ChikkamagaluruDistrictsKarnatakaLatestMain Post

ಕೊಡಗು ಎಸ್‍ಪಿಗೆ ಯಾವ ರೋಗ ಬಂದಿತ್ತು: ಸಿದ್ದರಾಮಯ್ಯ ವಾಗ್ದಾಳಿ

- ಆರ್.ಎಸ್.ಎಸ್, ಬಿಜೆಪಿ ವಿರುದ್ಧ ಸಿದ್ದು ಕಿಡಿ

ಚಿಕ್ಕಮಗಳೂರು: ಕೊಡಗಿನ ಎಸ್‍ಪಿಗೆ ಯಾವ ರೋಗ ಬಂದಿತ್ತು ಎಂದು ಮೊಟ್ಟೆ ಎಸೆದ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಚಿಕ್ಕಮಗಳೂರಿನ ಬಾಸೂರಿನಲ್ಲಿ ಆರ್.ಎಸ್.ಎಸ್ ಹಾಗೂ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ನಿನ್ನೆಯ ಪ್ರಕರಣ ರಾಜ್ಯ ಸರ್ಕಾರದ ಪ್ರಾಯೋಜಿತ. ಆಗಸ್ಟ್ 26 ರಂದು ಎಸ್‍ಪಿ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತೇವೆ. ಈ ಸರ್ಕಾರ ಕೆಟ್ಟ ಮತ್ತು ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದರು.

ಒಂದು ಕಡೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ್ದ ನಂತ್ರ ಇನ್ನೂ ಮೂರು ಕಡೆ ತಡೆಯಬಹುದಿತ್ತು. ಸಿಎಂ ಬಂದಾಗ ಈ ರೀತಿಯ ಘಟನೆಯಾಗುವ ಮುನ್ನೆಚ್ಚರಿಕೆಯಿಂದ ಬಂಧಿಲಾಗುತ್ತಿತ್ತು. ಸರ್ಕಾರ ಕೆಟ್ಟ ಮತ್ತು ಭ್ರಷ್ಟ ಸರ್ಕಾರ. ಅವರ ಕಾರ್ಯಕರ್ತರೇ ಅವರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಅವರ ಸಚಿವರುಗಳೇ ಹೇಳಿಕೆಕೊಡ್ತಾರೆ ಎಂದು ಹೇಳಿದರು. ಇದನ್ನೂ ಓದಿ: ತಂದೆಗೆ ಹಿಂದೂ ಸಂಘಟನೆಗಳಿಂದ ಜೀವ ಬೆದರಿಕೆಯಿದೆ: ಯತೀಂದ್ರ ಸಿದ್ದರಾಮಯ್ಯ

ಈ ಸರ್ಕಾರ ದಪ್ಪ ಚರ್ಮದ ಸರ್ಕಾರವಾಗಿದೆ. 2018-19ರಲ್ಲಿ ಆದ ಅತಿವೃಷ್ಟಿ ಅನಾಹುತಕ್ಕೆ ಪರಿಹಾರ ನೀಡಿಲ್ಲ. ಕೃಷಿ ಭೂಮಿ ವ್ಯವಸಾಯ ಯೋಗ್ಯವಲ್ಲದಂತಾಗಿದೆ. ಈ ಬಾರಿಯೂ ಮುಂಗಾರು ನಾರ್ಮಲ್ ಗಿಂತ ಹೆಚ್ಚು ಸುರಿದಿದೆ. ರಾಜ್ಯದ 14-15 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ರಾಜ್ಯದಲ್ಲಿ 5 ಲಕ್ಷ 23 ಸಾವಿರ ಹೆಕ್ಟೇರ್ ಬೆಳೆ ಹಾಳಾಗಿದೆ. ಕಾಫಿ, ಅಡಿಕೆ, ಹಾಳಾಗಿದೆ, ಕೊಳೆ ರೋಗ ಬಂದಿದೆ. ನಾವು ಕೊಳೆ ರೋಗಕ್ಕೆ ಪರಿಹಾರ ನೀಡಿದ್ವಿ, ಈ ಸರ್ಕಾರ ಏನೂ ಮಾಡಿಲ್ಲ. ಸಿಎಂ ದುಡ್ಡು ಬಿಡುಗಡೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಚೆಕ್ ನೀಡಿದ್ದಾರೆ, ಕ್ಯಾಶ್ ಆಗಿಲ್ಲ. ಬರ ಪರಿಹಾರ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದರು. ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

ಕೊಡಗಿನಲ್ಲಿ 7 ಕೋಟಿಯ ಡಿಸಿ ಕಚೇರಿ ಬಳಿ ಕಟ್ಟಿದ ರಿಟೇನ್ ವಾಲ್ ಬಿದ್ದು ಹೋಗಿದೆ. ನಾನು ಹೋಗ್ತೀನಿ ಅಂತ ನನ್ನ ವಿರುದ್ಧ ಕೂಗಿಸಿದ್ದಾರೆ. ನಮ್ಮ ಕಾರ್ಯಕರ್ತರು ಉತ್ತರ ಕೊಟ್ಟರು. ಬಿಜೆಪಿ ರಾಜ್ಯದಲ್ಲಿ ಹತಾಶರಾಗಿದ್ದಾರೆ. ನಾನು ಹೋಗಿರುವುದು ಅತಿವೃಷ್ಟಿ ವೀಕ್ಷಣೆಗೆ, ಪ್ರತಿಭಟನೆ ಏಕೆ…? ಜನರ ಭಾವನೆ ತಿರುಗಿಸಲು ಈ ರೀತಿ ಮಾಡುತ್ತಿದ್ದಾರೆ. ಅವರ ಸಿಎಂಗೆ, ಮಿನಿಸ್ಟರ್ ಗೆ ಬಾವುಟ ಹಿಡಿಯಲು ಆಗಲ್ವ. ಇದು ಬಿಜೆಪಿ ಸರ್ಕಾರದ ಹೇಡಿತನ. ಇಡೀ ರಾಜ್ಯ ಇವರದ್ದಾ, ಗೋ ಅಂದ್ರೆ ಎಲ್ಲಿಗೆ ಹೋಗಲಿ. ನಮ್ಮವರ ಹೇಳ್ತಾರೆ, ಗೋ ಬ್ಯಾಕ್ ಸಿಎಂ ಎಂದು ಸೆಕ್ಯುರಿಟಿ ನೀಡೋದು ಅವರ ಜವಾಬ್ದಾರಿ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಲೂಟಿ ಹೊಡೆಯಲು ಬಂದಿದ್ದಾರೆ ಎಂದು ಹೇಳಿದರು.

ಇತಿಹಾಸದಲ್ಲಿ 40 ಸರ್ಕಾರ ಬಂದಿರಲಿಲ್ಲ. ಬ್ಯಾಡ್, ಕಮ್ಯುನಲ್, ಕರಪ್ಟ್ ಸರ್ಕಾರ. ಜನ, ಅಲ್ಪಸಂಖ್ಯಾರರು ನೆಮ್ಮದಿಯಿಂದ ಇದ್ದಾರಾ, ಭಯದಿಂದ ಇದ್ದಾರೆ. ಸಿಎಂ ಕರಾವಳಿಯಲ್ಲಿ ಮುಸ್ಲಿಂ ಮನೆಗೆ ಯಾಕೆ ಹೋಗಿಲ್ಲ. 6.5 ಕೋಟಿ ಜನರನ್ನ ಪ್ರತಿನಿಧಿಸುವ ಸಿಎಂ, ಮುಸ್ಲಿಂ ಮನೆಗೆ ಏಕೆ ಹೋಗಿಲ್ಲ. ಪ್ರವೀಣ್ ಗೆ ಕೊಟ್ಟದ್ದು ನಿಮ್ಮ ಮನೆ ದುಡ್ಡಾ?, ಸರ್ಕಾರ ದುಡ್ಡು ಜನರ ತೆರಿಗೆ ದುಡ್ಡು ಪ್ರಜಾಪ್ರಭುತ್ವ, ಜನರ ಸರ್ಕಾರ, ಸರ್ಕಾರ ಸತ್ತೋಗಿದೆ ಎಂದು ಕಿಡಿಕಾರಿದರು.

Live Tv

Leave a Reply

Your email address will not be published.

Back to top button