ಬೆಂಗಳೂರು: ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳಿಗೆ ಬಿ ಫಾರಂ (B Form) ವಿತರಣೆ ಮಾಡಲು ಆರಂಭಿಸಿದೆ.
ಗುರುವಾರ ಮಧ್ಯಾಹ್ನ 1:30 ರಿಂದ 3 ಗಂಟೆಯವರೆಗೆ ರಾಹುಕಾಲವಿತ್ತು. ರಾಹುಕಾಲ ಮುಕ್ತಾಯವಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ (KPCC Office) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲು ಆರಂಭಿಸಿದರು.
Advertisement
Advertisement
ಮೊದಲ ಬಿ ಫಾರಂ ಅನ್ನು ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಭೈರತಿ ಸುರೇಶ್‌ಗೆ ನೀಡಲಾಯಿತು. ಎರಡನೇ ಬಿ ಫಾರಂ ಅನ್ನು ರಾಜರಾಜೇಶ್ವರಿ ನಗರದ ಅಭ್ಯರ್ಥಿ ಕುಸುಮಾ ನೀಡಲಾಯಿತು. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ
Advertisement
Advertisement
224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 165 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನೂ 58 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ ಘೋಷಿಸಿದ್ದು ಅಭ್ಯರ್ಥಿಯನ್ನು ಹಾಕಿಲ್ಲ.