ನವದೆಹಲಿ: ನಾಲ್ವರು ಕಾಂಗ್ರೆಸ್ ಲೋಕಸಭಾ ಸದಸ್ಯರ ಅಮಾನತನ್ನು ಸ್ಪೀಕರ್ ಓಂ ಬಿರ್ಲಾ ರದ್ದುಗೊಳಿಸಿದ್ದಾರೆ.
ಜುಲೈ 25ರಂದು ಸಂಸತ್ತಿನಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಠಾಗೋರ್, ರಮ್ಯಾ ಹರಿದಾಸ್, ಜೋತಿಮಣಿ ಮತ್ತು ಟಿಎನ್ ಪ್ರತಾಪನ್ ಅವರನ್ನು ಅಮಾನತುಗೊಳಿಸಲಾಗಿತ್ತು.
Advertisement
Advertisement
ಆದರೆ ಇಂದು ಬಿರ್ಲಾ ಅವರು ಸದನ ಮುಂದುವರಿಯುವ ಮೊದಲು ನಾಯಕರ ಸರ್ವಪಕ್ಷ ಸಭೆಯನ್ನು ಕರೆದಿದ್ದು, ಈ ಸಂದರ್ಭದಲ್ಲಿ ನಾಲ್ವರು ಕಾಂಗ್ರೆಸ್ ಸಂಸದರ ಅಮಾನತನ್ನು ಹಿಂಪಡೆದಿದ್ದಾರೆ.
Advertisement
ಈ ವೇಳೆ ಮಾತನಾಡಿದ ಬಿರ್ಲಾ ಅವರು, ಸಂಸತ್ತು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಇಲ್ಲಿನ ಸಂಸದೀಯ ಸಂಪ್ರದಾಯ ಹಾಗೂ ಘನತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಆದರೆ ಸದನದಲ್ಲಿನ ಘಟನೆಗಳಿಂದ ಎಲ್ಲರಿಗೂ ನೋವಾಗಿದೆ. ನನಗೂ ನೋವಾಗಿದೆ. ಮುಂದೆ ಈ ರೀತಿಯ ಘಟನೆ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
Advertisement
ಸಂಸತ್ತು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಇಲ್ಲಿನ ಸಂಸದೀಯ ಸಂಪ್ರದಾಯದ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ಈ ಘನತೆ ಮತ್ತು ಸಭ್ಯತೆಯನ್ನು ಕಾಪಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಸದನದಲ್ಲಿ ಮತ್ತೊಮ್ಮೆ ಫಲಕಗಳನ್ನು ಪ್ರದರ್ಶಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇದನ್ನೂ ಓದಿ: ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಜೆಡಿಎಸ್ ನಾಯಕರ ಕಣ್ಣೀರಿನ ಮಳೆ ತಪ್ಪದು: ಬಿಜೆಪಿ
ಸಂಸತ್ತಿನಲ್ಲಿ ವಿಷಯಗಳನ್ನು ಒಪ್ಪಬಹುದು ಮತ್ತು ಒಪ್ಪದೇ ಇರಬಹುದು. ಆದರೆ ನಾವು ಸದನದ ಘನತೆ ಕಾಪಾಡಬೇಕು. ಎಲ್ಲಾ ಪಕ್ಷಗಳ ನಾಯಕರು ಮತ್ತು ಸದಸ್ಯರು ಸದನವನ್ನು ನಡೆಸಬೇಕೆಂದು ಬಯಸುತ್ತಾರೆ. ಸದನ ನಡೆದರೆ ಎಲ್ಲರಿಗೂ ಸಾಕಷ್ಟು ಸಮಯ ಮತ್ತು ಅವಕಾಶ ನೀಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ- ಪರಾರಿಯಾಗುವ ರಸ್ತೆ ಮಾರ್ಗ ಬದಲಿಸಲು ಹೇಳಿರುವ ರೌಡಿ ಸುಹಾಸ್