ಯಾದಗಿರಿ: ಬಿಜೆಪಿ ಶಾಸಕ ರಾಜುಗೌಡ ಸ್ವಗ್ರಾಮ ಯಾದಗಿರಿಯ (Yadgiri) ಕೊಡೇಕಲ್ನಲ್ಲಿ (Kodekal) ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ (BJP – Congress Clash) ಏರ್ಪಟ್ಟಿದೆ. ಈ ಹಿನ್ನೆಲೆ ಕೊಡೇಕಲ್, ಹುಣಸಗಿ (Hunasagi) ಹಾಗೂ ಸುರಪುರದಲ್ಲಿ (Surapura) ಖಾಕಿ ಪಡೆ ಸುತ್ತುವರಿದಿದೆ. ಗಲಾಟೆ ನಿಯಂತ್ರಣಕ್ಕಾಗಿ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಿ ಈಗಾಗಲೇ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಆದೇಶ ನೀಡಿದ್ದು, ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ಸೆಕ್ಷನ್ 144 ಕಲಂ ಜಾರಿಯಾಗಿದೆ.
ಸಂಘರ್ಷ ಹಿನ್ನೆಲೆ ಗುರುವಾರ ರಾತ್ರಿ ಕೊಡೇಕಲ್ಗೆ ಆಗಮಿಸಿರುವ ಕಲಬುರಗಿ ಈಶಾನ್ಯ ವಲಯ ಐಜಿಪಿ ಅನುಪಮ ಅಗರವಾಲ್ ಹಾಗೂ ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಗ್ರಾಮದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಇದನ್ನೂ ಓದಿ: 1 ಕೋಟಿ 5 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಜಪ್ತಿ
Advertisement
Advertisement
ನಿಷೇಧಾಜ್ಞೆ ಜಾರಿ ಹಿನ್ನೆಲೆ ಇಡೀ ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ ಖಾಕಿ ಸರ್ಪಗಾವಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ 3 ಕೆಎಸ್ಆರ್ಪಿ ತುಕಡಿ, 1 ಪ್ಯಾರಾ ಮಿಲಿಟರಿ ಫೋರ್ಸ್ ಕಂಪನಿ, 2 ಡಿಎಸ್ಪಿ, 5 ಸಿಪಿಐ, 10 ಸಿಪಿಐ 100 ಕಾನ್ಸ್ಟೇಬಲ್ ನಿಯೋಜನೆ ಮಾಡಲಾಗಿದೆ.
Advertisement
ಗಲಾಟೆ ಹಿನ್ನೆಲೆ ಈಗಾಗಲೇ 4 ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು 18 ಜನರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ 4 ಪ್ರಕರಣ ದಾಖಲಿಸಿಕೊಂಡು ಗಲಾಟೆಯಲ್ಲಿ ಭಾಗಿಯಾದ 118 ಜನರ ಮೇಲೆ ಸಿಆರ್ಪಿಸಿ 107 ಕಲಂನಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ವರುಣಾಗೆ ಬಿ.ವೈ ವಿಜಯೇಂದ್ರ ಹೆಸರು ಶಿಫಾರಸ್ಸಿಲ್ಲ!