ಬೆಂಗಳೂರು: ‘ಮಹಾತ್ಮಗಾಂಧೀಜಿ ಅವರನ್ನು ಕೊಂದಿದ್ದು ನಾವೇ’ ಎಂದ ಸಂಘ ಪರಿವಾರದ ಮುಖಂಡ ಹಿಂದೂ ಮಹಾಸಭಾದ ಅಧ್ಯಕ್ಷ ಎಸ್.ಸುಬ್ರಮಣ್ಯ ರಾಜು ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
ಹೈಗ್ರೌಂಡ್ಸ್ ಠಾಣೆಯಲ್ಲಿ ಕಾಂಗ್ರೆಸ್ ಎಸ್.ಸುಬ್ರಮಣ್ಯ ರಾಜು ವಿರುದ್ಧ ಕಾನೂನು ಕ್ರಮ ಕೈಗೊಳಬೇಕು ಎಂದು ಒತ್ತಾಯಿಸಿ ದೂರು ನೀಡಿದೆ. ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿಲ್ಲ ಮಹಿಳೆಯರಿಗೆ ರಕ್ಷಣೆ – ನಿತ್ಯ 6 ರೇಪ್, 7 ಕಿರುಕುಳ ಪ್ರಕರಣಗಳು ವರದಿ
Advertisement
Advertisement
ದೂರಿನಲ್ಲಿ ಏನಿದೆ?
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದಿದ್ದು ನಾವೇ ಎಂದು ಹಿಂದೂ ಮಹಾಸಭಾದ ಅಧ್ಯಕ್ಷ ಹಾಗೂ ಸಂಘ ಪರಿವಾರದ ಮುಖಂಡರಾದ ಎನ್.ಸುಬ್ರಮಣ್ಯರಾಜು(ನಾರಾಯಣ) ಆವರು ವಾಹಿನಿಯೊಂದರಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ದೇಶ ವಿಭಜನೆಗೆ ಮಹಾತ್ಮಗಾಂಧಿಯೇ ಕಾರಣ ಎಂಬ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ. ಆದ್ದರಿಂದ ಇಂತಹ ದೇಶದ್ರೋಹಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ಈ ದೇಶದ್ರೋಹಿಗೆ ಕಾನೂನು ಅಡಿಯಲ್ಲಿ ಕಠಿಣ ಕ್ರಮ ಹಾಗೂ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು.
Advertisement
Advertisement
ಈ ಕಿಡಿಗೇಡಿಯನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಈ ದೂರನ್ನು ಸಲ್ಲಿಸುತ್ತಿದ್ದೇವೆ. ಈತನ ಹೇಳಿಕೆಯ ವೀಡಿಯೋವನ್ನು ಸಹ ಈ ಇದರೊಂದಿಗೆ ಲಗತ್ತಿಸಲಾಗಿದೆ ಎಂದು ಬರೆದು ಪೊಲೀಸರಿಗೆ ದೂರು ಕೊಟ್ಟಿದೆ. ಇದನ್ನೂ ಓದಿ: 80 ವರ್ಷಗಳ ನಂತರ ಬುಡಕಟ್ಟು ಕುಗ್ರಾಮದಲ್ಲಿ ಬೆಳಗಿತು ಸೌರಶಕ್ತಿ ಬೆಳಕು