– ವಕ್ಫ್ ವಿಚಾರ ತಂದು ಸರ್ಕಾರ ಹಿಂದೂ-ಮುಸ್ಲಿಮರನ್ನು ಒಡೆಯುತ್ತಿದೆ
– ನಿಖಿಲ್‌ರನ್ನ ಗೆಲ್ಲಿಸದಿದ್ರೆ ನಾವೆಲ್ಲ ಪಾಪ ಮಾಡಿದಂತೆ ಎಂದ ನಟಿ
ರಾಮನಗರ: ಕಾಂಗ್ರೆಸ್‌ನವರು ಮಹಿಳೆಯರಿಗಾಗಿ ಫ್ರೀ ಬಸ್ ಮಾಡಿದ್ರು, ಪಾಪ ಪುರುಷರು ಏನ್ ಮಾಡಿದ್ರು? ಪುರುಷರ ಜೇಬಿಗೆ ಕತ್ತರಿ ಹಾಕಿ, ಮಹಿಳೆಯರಿಗೆ ಕೊಟ್ಟರು. ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರನ್ನ ಈಗಲೂ ಶಾಸಕರಾಗಿ ನಾವು ಆಯ್ಕೆ ಮಾಡದಿದ್ದರೆ, ನಾವೆಲ್ಲ ಪಾಪ ಮಾಡಿದಂತೆ ಎಂದು ನಟಿ ತಾರಾ ಅನುರಾಧ (Tara Anuradha) ಹೇಳಿದರು.
ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ-ಜೆಡಿಎಸ್ ನಾಯಕರ (BJP JDS Leaders) ಮೈತ್ರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ: ಛಲವಾದಿ ನಾರಾಯಣಸ್ವಾಮಿ
ಹಿಂದೂ-ಮುಸ್ಲಿಮರನ್ನು ಸರ್ಕಾರ ಒಡೆಯುತ್ತಿದೆ:
ಚನ್ನಪಟ್ಟಣದ (Channapatna) ಜನ ಬಂಗಾರದ ಗೊಂಬೆಯಾಗಿ ಮಾಡಿ ನಿಖಿಲ್ ರನ್ನ ಶಾಸಕರಾಗಿ ಮಾಡ್ತೀರೆಂಬ ನಂಬಿಕೆಯಿದೆ. ಚನ್ನಪಟ್ಟಣದಲ್ಲಿ ಹಿಂದೂ-ಮುಸ್ಲಿಮರು ಭಾಯಿ ಭಾಯಿಯಂತಿದ್ದಾರೆ, ಎಲ್ಲ ಹಬ್ಬಗಳಲ್ಲಿ ಒಂದಾಗಿರ್ತಾರೆ. ಆದ್ರೆ ವಕ್ಫ್ ವಿಚಾರ ತಂದು ಹಿಂದೂ-ಮುಸ್ಲಿಮರನ್ನ ಒಡೆಯುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಕಿಡಿ ಕಾರಿದರು.
ನಿಖಿಲ್ ಎರಡು ಅಗ್ನಿಪರೀಕ್ಷೆ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ಗೆಲ್ಲಿಸದಿದ್ರೆ ನಾವು ಪಾಪ ಮಾಡಿದಂತೆ. ನಿಖಿಲ್ ಕೈ ಹಿಡಿದು ಮೇಲೆತ್ತಿ ನನ್ನ ಅಣ್ಣನ ಮಗ ನಿಖಿಲ್ ರನ್ನ ಗೆಲ್ಲಿಸಿ ಅಂತ ತಾರಾ ಮನವಿ ಮಾಡಿದರು.
ಇದೇ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ, ಚನ್ನಪಟ್ಟಣದಲ್ಲಿ ನಿಖಿಲ್ ಪರ ದೊಡ್ಡ ಗಾಳಿ ಬೀಸ್ತಿದೆ. ಸರ್ಕಾರದ ವಿರುದ್ಧ ಅಲೆ ಇದೆ, ಯೋಗೇಶ್ವರ್ ಕಾಂಗ್ರೆಸ್ ಸೇರಿ ತಮ್ಮ ಮೈಮೇಲೆ ತಾವೇ ಗಾಯ ಮಾಡ್ಕೊಂಡು ಔಷಧಿ ಇಲ್ಲದೇ ಪರದಾಡ್ತಿದ್ದಾರೆ. ಗುತ್ತಿಗೆದಾರರರಿಂದ ಸಂಗ್ರಹಿಸಿದ ಹಣ ತಂದು ಕಾಂಗ್ರೆಸ್‌ನವ್ರು ಚುನಾವಣೆ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: Chikkaballapura | ಪುರಾತನ ಆಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ!
ನಿಖಿಲ್ ಎರಡು ಸಲ ಏನೂ ತಪ್ಪು ಮಾಡದೇ ನೋವು ಅನುಭವಿಸಿದ್ದಾರೆ. ನಿಖಿಲ್ ರಾಮನಗರದಲ್ಲಿ, ಮಂಡ್ಯದಲ್ಲಿ ಸೋತಿರಬಹುದು, ಆದರೆ ಚನ್ನಪಟ್ಟಣದ ಜನ ನಿಖಿಲ್‌ಗೆ ಜನ ದೊಡ್ಡಮಟ್ಟದಲ್ಲಿ ಆಶೀರ್ವಾದ ಮಾಡ್ತಾರೆ ಅಂತ ಭವಿಷ್ಯ ನುಡಿದರು.