ಮಡಿಕೇರಿ: ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿಲ್ಲ. ಬೇಕು ಬೇಕು ಅಂತ ಕಾಂಗ್ರೆಸ್ ಕಡೆಯವರೇ ಮೊಟ್ಟೆ ಎಸೆದುಕೊಂಡಿರಬಹುದು ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಸಿದ್ದರಾಮಯ್ಯ ವಿರುದ್ಧ ಸಹಜವಾದ ಕೊಡಗಿನ ಜನರ ಆಕ್ರೋಶವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಪ್ರತಿಭಟನೆ ಮಾಡಿದೆ. ಮೊಟ್ಟೆ ಎಸೆದ ಪ್ರಕರಣಕ್ಕೂ ಬಿಜೆಪಿಗೂ ಸಂಘ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ನಮ್ಮ ಕಾರ್ಯಕರ್ತರ ಮೇಲೆ ಕೇಸು ಮಾಡಿಸೋದನ್ನೂ ಸಹಿಸಲ್ಲ ಎಂದು ಹೇಳಿದರು. ಇದನ್ನೂ ಓದಿ: ಕೊಡಗು ಎಸ್‍ಪಿಗೆ ಯಾವ ರೋಗ ಬಂದಿತ್ತು: ಸಿದ್ದರಾಮಯ್ಯ ವಾಗ್ದಾಳಿ
Advertisement
Advertisement
ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿಲ್ಲ. ಬೇಕು ಬೇಕು ಅಂತ ಅವರೇ, ಕಾಂಗ್ರೆಸ್ ಕಡೆಯವರೇ ಮೊಟ್ಟೆ ಎಸೆದುಕೊಂಡಿರಬಹುದು. ಮುಖ್ಯಮಂತ್ರಿ ಪೈಪೋಟಿಯಲ್ಲಿ ಅವರ ಕಡೆಯವರೇ ಮೊಟ್ಟೆ ಹೊಡೆಸಿದ್ರೋ ಏನೋ. ಸಾವರ್ಕರ್ ಫೋಟೋ ಮುಸಲ್ಮಾನ ಮೆಜಾರಿಟಿ ಇರುವೆಡೆ ಹಾಕಿದ್ಯಾಕೆ ಅಂದಿದ್ದು..? ಟಿಪ್ಪು ಫೋಟೋ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಹಾಕಿ ಅಂತ ಸಿದ್ದರಾಮಯ್ಯ ಹೇಳಿರುವುದು ಕೊಡಗಿನ ಜನ ಹಾಗೂ ಬಿಜೆಪಿ ಕಾರ್ಯಕರ್ತರನ್ನ ಕೆರಳಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮಹಾತ್ಮ ಗಾಂಧಿ ಕೊಂದವರು, ನನ್ನನ್ನ ಬಿಡ್ತಾರಾ: ಸಿದ್ದರಾಮಯ್ಯ
Advertisement
Advertisement
ಸಿದ್ದರಾಮಯ್ಯ ಕೊಡಗಿಗೆ ಬಂದಾಗ ಎಲ್ಲೂ ಪೊಲೀಸ್ ವೈಫಲ್ಯತೆ ಆಗಿಲ್ಲ. ಕೊಡಗಿನಲ್ಲಿ ಕೊಡವರ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯವನ್ನು ಕೊಡಗಿನ ಜನ ಮರೆತಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ನ್ಯಾಯಾಲಯವೇ ಹೇಳಿದೆ. ಕೊಡಗಿನ ಕಾಂಗ್ರೆಸ್‍ನವರು ಟಿಪ್ಪು ಬಗ್ಗೆ ತಮ್ಮ ನಿಲುವನ್ನ ಸ್ಪಷ್ಟಪಡಿಸಲಿ. ತಾಕತ್ತಿದ್ದರೆ ಟಿಪ್ಪು ಜಯಂತಿ ಮಾಡುತ್ತೇವೆ ಅಂತ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಲಿ. ಸಿದ್ದರಾಮಯ್ಯರೇ ಸವಾಲು ಹಾಕೋದು ಬಿಟ್ಟುಬಿಡಿ ಅದೆಲ್ಲಾ ಕೊಡಗಿನಲ್ಲಿ ನಡೆಯೊಲ್ಲ. 26 ರಂದು ಬರುತ್ತೇನೆ ಅನ್ನೋದನ್ನ ನಾವೂ ಕೂಡ ಸವಾಲಾಗಿ ಸ್ವೀಕರಿಸುತ್ತೇವೆ ಎಂದು ಸಿದ್ದರಾಮಯ್ಯಗೆ ಬೋಪಯ್ಯ ಸವಾಲೆಸೆದರು.