ತುಮಕೂರು: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಯಾನ್ಸರ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು. ಆರೋಗ್ಯ ಸಚಿವ ಡಾ.ಸುಧಾಕರ್, ಸಚಿವರುಗಳಾದ ಮಾಧುಸ್ವಾಮಿ, ಬಿ.ಸಿ.ನಾಗೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಇದೇ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಕೋವಿಡ್ ವೇಳೆಯಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ನಿರ್ವಹಿಸಿದೆ. ಪ್ರಾಣದ ಹಂಗು ತೊರೆದು ವೈದ್ಯರು, ನರ್ಸ್‍ಗಳು ಕೆಲಸ ಮಾಡಿದ್ದಾರೆ. ಒಂದೇ ವರ್ಷದಲ್ಲಿ 40 ಸಾವಿರ ಬೆಡ್‍ಗಳು ಮತ್ತು 4 ಸಾವಿರ ಐಸಿಯು ಬೆಡ್‍ಗಳನ್ನು ಒದಗಿಸಿಕೊಟ್ಟು ಜನರ ಜೀವ ಕಾಪಾಡಿದ ಕೀರ್ತಿ ರಾಜ್ಯ ಸರ್ಕಾರಕ್ಕಿದೆ ಎಂದರು. ಇದನ್ನೂ ಓದಿ: ಉಡುಪಿಯಲ್ಲಿ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಉದ್ಘಾಟನೆ
Advertisement
ಈ ರೀತಿ ಸಮರೋಪಾದಿಯಲ್ಲಿ ಕೆಲಸ ನಡೆದರೂ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆಯಿಂದ ಜೊತೆಯಾಗಿ ಕೆಲಸ ಮಾಡಬೇಕಾದವರು ಸರ್ಕಾರವನ್ನು ಟೀಕೆ ಮಾಡುತ್ತಾರೆ. ಟೀಕೆ ಮಾಡುವುದನ್ನೇ ಕೆಲಸ ಎಂದುಕೊಂಡಿದ್ದಾರೆ ಎಂದು ಪರೋಕ್ಷವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ
Advertisement
ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಭಾನುವಾರವೂ ವ್ಯಾಕ್ಸಿನ್ ಕೊಡಬೇಕು ಎಂಬ ಮನವಿ ಇದೆ. ಜನರು ಭಾನುವಾರ ಮನೆಯಲ್ಲಿ ಇರೋದರಿಂದ ಅವರಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು. ಚಾಣಕ್ಯ ವಿವಿಗೆ ಜಾಗ ಮಂಜೂರು ವಿಚಾರಕ್ಕೆ ಪ್ರತಿಕ್ರಿಸಿದ ಸಿಎಂ, ವಿವಿಗೆ ಜಾಗ ಮಂಜೂರು ಮಾಡಿದನ್ನು ವಿರೋಧಿಸುವ ಕಾಂಗ್ರೆಸ್ ತಮ್ಮ ಕಾಲದಲ್ಲಿ ಯಾರಿಗೆಲ್ಲ ಜಮೀನು ಮಂಜೂರು ಮಾಡಿದೆ ಎಂಬ ವಿವರ ನಮ್ಮಲ್ಲಿ ಕೂಡ ಇದೆ. ನಾವು ಕೂಡ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.