ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರನ ಕಂಪೆನಿಯಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದ್ದು ತನಿಖೆ ನಡೆಸುವಂತೆ ಭಾನುವಾರ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದೆ.
ಅಮಿತ್ ಶಾ ಪುತ್ರ ಜೆ ಶಾ ಹೊಂದಿರುವ ಟೆಂಪಲ್ ಎಂಟರ್ ಪ್ರೈಸ್ ಕಂಪೆನಿ ವ್ಯವಹಾರ 2015-16 ಅವಧಿಗಿಂತ 16 ಸಾವಿರ ಪಟ್ಟು ದಿಢೀರ್ ಏರಿಕೆಯಾಗಿದ್ದು ಹೇಗೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
Advertisement
ಟೆಂಪಲ್ ಎಂಟರ್‍ಪ್ರೈಸಸ್ ರಿಜಿಸ್ಟ್ರಾರ್ ಆಫ್ ಕಂಪೆನಿಸ್ ನಲ್ಲಿ 80.5 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ತಿಳಿಸಿದೆ. ಯಾವುದೇ ಷೇರು, ಯಾವುದೇ ಆದಾಯ ಇಲ್ಲದೇ 80 ಕೋಟಿ ರೂ. ವಹಿವಾಟು ನಡೆದಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಪ್ರಧಾನಿ ನರೇಂದ್ರ ಮೋದಿ ಈ ಪ್ರಕರಣವನ್ನು ಸಿಬಿಐಗೆ ವಹಿಸುತ್ತಾರಾ? ಅಮಿತ್ ಶಾ ಪುತ್ರನ ಕಂಪೆನಿ ಮೇಲೆ ತನಿಖೆ ನಡೆಸಲು ಆದೇಶ ನೀಡುತ್ತಾರಾ ಎಂದು ಪ್ರಶ್ನಿಸಿದರು.
Advertisement
ವೈರ್ ಮಾಧ್ಯಮದಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ, ಕೊನೆಗೂ ನೋಟ್ ಬ್ಯಾನ್ ಬಳಿಕ ಯಾರಿಗೆ ಲಾಭವಾಗಿದೆ ಎನ್ನುವುದು ತಿಳಿದಿದೆ. ಆರ್‍ಬಿಐ, ಬಡವರು, ರೈತರಿಗೆ ಲಾಭವಾಗಿಲ್ಲ. ಅಮಿತ್ ಶಾಗೆ ಲಾಭವಾಗಿದೆ. ಜೈ ಅಮಿತ್ ಎಂದು ಟ್ವೀಟ್ ಮಾಡಿದ್ದಾರೆ.
Advertisement
Advertisement
We finally found the only beneficiary of Demonetisation. It's not the RBI, the poor or the farmers. It's the Shah-in-Shah of Demo. Jai Amit https://t.co/2zHlojgR2c
— Rahul Gandhi (@RahulGandhi) October 8, 2017