ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಶ್ರೀಮಂತ ದೇಗುಲಗಳಲ್ಲಿ ಬನಶಂಕರಿ ದೇವಾಲಯ ಕೂಡ ಒಂದಾಗಿದೆ. ಇದೀಗ ಬನಶಂಕರಿ ದೇಗುಲದಲ್ಲಿ ಆಂತರಿಕ ಕಲಹ ಎದ್ದಿದೆ. ದೇವಿಯ ಅಭಿಷೇಕಕ್ಕೆ ಭಕ್ತರು ತಂದ ಹಾಲು ಹೂವಿನ ಹಾರ ನಿಂಬೆಹಣ್ಣು ದೇವಿಗೆ ಸಮರ್ಪಣೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
Advertisement
ಬನಶಂಕರಿ ದೇಗುಲದ ಅಂಗಳದಲ್ಲಿ ದೇವಿಗಾಗಿ ಭಕ್ತರು ತಂದಿದ್ದ ಹೂವಿನ ದೊಡ್ಡ ದೊಡ್ಡ ಹಾರ, ಜೊತೆಗೆ ನಿಂಬೆಹಣ್ಣಿನ ಹಾರ ಹೀಗೆ ಎಲ್ಲವನ್ನು ಹೆಗಲ ಮೇಲೆ ಹೊತ್ತೊಯ್ದು ಚಾಲಕನೋರ್ವ ಕಾರಿನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಮತ್ತೊಂದೆಡೆ ದೇವಿಗಾಗಿ ತಂದ ಹಾಲು ಕೂಡ ಸಾಗಾಟ ಮಾಡಲಾಗುತ್ತಿದೆ. ಜೊತೆಗೆ ಸೆಕ್ಯೂರಿಟಿಗಳ ಸಹಾಯದಿಂದ ಅರ್ಚಕರು ದೇವಿಗೆ ಭಕ್ತರು ಅರ್ಪಿಸಿದ ಹೂವಿನ ಹಾರ ಮಡಿಲಕ್ಕಿ, ಸೀರೆಯನ್ನು ಕದ್ದು ಮನೆಗೆ ಸಾಗಿಸುತ್ತಾರೆ ಎಂದು ಧಾರ್ಮಿಕ ಪರಿಷತ್ ಸದಸ್ಯ ವೆಂಕಟೇಶ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಮುಜರಾಯಿ ಇಲಾಖೆ ಹಾಗೂ ಡಿಸಿಗೆ ಕೂಡ ದೂರು ನೀಡಲಾಗಿದೆ. ಇದನ್ನೂ ಓದಿ: ಏಕೆ ಗುರಾಯಿಸ್ತಿದ್ಯಾ ಅಂದಿದ್ದಕ್ಕೆ ಯುವಕನಿಗೆ ಚಾಕು ಇರಿತ
Advertisement
Advertisement
ಈ ರೀತಿ ಸಾಗಾಟದ ದೃಶ್ಯವನ್ನು ಕೂಡ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಇನ್ನು ಸಾಕಷ್ಟು ದಿನದಿಂದ ಈ ರೀತಿ ದೇವಿಗೆ ಭಕ್ತರು ಅರ್ಪಿಸಿದ ವಸ್ತುಗಳನ್ನು ದುರುಪಯೋಗವಾಗುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಹೂಡಿಕೆ ಉತ್ತೇಜನಕ್ಕೆ ಭಾರತೀಯ ಹೂಡಿಕೆದಾರರಿಗೆ ವೀಸಾ ನೀಡಿದ ಶ್ರೀಲಂಕಾ