ನಮ್ಮ ಪಕ್ಷದವರೇ ನಾನು ಮಾಡಿದ ಕೆಲಸವನ್ನ ಪ್ರಚಾರ ಮಾಡಲಿಲ್ಲ: ಮಹದೇವಪ್ಪ ಬೇಸರ

Public TV
1 Min Read
mhweb

ಮೈಸೂರು: ಕಾಂಗ್ರೆಸ್ ಸರ್ಕಾರ ಅವಧಿಯ ರಸ್ತೆ ಕಾಮಗಾರಿ ಬಗ್ಗೆ ಬಿಜೆಪಿ ಸಚಿವರು ಪ್ರಶಂಸಿಸಿದ್ದಕ್ಕೆ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಎಚ್.ಸಿ. ಮಹದೇವಪ್ಪ, ಇಂತಹ ಬೆಳವಣಿಗೆ ರಾಜಕೀಯ ವ್ಯವಸ್ಥೆಯಲ್ಲಿ ಆಗಬೇಕು. ಒಂದು ಸರ್ಕಾರದ ಯೋಜನೆಗಳನ್ನ ಮತ್ತೊಂದು ಸರ್ಕಾರ ಪ್ರಶಂಸೆ ಮಾಡುವಂತಿರಬೇಕು. ನನ್ನ ಕೆಲಸದ ಬಗ್ಗೆ ಇವತ್ತಿನ ಸರ್ಕಾರ ಮೆಚ್ಚುಗೆ ವ್ಯಕ್ತ ಮಾಡಿದ್ದು ಸಂತಸ ತಂದಿದೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲೂ ಪೌರತ್ವ ಕಾಯ್ದೆ ವಿರೋಧಿಸೋರು ಇದ್ದಾರೆ: ಡಾ.ಎಚ್.ಸಿ. ಮಹದೇವಪ್ಪ

ನನ್ನ ಅವಧಿಯ ಕೆಲಸಗಳ ಬಗ್ಗೆ ಸಿಎಂ ಹಾಗೂ ಸಚಿವ ಜಗದೀಶ್ ಶೆಟ್ಟರ್ ಮೆಚ್ಚುಗೆ ಮಾತನಾಡಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಆದರೆ, ನನ್ನ ಕೆಲಸವನ್ನ ನಮ್ಮ ಪಕ್ಷದವರೇ ಬಳಸಿಕೊಳ್ಳಲಿಲ್ಲ. ಅದ್ಯಾಕೋ ಏನೋ ನಮ್ಮವರು ಅದನ್ನ ಉಪಯೋಗಿಕೊಳ್ಳಲೇ ಇಲ್ಲ. ಎಲ್ಲಿ ಕಾಂಗ್ರೆಸ್‍ನಲ್ಲಿ ನಾನು ದೊಡ್ಡಮಟ್ಟದ ನಾಯಕನಾಗುತ್ತೇನೋ ಅಂತಾನೋ ಗೊತ್ತಿಲ್ಲ ಇದು ವಿಪರ್ಯಾಸ ಎಂದು ಸ್ವಪಕ್ಷಿಯರ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *