಸಿದ್ದರಾಮಯ್ಯ ಬಳಿ ನಾನು ಯಾವಗಲೇ ಹೋದರೂ ಮುಸ್ಲಿಂ ಅಭಿವೃದ್ಧಿಗೆ ಹಣ ಕೊಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಮೊದಲ ಸ್ಥಾನ
ಪೊಲೀಸ್ ಠಾಣೆಗೆ ಬೆಂಕಿ ಹಾಕಿದ್ದ ಆರೋಪಿಗಳನ್ನು ಖುಲಾಸೆ ಮಾಡಿದರು, ದೇವಸ್ಥಾನಕ್ಕೆ ಮಠಗಳಿಗೆ ನೀಡಿದ ಜಾಗಕ್ಕೆ ಈಗ ವಕ್ಫ್ ನೋಟಿಸ್ ನೀಡುತ್ತಿದೆ. ಸಂಗೊಳ್ಳಿ ಇಡೀ ಊರು ಈಗ ವಕ್ಫ್ ಆಗಿದೆ ಈಗ ಟೆಂಡರ್‌ಗಳಲ್ಲೂ 4% ಮೀಸಲಾತಿ ನೀಡಲು ಹೊರಟಿದೆ. ಎಸ್ಸಿ,ಎಸ್ಟಿ ಸಿಗುತ್ತಿದ್ದ ಮೀಸಲಾತಿಯನ್ನು ತೆಗೆದು ಮುಸ್ಲಿಂ ಸಮುದಾಯಕ್ಕೆ ನೀಡಲು ಸರ್ಕಾರ ಚಿಂತಿಸಿದೆ ಎಂದರು. ಇದನ್ನೂ ಓದಿ: ಮತಗಟ್ಟೆಯಲ್ಲಿ ಸರ್ಕಾರಿ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಅಭ್ಯರ್ಥಿ
ಪ್ರಕರಣ ಬಹಿರಂಗವಾದ ಬಳಿಕ ಸುಳ್ಳು ಆರೋಪ ಎಂದು ಸಿದ್ದರಾಮಯ್ಯ (Siddaramaiah) ಅವರು ಹೇಳುತ್ತಾರೆ. ಆದರೆ ಆಗಸ್ಟ್‌ನಲ್ಲಿ ಮುಸ್ಲಿಂ ನಾಯಕರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಅದರ ಮೇಲೆ ಇವರು ಕಾನೂನು ಮಾಡಲು ಹೊರಟಿದ್ದಾರೆ. ಕಾನೂನು ಇಲಾಖೆಯ ಇ-ಫೈಲ್‌ನಲ್ಲಿ ಈ ದಾಖಲೆ ಇದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ನಮ್ಮದೇನು ಆಕ್ಷೇಪ ಇಲ್ಲ. ಆದರೆ ಒಂದು ವರ್ಗಕ್ಕೆ ಯಾಕೆ ತುಷ್ಠೀಕರಣ ಮಾಡುವುದು ಎಂದು ಪ್ರಶ್ನಿಸಿದರು.
ಕಾನೂನು ಬಾಹಿರವಾಗಿ ಜಮೀರ್ ಅಹ್ಮದ್ (Zameer Ahmed Khan) ವಕ್ಫ್ (Waqf) ಸಭೆ ನಡೆಸಿ, ಅಧಿಕಾರಿಗಳಿಗೆ ದಮ್ಕಿ ಹಾಕಿ ನೋಟಿಸ್ ಕೊಡಿಸುತ್ತಿದ್ದಾರೆ. ಎಂ.ಬಿ ಪಾಟೀಲ್ ಅವರೇ ನಿಮ್ಮ ಕ್ಷೇತ್ರದಲ್ಲಿ ನೋಡಿ ಇಡೀ ಊರು ವಕ್ಫ್ಗೆ ಹೋಗಿದೆ. ಜಮೀರ್ ಅವರ ಏನು ಭಾಷೆ ಬೇಕಾದರೂ ಮಾತನಾಡುತ್ತಾರೆ ದೇವೇಗೌಡರ ಕುಟುಂಬ ಖರೀದಿ ಮಾಡುತ್ತೇನೆ ಅಂತಾರೆ, ಸೌಹಾರ್ದತೆ ಬಗ್ಗೆ ಸಚಿವರು ತಿಳಿದುಕೊಂಡಿರಬೇಕು. ಸಿದ್ದರಾಮಯ್ಯ ಅವರು ಹಿಂದೆಯೇ ರಾಜೀನಾಮೆ ಪಡೆಯಬೇಕಿತ್ತು. ಅಹಿಂದ ನಾಯಕ ನ್ಯಾಯ ಕೊಡುತ್ತಾರೆ ಎಂದು ಎಲ್ಲ ವರ್ಗ ನಿಮ್ಮನ್ನು ಬೆಂಬಲಿಸಿದೆ. ಅವರು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣು ಮಾಡಿದ್ದಾರೆ. ನೀವೇ ನಿರ್ದೇಶನ ಮಾಡಿ ಈಗ ಬಿಜೆಪಿ ಆರೋಪ ಅಂತಾ ಸಿದ್ದರಾಮಯ್ಯ ಅವರು ಹೇಳುತ್ತಾರೆ ಎನ್ನುತ್ತಾರೆ. ಇದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಹಾರದ ಕಾರ್ಯಕ್ರಮದಲ್ಲಿ ಮೋದಿ ಪಾದಸ್ಪರ್ಶಕ್ಕೆ ನಿತೀಶ್ ಯತ್ನ – ವೀಡಿಯೋ ವೈರಲ್
ಅಬಕಾರಿ ಗುತ್ತಿಗೆದಾರರು ಮೊದಲ ಬಾರಿಗೆ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಹೀಗೆ ಹೇಳುತ್ತಿದ್ದಾರೆ. ಗುತ್ತಿಗೆದಾರರು 700 ಕೋಟಿಯಷ್ಟು ಸರ್ಕಾರ ವಸೂಲಿ ಮಾಡಿದೆ ಎಂದು ಹೇಳಿದ್ದಾರೆ. ಬೇರೆ ಬೇರೆ ಚುನಾವಣೆಗೆ ದುಡ್ಡು ಕೊಟ್ಟಿದಾಯ್ತು, ಮೋದಿ ಅವರಿಗೆ ಚಾಲೆಂಜ್ ಮಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. 25 ವರ್ಷದಲ್ಲಿ ಮೋದಿ (Narendra Modi) ಅವರಿಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಸಿದ್ದರಾಮಯ್ಯ ಅವರ ಮೇಲೆ ದಿನಾ ಒಂದು ಕಪ್ಪು ಚುಕ್ಕೆ ಕೂರುತ್ತಿದೆ. ಸಚಿವರು ಪಿಎ ಹೆಸರು ಬರೆದು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಏನು ಅನಿಸುವುದಿಲ್ಲವೇ? ಅವರ ಕೈಯಲ್ಲಿ ಅಧಿಕಾರ ಇದೆ ಕೊರೋನ ಸೇರಿ ಯಾವ ವಿಚಾರ ಬಗ್ಗೆಯೂ ತನಿಖೆ ನಡೆಯಲಿ ಉಪ್ಪು ತಿಂದವರು ನೀರು ಕುಡಿಯಲಿ ಎಂದು ಹರಿಹಾಯ್ದರು. ಇದನ್ನೂ ಓದಿ: `ದಾಸವರೇಣ್ಯ ಶ್ರೀ ವಿಜಯ ದಾಸರು 2′ ಚಿತ್ರಕ್ಕೆ ಚಾಲನೆ