ಬೆಂಗಳೂರು: ಚುನಾವಣೆಯಲ್ಲಿ (Karnataka Election) ಜನತೆಗೆ ನೀಡಿದ ಕಾಂಗ್ರೆಸ್ ಗ್ಯಾರಂಟಿ (Congress Guarantee Scheme) ಭರವಸೆಗಳಿಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರಿಂದ ಈಗ ಗೊಂದಲ ಉಂಟಾಗಿದೆ.
ಚುನಾವಣಾ ಪ್ರಚಾರ ಸಮಯದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ ಇದನ್ನು ಜಾರಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಶನಿವಾರ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ ನಡೆದಿದ್ದು ಕೇವಲ ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ. ಈ ಕಾರಣಕ್ಕೆ ಈ ಗ್ಯಾರಂಟಿ ಯೋಜನೆ ಯಾವಾಗ ಜಾರಿಯಾಗಬಹುದು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಸೋನಿಯಾ, ರಾಹುಲ್‍ರಿಂದ ರಾಜ್ಯ ನಾಯಕರಿಗೆ ಖಡಕ್ ಸಂದೇಶ
Advertisement
Advertisement
ಈ ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ಜನರ ಗಮನ ಸೆಳೆದಿದ್ದು ʼಗೃಹಜ್ಯೋತಿʼ ಘೋಷಣೆ. ಜೂನ್ ತಿಂಗಳಿನಿಂದ ಯಾರೂ ಕರೆಂಟ್ ಬಿಲ್ (Electricity Tariff) ಕಟ್ಟಬೇಕಿಲ್ಲ ಎಂದು ಕೈ ನಾಯಕರು ಆಶ್ವಾಸನೆ ನೀಡಿದ್ದರು. ಈ ಕಾರಣಕ್ಕೆ ಜನ ಈಗ ವಿದ್ಯುತ್ ಬಿಲ್ ಕಟ್ಟಬೇಕಾ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಗ್ರಾಮೀಣ ಭಾಗದ ಜನತೆ ತಿಳಿಸುತ್ತಿದ್ದಾರೆ.
Advertisement
Advertisement
ಬೆಸ್ಕಾಂ ಹೇಳೋದು ಏನು?
ನಮಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯಾವುದೇ ಆದೇಶ ಬಂದಿಲ್ಲ. ಸಾರ್ವಜನಿಕರಿಗೆ ಮನವೊಲಿಸಿ ಬಿಲ್ ಕಟ್ಟಿಸಿಕೊಳ್ಳುತ್ತಿದ್ದೇವೆ. ಸರ್ಕಾರದ ಆದೇಶ ಯಾವ ರೀತಿ ಇರಲಿದೆ ಎಂಬದುನ್ನು ನೋಡಬೇಕಿದೆ. ಆದೇಶ ಅಧಿಕೃತವಾಗಿ ಜಾರಿಯಾಗುವವರೆಗೂ ಯಾರೂ ಸಹ ಬಿಲ್ ಕಟ್ಟದೇ ಇರುವಂತಿಲ್ಲ ಎಂದು ಪಬ್ಲಿಕ್ ಟಿವಿಗೆ ಬೆಸ್ಕಾಂ (BESCOM) ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಮುಖ 6 ಖಾತೆಗಾಗಿ ಸಚಿವರ ಮಧ್ಯೆ ಪೈಪೋಟಿ
ವಿದ್ಯುತ್ ಬಳಕೆ ಹೆಚ್ಚಳ ಸಾಧ್ಯತೆ:
ಗ್ರಾಮೀಣ ಭಾಗದಲ್ಲಿ ಸರಾಸರಿ ಪ್ರತಿ ಮನೆಯಲ್ಲಿ ತಿಂಗಳಿಗೆ 60 ರಿಂದ 100 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. 200ಕ್ಕೂ ಅಧಿಕ ಯೂನಿಟ್ ವಿದ್ಯುತ್ ಬಳಕೆ ಮಾಡುವವರ ಸಂಖ್ಯೆ ಬಹಳ ವಿರಳ.
ಈಗ 200 ಯೂನಿಟ್ ಉಚಿತ ವಿದ್ಯುತ್ ನೀಡುವುದರಿಂದ ಬಳಕೆ ಮತ್ತಷ್ಟು ಹೆಚ್ಚಾಗಲಿದೆ ಜೊತೆಗೆ ಬೇಕಾಬಿಟ್ಟಿ ಬಳಕೆಯಾಗುವ ಅಪಾಯವೂ ಇದೆ. ಈಗಿನ ಲೆಕ್ಕದಲ್ಲಿ ವಿದ್ಯುತ್ ಶುಲ್ಕ ಅಂದಾಜು 1,600 ರೂ.ಗಿಂತಲೂ ಹೆಚ್ಚು ಬರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಈಗ ಬಳಕೆಯಾಗುತ್ತಿರುವ ವಿದ್ಯುತ್ ಪ್ರಮಾಣವನ್ನು ಮಾನದಂಡವಾಗಿಸಿ ಈ ಯೋಜನೆಗೆ ಎಷ್ಟು ಹಣ ಬೇಕಾಗಬಹುದು ಎಂಬದುನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಸರ್ಕಾರದ ಬೊಕ್ಕಸದಿಂದ ಮತ್ತಷ್ಟು ಹಣವನ್ನು ಈ ಯೋಜನೆಗೆ ಮೀಸಲಿಡಬೇಕಾಗುತ್ತದೆ.