ಬೆಂಗಳೂರು: ಕಾಂಗ್ರೆಸ್ (Congress) ಮಾಡಿರುವ ಮತ ಕನ್ನ ಆರೋಪಕ್ಕೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರತಿಕ್ರಿಯಿಸಿದೆ.
ಖಾಸಗಿ ಸಂಸ್ಥೆಯಿಂದ ಮತದಾರ ಮಾಹಿತಿ ಸಂಗ್ರಹ ಆರೋಪದ ಮೇಲೆ ಇದೀಗ ಬಿಬಿಎಂಪಿ ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾಗಿರುವುದಾಗಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ಚಿಲುಮೆ (Chilume) ಸಂಸ್ಥೆಗೆ ಜಾಗೃತಿ ಮೂಡಿಸೋದಕ್ಕೆ ಅಷ್ಟೇ ನಾವು ಅನುಮತಿ ಕೊಟ್ಟಿದ್ದೇವೆ. ಡೇಟಾ ಕಲೆಕ್ಟ್ ಮಾಡಿ ಅಂತಾ ಅನುಮತಿ ಕೊಟ್ಟಿರಲಿಲ್ಲ. ಆದರೆ ಡೇಟಾ ಕಲೆಕ್ಟ್ ಮಾಡ್ತಾ ಇದ್ದಾರೆ ಅಂತಾ ದೂರು ದಾಖಲಾಗಿದೆ. ಹಾಗಾಗಿ ನಾವು ಅವರಿಗೆ ನೀಡಿದ್ದ ಅನುಮತಿಯನ್ನ ಕ್ಯಾನ್ಸಲ್ ಮಾಡಿದ್ದೇವೆ. ಬಿಬಿಎಂಪಿ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರದಲ್ಲಿ ಶೆ. 26 ಮಾತ್ರ ವೋಟರ್ ಐಡಿ ಆಧಾರ್ ಲಿಂಕ್ ಆಗಿದೆ. ರಾಜ್ಯಾದ್ಯಂತ ಶೇ.60 ವೋಟರ್ ಐಡಿ ಆಧಾರ್ ಲಿಂಕ್ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 26 ಅಗಿದೆ ಅಷ್ಟೇ. ಬಿಬಿಎಂಪಿ ಬಿಎಲ್ ಓ ಗಳು ಮಾಹಿತಿ ಕಲೆ ಹಾಕಿದ್ದಾರೆ. ಚಿಲುಮೆ ಸಂಸ್ಥೆಯವರು ಮಾಹಿತಿ ಕಲೆ ಹಾಕಿದ್ದಾರೆ ಎಂಬ ಆರೋಪ ಬಂದಿದೆ ಎಂದರು.
Advertisement
Advertisement
ಚಿಲುಮೆ ಸಂಸ್ಥೆ ವಿರುದ್ಧ ನಾವು ತನಿಖೆ ಮಾಡಿಸುತ್ತೇವೆ. ತನಿಖೆ ಮಾಡಿಸಿ ಡೇಟಾ ಕಲೆಕ್ಟ್ ಮಾಡಿದ್ದಾರಾ ಇಲ್ವ ಅಂತಾ ಪತ್ತೆ ಮಾಡುತ್ತೇವೆ. ಮತದಾರರ ಮಾಹಿತಿ, ಆಧಾರ್ ಲಿಂಕ್ ಕೇಂದ್ರ ಚುನಾವಣಾ ಆಯೋಗಕ್ಕೆ ಮಾತ್ರ ಮಾಹಿತಿ ಹೋಗುತ್ತೆ. ಕೇಂದ್ರ ಚುನಾವಣಾ ಆಯೋಗಕ್ಕೆ ಬಿಟ್ಟು ಬೇರೆ ಎಲ್ಲೂ ಮಾಹಿತಿ ಲೀಕ್ ಆಗಲ್ಲ. ಇದರ ಬಗ್ಗೆ ತನಿಖೆ ಮಾಡುವುದಾಗಿ ರಂಗಪ್ಪ ಭರವಸೆ ನೀಡಿದರು. ಇದನ್ನೂ ಓದಿ: ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಸಂಬಂಧ ಇಲ್ಲ: ಕೈ ಆರೋಪಕ್ಕೆ ಅಶ್ವಥ್ ನಾರಾಯಣ್ ತಿರುಗೇಟು
ಇದೇ ವೇಳೆ ಚಿಲುವೆ ಸಂಸ್ಥೆ ಅವರ ವಿರುದ್ಧ ದೂರು ನೀಡಲು ಆರ್. ಓ ಮತ್ತು ಆರ್. ಡಿ ಅಧಿಕಾರಿಗಳಿಗೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಸೂಚನೆ ನೀಡಿದರು. ಚೆಲುವೆ ಸಂಸ್ಥೆಯವರಿಂದ ಅಕ್ರಮ ಆಗಿದ್ರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಮಗೆ 9ನೇ ತಿಂಗಳಲ್ಲೇ ದೂರು ಬಂದಿದೆ. ನಾವು ಟೀಂ ನಿಂದ ತನಿಖೆ ಮಾಡಿಸಿದ್ದೇವೆ. ತನಿಖೆ ಮಾಡಿಸುವುದಕ್ಕೆ ಇಷ್ಟು ಟೈಂ ತಗೊಂಡಿದೆ. ನವೆಂಬರ್ 2ಕ್ಕೆ ನಾವು ರದ್ದು ಮಾಡಿದ್ದೇವೆ ಎಂದರು.
ಅನುಮತಿ ರದ್ದು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ಇದೀಗ ರದ್ದು ಮಾಡಿದೆ. ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು ಮಾಡಿದೆ. ಆನ್ ಲೈನ್ ಮೂಲಕ ಅಥವಾ ಅರ್ಜಿ ಮುಖೇನ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಜವಾಬ್ದಾರಿ ನೀಡಲಾಗಿತ್ತು. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮತ ಮಾಹಿತಿಗೆ ಕನ್ನ: ಕಾಂಗ್ರೆಸ್ ಹೊಸ ಬಾಂಬ್
ಸದರಿ ಸಂಸ್ಥೆ ಷರತ್ತುಗಳ ಉಲ್ಲಂಘನೆ ಆದ ಹಿನ್ನೆಲೆ ಅನುಮತಿ ರದ್ದು ಮಾಡಿದ್ದೆವೆ. ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಮತದಾರರ ಚೀಟಿ ಮತ್ತು ಯಾವುದೇ ಮಾಹಿತಿ ನೀಡಬೇಡಿ. ಸಂಸ್ಥೆಗೆ ನೀಡಿದ್ದ ಷರತ್ತುಗಳನ್ನ ಉಲ್ಲಂಘನೆ ಮಾಡಿರೋ ಹಿನ್ನೆಲೆ ಮಾಹಿತಿ ನೀಡದಂತೆ ಬಿಬಿಎಂಪಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.