Connect with us

Latest

ಜಗತ್ತಿನಲ್ಲಿರುವ ಐದು ವಸ್ತುಗಳಲ್ಲಿ ಕಾಂಗ್ರೆಸ್ ಗೋಲ್ಮಾಲ್ ಮಾಡಿದೆ: ಅಮಿತ್ ಶಾ

Published

on

ಜೈಪುರ: ವಿಧಾನಸಭಾ ಚುನಾವಣೆ ಪ್ರಚಾರ ಪ್ರಯುಕ್ತ ರಾಜಸ್ಥಾನಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಜಗತ್ತಿನಲ್ಲಿರುವ ಐದು ವಸ್ತುಗಳಲ್ಲಿ ಕಾಂಗ್ರೆಸ್ ಗೋಲ್ಮಾಲ್ ಮಾಡಿದೆ ಎಂದು ಆರೋಪಿಸಿದ್ದಾರೆ.

ಪ್ರತಾಫಗಢ ನಡೆದ ಚುನಾವಣೆ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಜಗತ್ತಿನಲ್ಲಿ ಬಾಹ್ಯಾಕಾಶ, ಆಕಾಶ, ಭೂಮಿ, ಸಮುದ್ರ ಮತ್ತು ಪಾತಾಳ ಎಂಬ ಐದು ವಸ್ತುಗಳು ಇರುತ್ತವೆ. ಕಾಂಗ್ರೆಸ್ ಈ ಐದರಲ್ಲಿಯೂ ತನ್ನ ಭ್ರಷ್ಟಾಚಾರ ಮಾಡಿದೆ. ಬಾಹ್ಯಾಕಾಶಲ್ಲಿ ಇಸ್ರೋ ಮತ್ತು 2ಜಿ ಹಗರಣ, ಆಕಾಶದಲ್ಲಿ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್, ಭೂಮಿಯಲ್ಲಿ ಆದರ್ಶ ಸೊಸೈಟಿ, ಸಮುದ್ರದಲ್ಲಿ ಸಬ್ ಮರಿನ್ ಮತ್ತು ಪಾತಾಳದಲ್ಲಿ ಕಲ್ಲಿದ್ದಲು ಹಗರಣದಲ್ಲಿ ಕಾಂಗ್ರೆಸ್ ಭಾಗಿಯಾಗಿದೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಸರ್ಕಾರ ರಾಜಸ್ಥಾನಕ್ಕೆ 1,09,242 ರೂ. ಅನುದಾನ ನೀಡಿತ್ತು. ನಿಮ್ಮ ಮೋದಿ ಸರ್ಕಾರ 2,63,580 ರೂ. ಅನುದಾನವನ್ನು ನೀಡುವ ಮೂಲಕ ರಾಜಸ್ಥಾನದ ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದೆ ನಿಮ್ಮ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಅಂತಾ ಹೇಳಿದರು.

ಒಂದು ಕಡೆ ರಾಷ್ಟ್ರಭಕ್ತರನ್ನು ಒಳಗೊಂಡ ಮೋದಿ ನೇತೃತ್ವದ ಪಕ್ಷ. ಇನ್ನೊಂದು ಕಡೆ ರಾಹುಲ್ ಬಾಬಾ ನಾಯಕತ್ವದ ತತ್ವ, ಗುರಿ, ಸಿದ್ದಾಂತಗಳಿಲ್ಲದ ಕಾಂಗ್ರೆಸ್. ಎರಡು ಆಯ್ಕೆಗಳು ನಿಮ್ಮ ಮುಂದಿದೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡ್ರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಹೆಸರನ್ನು ಅಂತಿಮ ಮಾಡಿಲ್ಲ. ರಾಹುಲ್ ಗಾಂಧಿ ರಾಜಸ್ಥಾನದ ಜನತೆ ತಮ್ಮ ಪಕ್ಷದ ಸೇನಾಪತಿಯ ಹೆಸರನ್ನು ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ ತಮ್ಮ ಸ್ವಾರ್ಥಕ್ಕಾಗಿ ದೇಶದ ಸುರಕ್ಷತೆ ಜೊತೆ ಆಟ ಆಡುತ್ತಿದೆ. ಕಾಂಗ್ರೆಸ್ ನಲ್ಲಿ ನೆಹರು-ಗಾಂಧಿ ಪ್ರೈವೇಟ್ ಲಿಮಿಟೆಡ್ ಕಂಪನಿ ಇದೆ. ಇದು ಕೇವಲ ತಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆಯೋ ಹೊರತು, ರಾಜಸ್ಥಾನದ ವಿಕಾಸ ಮಾಡಲ್ಲ ಎಂದು ಕಿಡಿಕಾರಿದರು.

ರಾಜಸ್ಥಾನ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಎಲ್ಲ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿವೆ. ಡಿಸೆಂಬರ್ 7 ರಂದು ಮತದಾನ ನಡೆಯಲಿದ್ದು, 11ರಂದು ಫಲಿತಾಂಶ ಹೊರ ಬರಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *