– ಮಹಿಳೆ ಸಮಾಜದ ಕಣ್ಣು, ಮಹಿಳೆಯರಿಗೆ ಗೌರವದ ಸಂಕೇತ ಬಾಗಿನ ವಿತರಣೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗಳಿಗೆ ಸಹಕಾರ ನೀಡಿತು ಎಂದು ಕೆಪಿಸಿಸಿ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
Advertisement
ಜಯನಗರ, ಸಾರಕ್ಕಿ ಸಿಂಧೂರ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಸೇವಕ್ ಮಹಿಳಾ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ 500 ಮಹಿಳೆಯರಿಗೆ ಬಾಗಿನ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಜನಜಾಗೃತಿ ಅಭಿಯಾನ ಮಾಡಲಾಗಿದೆ. ಈ ಅಭಿಯಾನಕ್ಕೆ ರಾಮಲಿಂಗಾರೆಡ್ಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದನ್ನೂ ಓದಿ:ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!
Advertisement
ರಾಮಲಿಂಗಾರೆಡ್ಡಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ್ದು, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಮಹಿಳಾ ಸಬಲೀಕರಣಕ್ಕೆ ಸ್ವಸಹಾಯ ಸಂಘ ಸ್ಥಾಪನೆಗಳಿಗೆ ಸಹಕಾರ ನೀಡಿತು. ಇಂದು ಸ್ವ-ಸಹಾಯ ಗುಂಪಿನಿಂದ ಮಹಿಳೆಯರಿಗೆ ಸಾಲ ಸೌಲಭ್ಯ, ಸ್ವಯಂ ಉದ್ಯೋಗ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸಲು ಸ್ವಸಹಾಯ ಸಂಘ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಬಾಗಿನ ನೀಡುವುದು ಶುಭಕರದ ಸಂಕೇತ. ಮಹಿಳೆಯರಿಗೆ ಪ್ರಮುಖ ಹಬ್ಬಗಳಲ್ಲಿ ಸಂಪ್ರದಾಯ ಪ್ರಕಾರ ಅರಿಶಿನ, ಕುಂಕುಮ, ಹಸಿರು ಗಾಜಿನ ಬಳೆ ವಿವಿಧ ಶುಭಕರವಾದ ವಸ್ತುಗಳ ಕೊಟ್ಟು, ಶುಭಾಶಯ ಕೋರುವುದು ವಿಶೇಷವಾಗಿದೆ. ಜೆ.ಪಿ.ನಗರದಲ್ಲಿ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಒಂದೇ ಕುಟುಂಬದವರಂತೆ ಸಹಬಾಳ್ಮೆ ಮೂಲಕ ಬದುಕೋಣ ಎಂಬ ಸಂದೇಶ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್
ಕೊರೊನಾ ಸಾಂಕ್ರಮಿಕ ರೋಗ ಇನ್ನೂ ಮುಕ್ತವಾಗಿಲ್ಲ. ಜನರು ಜಾಗೃತಿಯಿಂದ ಗಣೇಶ ಹಬ್ಬವನ್ನು ಮನೆಯಲ್ಲಿ ಅಚರಣೆ ಮಾಡಬೇಕು. ಸಾಮೂಹಿಕ ಗಣೇಶ ಹಬ್ಬ ಅಚರಣೆಗೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ತರಬೇಕು ಎಂದು ಆಗ್ರಹಿಸಿದ್ದಾರೆ. ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯುತ್ತಾನೆ. ಈ ಬಾರಿ ಗಣೇಶ ಪ್ರತಿಷ್ಠಾಪನೆ ಮಾಡುವ ಮನೆಗಳಲ್ಲಿ ಬಣ್ಣದ ರಾಸಯನಿಕ ಗಣೇಶ ಮೂರ್ತಿಗಳು ಬೇಡ ಅದರ ಬದಲು ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತನ್ನಿ. ಮಣ್ಣಿನ ಗಣೇಶ ನೀರಿನಲ್ಲಿ ಕರಗಿದರೆ ಯಾವುದೇ ಹಾನಿಯಿಲ್ಲ, ಪರಿಸರವು ಉಳಿಯುತ್ತೆ ಎಂದು ಸಂದೇಶವನ್ನು ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯರೆಡ್ಡಿ, ಕಾಂಗ್ರೆಸ್ ನ ಮುಖಂಡ ಅರುಣ್ ಕುಮಾರ್ ಸೇವಕ್, ಮಹಿಳಾ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಮಂಜುಳಾ ಅರುಣ್ ಕುಮಾರ್, ಚಲನಚಿತ್ರ ನಟಿ ರಾಧ ಮತ್ತು ಡಾ||ಗೀತಾ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಇದನ್ನೂ ಓದಿ: ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ