ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ – 6 ಮಂದಿಯ ಸುತ್ತ `ಗುಪ್ತ’ ಬೇಹುಗಾರಿಕೆ

Public TV
2 Min Read
SUPER EXCLUSIVE

ಬೆಂಗಳೂರು: ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ ನೀಡಲು ಸಮ್ಮಿಶ್ರ ಸರ್ಕಾರ ಸಜ್ಜಾಗಿದ್ದು, ಡಿಸೆಂಬರ್ ಟಾರ್ಗೆಟ್ ಫೇಲ್ಯೂರ್ ಮಾಡಲು ಮಹಾಪ್ಲಾನ್ ರೂಪಿಸಲಾಗಿದ್ದು, 6 ಮಂದಿಯ ಸುತ್ತ ಗುಪ್ತಚರ ಇಲಾಖೆ ಬೇಹುಗಾರಿಕೆ ನಡೆಸುತ್ತಿದೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

‘ಆ’ 6 ಮಂದಿ ಯಾರು?
ಬಿಎಸ್‍ವೈ ಪಿಎ ಸಂತೋಷ್ ಅವರು ಕೆಲ ಶಾಸಕರ ಜೊತೆ ಸಂಪರ್ಕ ಇರುವ ಗುಮಾನಿ ಎದ್ದಿದೆ. ಸಚಿವ ರಮೇಶ್ ಜಾರಕಿಹೊಳಿ ಜತೆ ನಿಕಟ ಸಂಪರ್ಕ ಹಾಗೂ ಬಹುತೇಕ ಶಾಸಕರ ಜತೆ ಡೀಲ್ ಮಾಡ್ತಾರೆ ಅನ್ನೋ ಮಾಹಿತಿ ಇದೆ. ಹಾಗಾಗಿಯೇ ಬೇಹುಗಾರಿಕೆ ಟೀಂ ಸಂತೋಷ್ ಅವರನ್ನು ಬೆನ್ನತ್ತಿದೆ ಎನ್ನಲಾಗಿದೆ.

vlcsnap 2018 12 04 10h29m58s205 e1543899628252

ಮಾಜಿ ಶಾಸಕ ಸಿ.ಪಿ. ಯೋಗೀಶ್ವರ್ ಅವರು ಕಳೆದ ಬಾರಿ ಆಪರೇಷನ್ ಕಮಲದಲ್ಲಿ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದ್ದು, ಜಿಮ್, ಕ್ಲಬ್‍ಗಳಲ್ಲಿ ಕೈ-ತೆನೆ ಶಾಸಕರನ್ನ ಸಂಪರ್ಕಿಸಿದ್ರು ಅನ್ನೋ ಗುಮಾನಿ ಇದೆ. ಈಗಲೂ ಆಡಳಿತ ಪಕ್ಷದ ಶಾಸಕರನ್ನ ಟಚ್ ಮಾಡ್ತಿದ್ದಾರೆ. ಹಾಗಾಗಿಯೇ ಸಿ.ಪಿ.ಯೋಗೇಶ್ವರ್ ಮೇಲೆ `ಬೇಹು’ ಪಡೆ ಹದ್ದಿನಗಣ್ಣಿಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ ಅವರು ಕಳೆದ ಬಾರಿ ಮಹತ್ವದ ಪಾತ್ರ ವಹಿಸಿದ್ರು ಅನ್ನೋ ಮಾಹಿತಿ ಇದೆ. ಇವರು ಹಲವು ಶಾಸಕರ ಜತೆ ಮಾತುಕತೆ ನಡೆಸಿ ಇನ್ನು ಸಂಪರ್ಕದಲ್ಲಿದ್ದಾರೆ. ಈಗಲೂ ಹಲವು ಶಾಸಕರ ಜತೆ ವರ್ಕ್ ಔಟ್‍ನಲ್ಲಿ ಬ್ಯುಸಿ ಆಗಿರುವ ಮಾಹಿತಿ ಇದೆ. ಹಾಗಾಗಿಯೇ ಬೇಹುಗಾರಿಕೆ ಟೀಂ ಶಾಸಕ ಅಶ್ವತ್ಥನಾರಾಯಣ್  ಅವರ ಬೆನ್ನುಬಿದ್ದಿದೆ.

CONG JDS

ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು ಬಹಳಷ್ಟು ಶಾಸಕರನ್ನ ಮನವೊಲಿಸ್ತಿದ್ದಾರೆ. ಅಲ್ಲದೇ ಆಪರೇಷನ್ ಟೀಂ ಆಪರೇಟ್ ಮಾಡುವುದು ಇವರೇ ಅನ್ನೋ ಮಾಹಿತಿ ಸಿಕ್ಕಿದೆ. ಕಳೆದ ಬಾರಿಯೂ ಶಾಸಕರ ಜೊತೆ ಡೀಲ್ ಮಾಡಿದ್ದಾರೆ ಅಂತಾ ಆರೋಪಿಸಲಾಗಿತ್ತು. ಹೀಗಾಗಿ ಬೇಹುಗಾರಿಕೆ ಟೀಂ ಬಿ.ವೈ.ವಿಜಯೇಂದ್ರ ಅವರ ಹಿಂದೆ ಬಿದ್ದಿದೆ ಎನ್ನಲಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಎಚ್‍ಡಿಕೆಯೇ ನನ್ನ ಬಂಧನ ಮಾಡಿಸಿದ್ದು ಅಂತಾ ಗರಂ ಆಗಿದ್ದಾರೆ. ಕಳೆದ ವಾರದಿಂದ ಜನಾರ್ದನ ರೆಡ್ಡಿ ಹಲವು ಶಾಸಕರ ಸಂಪರ್ಕಿಸಿದ್ದಾರೆ ಅನ್ನೋ ಮಾಹಿತಿಯಿದ್ದು, ದೊಡ್ಡ ದೊಡ್ಡ ಶಾಸಕರಿಗೆ ಕೈ ಹಾಕ್ತಿದ್ದಾರೆ ಅನ್ನೋ ಗುಪ್ತ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಟೀಂ ಇವರನ್ನು ಕೂಡ ಫಾಲೋ ಮಾಡುತ್ತಿದೆ ಎಂಬುದಾಗಿ ತಿಳಿದುಬಂದಿದೆ.

BEHUGARIKE

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಗುಪ್ತಚರ ಇಲಾಖೆ ಕಳೆದ ಒಂದು ತಿಂಗಳಿನಿಂದ ಕಣ್ಗಾವಲು ಇಟ್ಟಿದೆ. ಬಿಎಸ್‍ವೈ ಮನೆ ಸುತ್ತ ಹೆಚ್ಚುವರಿ ಗುಪ್ತಚರ ಇಲಾಖೆ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಇಡೀ ಆಪರೇಷನ್ ಕೇಂದ್ರ ಬಿಂದು ಬಿಎಸ್‍ವೈ ಅವರೇ ಅನ್ನೋ ಮಾಹಿತಿ ಇದ್ದು, ಬೇಹುಗಾರಿಕೆ ಬಿಸಿ ತಾಳಲಾರದೇ ಬಿಎಸ್‍ವೈ ಅವರೇ ಕೇರಳಕ್ಕೆ ಹೋಗಿದ್ದಾರಂತೆ. ಈ ಎಲ್ಲಾ ಬೆಳವಣಿಗೆಗಳಿಂದ ಬಿಎಸ್‍ವೈ ನಡೆಗಳ ಬಗ್ಗೆ ಬೇಹುಗಾರಿಕೆ ಟೀಂ ಆಲರ್ಟ್ ಆಗಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *