ಬೆಂಗಳೂರು: ಮುಖ್ಯಮಂತ್ರಿ ಮಾಡಲು 1,000 ಕೋಟಿ ಹಣ ಕೂಡಿಡಲಾಗಿದೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿಕೆ ವಿರುದ್ಧ ಕಾಂಗ್ರೆಸ್ (Congress) ದೂರು ನೀಡಿದೆ.
ಯತ್ನಾಳ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ. 1,000 ಕೋಟಿ ಹಣದ ಮೂಲ ಯಾವುದು? ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಪಿಎಂಎಲ್‌ಎ (PMLA) ಅಡಿ ಕೇಸ್ ಕೂಡ ಬರುತ್ತದೆ. ವಿಚಾರಣೆಗೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮುಡಾ ಸೈಟ್ ವಿವಾದ – 14 ನಿವೇಶನ ವಾಪಸ್‌ಗೆ ಮುಂದಾದ ಸಿಎಂ ಪತ್ನಿ; ಮುಡಾ ಆಯುಕ್ತರಿಗೆ ಪತ್ರ
Advertisement
Advertisement
ಮುಡಾ ಅಕ್ರಮದಲ್ಲಿ ಸಿಎಂ ವಿರುದ್ಧ ಇಸಿಐಆರ್ ದಾಖಲು ಕುರಿತು ಉಗ್ರಪ್ಪ ಪ್ರತಿಕ್ರಿಯಿಸಿ, ಬಿಜೆಪಿಯ ಬಸನಗೌಡ ಪಾಟೀಲ್ ಸಾವಿರ ಕೋಟಿ ಇಟ್ಟುಕೊಂಡಿದ್ದೇವೆ ಎಂದರು ಕ್ರಮವಾಗಿಲ್ಲ. ಬಿಜೆಪಿಯು ಏನೇ ಷಡ್ಯಂತ್ರ ಮಾಡಿದರೂ ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಸಿದ್ದರಾಮಯ್ಯ ಹಾಗೂ ಪಕ್ಷಕ್ಕೆ ಇದನ್ನು ಎದುರಿಸುವ ಶಕ್ತಿಯಿದೆ. ನೋಟಿಸ್ ಎಲ್ಲಾ ಮುಂದಿನ ಪ್ರಕ್ರಿಯೆ. ಅದರ ಬಗ್ಗೆ ನಾನು ಮಾತನಾಡಲ್ಲ. ಕಾನೂನು ಮೂಲಕ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ
Advertisement