Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬಳ್ಳಾರಿ ಕಾರ್ಯಕರ್ತನ ಕೊಲೆಗೆ ಕಾಂಗ್ರೆಸ್ ಸರ್ಕಾರ ನ್ಯಾಯ ನೀಡಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಅಶೋಕ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬಳ್ಳಾರಿ ಕಾರ್ಯಕರ್ತನ ಕೊಲೆಗೆ ಕಾಂಗ್ರೆಸ್ ಸರ್ಕಾರ ನ್ಯಾಯ ನೀಡಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಅಶೋಕ್

Bengaluru City

ಬಳ್ಳಾರಿ ಕಾರ್ಯಕರ್ತನ ಕೊಲೆಗೆ ಕಾಂಗ್ರೆಸ್ ಸರ್ಕಾರ ನ್ಯಾಯ ನೀಡಬೇಕು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಅಶೋಕ್

Public TV
Last updated: January 17, 2026 6:12 pm
Public TV
Share
3 Min Read
R Ashok 5
SHARE

– ಕೊಲೆಗಾರರು ಬೆಂಗಳೂರಿನಲ್ಲಿ ಆರಾಮಾಗಿ ಇದ್ದಾರೆ

ಬೆಂಗಳೂರು: ಬಳ್ಳಾರಿಯ ಕಾರ್ಯಕರ್ತನ ಕೊಲೆಗೆ (Ballari Case) ಕಾಂಗ್ರೆಸ್ (Congress) ಸರ್ಕಾರ ನ್ಯಾಯ ನೀಡಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.

ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೊಲೆಗಡುಕ ಕಾಂಗ್ರೆಸ್ ಸರ್ಕಾರದ ಬಳಿ ನ್ಯಾಯ ಕೇಳಲು ಬಳ್ಳಾರಿಗೆ ಬಂದಿದ್ದೇವೆ. ಎರಡೂವರೆ ವರ್ಷದಿಂದ ಯಾರು ಆಡಳಿತ ನಡೆಸುತ್ತಿದ್ದಾರೆ ಎಂದು ಗೊತ್ತಾಗಿಲ್ಲ. ಗೃಹ ಸಚಿವರು ಯಾರೆಂದು ಇನ್ನೂ ತಿಳಿದಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ಕೊಡಲು ಮಾತ್ರ ಸೀಮಿತವಾಗಿದ್ದಾರೆ. ಉಳಿದಂತೆ ಪ್ರತಿ ಜಿಲ್ಲೆಗಳಲ್ಲಿ ಪ್ರತ್ಯೇಕ ಗೃಹ ಸಚಿವರಿದ್ದಾರೆ. ಕಾಂಗ್ರೆಸ್ ನಾಯಕರಿಂದಾಗಿ ಅಮಾಯಕ ಕಾರ್ಯಕರ್ತ ಬಲಿಯಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ ಎಂದರು. ಇದನ್ನೂ ಓದಿ: ಡಿಕೆಶಿ ಡೆಲ್ಲಿ ಟೂರ್ ಗೇಮ್.. ಬೆಂಗಳೂರಲ್ಲೇ ಕುಳಿತು ಸಿದ್ದರಾಮಯ್ಯ ಚೆಕ್ ಮೇಟ್..! ರಾಹುಲ್ ಬಳಿ ಜಾರ್ಜ್ ಹೋಗಿದ್ದೇಕೆ..!?

ಜನವರಿ 1ರಂದು ಎಲ್ಲ ಕಡೆ ಹೊಸ ವರ್ಷದ ಆಚರಣೆಗಾಗಿ ಪಟಾಕಿ ಸಿಡಿಯುತ್ತಿದ್ದರೆ, ಬಳ್ಳಾರಿಯಲ್ಲಿ ಗುಂಡಿನ ಸುರಿಮಳೆ ಆಗುತ್ತಿತ್ತು. ಗುಂಡು ಹಾರಿಸಿದವರು ಯಾರೆಂದು ಪೊಲೀಸರಿಗೆ ಇನ್ನೂ ಗೊತ್ತಿಲ್ಲ. ಜನಾರ್ದನ ರೆಡ್ಡಿ ಅಥವಾ ಶ್ರೀರಾಮುಲು ಕಡೆಯವರಿಂದ ಗುಂಡು ಹಾರಿದ್ದರೆ ಪೊಲೀಸರು ಪ್ರತಿ ಮನೆಗೆ ಬಂದು ಲಾಠಿ ಏಟು ಕೊಟ್ಟು ಎಲ್ಲರನ್ನೂ ಬಂಧಿಸುತ್ತಿದ್ದರು. ಕಾಂಗ್ರೆಸ್ ಕಡೆಯವರೇ ಆಗಿರುವುದರಿಂದ ಕೊಲೆ ಮಾಡಿದವರನ್ನು ಇನ್ನೂ ಬಂಧನ ಮಾಡಿಲ್ಲ. ಗುಂಡು ಹಾರಿಸಿದ್ದ ಗನ್‌ಮ್ಯಾನ್‌ನನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ಹೇರಲಾಗಿದೆ. ಈ ಬಗ್ಗೆ ನಾನು ವಿಚಾರಿಸಿದಾಗ ಅಚಾನಕ್ಕಾಗಿ ಗುಂಡು ಹಾರಿದೆ ಎಂದು ಪೊಲೀಸರು ಹೇಳಿದ್ದಾರೆ. ಹೀಗೆ ಗುಂಡು ಹಾರಿಸಿದರೆ ಪೊಲೀಸರು ಬಿಟ್ಟುಬಿಡುತ್ತಾರೆಯೇ? ಈಗ ಕೊಲೆಗಾರರು ಬೆಂಗಳೂರಿನಲ್ಲಿ ಆರಾಮವಾಗಿ ಇದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮತ್ತೆ ದರ ಏರಿಕೆಗೆ ರೆಡಿಯಾದ BMRCL – ಸಿಎಂ, ಕೇಂದ್ರಕ್ಕೆ ತೇಜಸ್ವಿ ಸೂರ್ಯ ಪತ್ರ

ಪೊಲೀಸರು ನ್ಯಾಯ ಕೊಡಲು ವಿಫಲರಾಗಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಬಳ್ಳಾರಿಯಲ್ಲಿ ಏನೂ ಅಭಿವೃದ್ಧಿಯಾಗಿಲ್ಲ. ಈಗ ಇಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆದಿದೆ. ಅಂತಹ ದಾಳಿ ಮಾಡಿದವರನ್ನು ಬಂಧಿಸಿ ಜೈಲಿಗೆ ಹಾಕಬೇಕಾಗಿತ್ತು. ಜನಾರ್ದನ ರೆಡ್ಡಿಯವರ ಮೇಲೆ ದಾಳಿ ಮಾಡಲು ಬೇರೆ ಬೇರೆ ಪ್ರಯತ್ನ ನಡೆದರೂ ಕ್ರಮ ವಹಿಸಿಲ್ಲ. ಈ ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಪ್ರಯತ್ನ ನಡೆದಿದೆ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಧಿಕಾರಿಗೆ ಬೆದರಿಕೆ ಹಾಕುತ್ತಾನೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲ ನೀಡುತ್ತಾರೆ. ಕುಕ್ಕರ್ ಬಾಂಬ್ ಹಾಕುವವರು, ಬೆದರಿಕೆ ಹಾಕುವವರು ಇವರಿಗೆ ಬ್ರದರ್‌ಗಳಾಗಿದ್ದಾರೆ ಎಂದರು. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಗೋಮಾಳ ಒತ್ತುವರಿ ತೆರವು

ಎರಡು ವರ್ಷದ ಬಳಿಕ ಅಧಿಕಾರ ಇರುವುದಿಲ್ಲ ಎಂದು ಗೊತ್ತಾಗಿರುವುದರಿಂದಲೇ ಇಷ್ಟೆಲ್ಲ ಹಲ್ಲೆ ನಡೆಯುತ್ತಿದೆ. ಈ ಬಗ್ಗೆ ವಿಧಾನಸಭೆಯಲ್ಲೂ ಪ್ರಶ್ನೆ ಮಾಡಿ ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಸಾಧ್ಯವಾದರೆ ಜನರಿಗೆ ಒಳಿತು ಮಾಡಬೇಕು, ಇಲ್ಲವಾದರೆ ತೊಲಗಬೇಕು. ಪೊಲೀಸರು ಜನರಿಗೆ ರಕ್ಷಣೆ ನೀಡಬೇಕು. ಆದರೆ 7 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ. ಕರ್ನಾಟಕ ಪೊಲೀಸ್ ಎಂದರೆ ದೇಶಕ್ಕೆ ಮಾದರಿಯಾಗಿತ್ತು. ಆ ವ್ಯವಸ್ಥೆಯನ್ನು ಕಾಂಗ್ರೆಸ್ ಹಾಳು ಮಾಡಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತದ Gen Z ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ: ಪ್ರಧಾನಿ ಮೋದಿ

ಜನರು ನೆನಪಿಸಿಕೊಳ್ಳುವಂತೆ ಪೊಲೀಸರು ಕೆಲಸ ಮಾಡಬೇಕು. ಆದರೆ ಬಳ್ಳಾರಿಯಲ್ಲಿ ಹೊಸ ವರ್ಷದಲ್ಲೇ ಒಂದು ಕುಟುಂಬದಲ್ಲಿ ಸೂತಕ ಕಂಡುಬಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ನೊಂದವರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.  ಇದನ್ನೂ ಓದಿ: ಸುಂದರ ಹುಡುಗಿಯನ್ನ ನೋಡಿ ಸೆಳೆತಕ್ಕೊಳಗಾಗಿ ರೇಪ್ ಮಾಡ್ತಾರೆ – ಕಾಂಗ್ರೆಸ್ ಶಾಸಕ ವಿವಾದ

TAGGED:Ballari Casebengalurubjpcongressr ashokಆರ್ ಅಶೋಕ್ಕಾಂಗ್ರೆಸ್ಬಳ್ಳಾರಿ ಕೇಸ್ಬಿಜೆಪಿಬೆಂಗಳೂರು
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Virat Kohli Devdutt Padikkal
Cricket

ಡಫಿ ಮಾರಕ ಬೌಲಿಂಗ್‌ – ಪಡಿಕ್ಕಲ್‌, ಕೊಹ್ಲಿ ಬೆಂಕಿ ಬ್ಯಾಟಿಂಗ್‌ಗೆ ಹೈದರಾಬಾದ್‌ ಬರ್ನ್‌!

Public TV
By Public TV
7 hours ago
two more india bound petroleum vessels cross strait of hormuz navy on standby
Latest

ಕಚ್ಚಾ ತೈಲ ಹೊತ್ತು ಭಾರತಕ್ಕೆ ಬರುತ್ತಿರೋ ಹಡಗುಗಳಿಗೆ ನೌಕಾಪಡೆಯ ಭದ್ರತೆ

Public TV
By Public TV
7 hours ago
rainfall disrupts daily life in mudigere chikkamagaluru
Chikkamagaluru

ಮೂಡಿಗೆರೆ, ಚಿಕ್ಕಮಗಳೂರಲ್ಲಿ ಭಾರೀ ಗಾಳಿ, ಮಳೆ – ವಾಹನ ಸವಾರರ ಪರದಾಟ

Public TV
By Public TV
7 hours ago
Phil Salts Controversial Catch To Dismiss Klaasen In RCB vs SRH Match chinnaswamy stadium bengaluru
Bengaluru City

ಬೌಂಡರಿ ಗೆರೆಯ ಬಳಿ ಪಲ್ಟಿಯಾಗಿ ಸಾಲ್ಟ್‌ ಕ್ಯಾಚ್‌ – ಸಿಟ್ಟಿನಿಂದ ಹೊರನಡೆದ ಕ್ಲಾಸೆನ್

Public TV
By Public TV
8 hours ago
rain with thunder and lightning in many parts of kodagu
Districts

ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆ – ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

Public TV
By Public TV
8 hours ago
Take It Back It Is Not Mine UP Womans Honesty Wins Praise After Bank Error Credits Rs 10 Crore
Latest

ಇದು ನನ್ನದಲ್ಲ, ವಾಪಸ್‌ ತೆಗೆದುಕೊಳ್ಳಿ – ತಪ್ಪಾಗಿ ಜಮೆಯಾದ 10 ಕೋಟಿ ಮರಳಿ ಪಡೆಯುವಂತೆ ಬ್ಯಾಂಕ್‌ಗೆ ಮಹಿಳೆಯ ಮನವಿ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?