– ಪುರುಷರ ಬಟ್ಟೆ ಧರಿಸಿ ಬಂದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಕಂಡಕ್ಟರ್ ಪರದಾಟ
ಯಾದಗಿರಿ: ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು ಬಸ್ ಕಂಡಕ್ಟರ್ (Conductor) ಪರದಾಡಿರುವ ಘಟನೆ ಯಾದಗಿರಿ (Yadgiri) ಜಿಲ್ಲೆಯಲ್ಲಿ ನಡೆದಿದೆ.
Advertisement
ಜಿಲ್ಲೆಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದ ತೃತೀಯ ಲಿಂಗಿ ಲಕ್ಷ್ಮೀ ರಾಯಚೂರಿನಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್ನಲ್ಲಿ (Bus) ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಕ್ಷ್ಮೀ ಫ್ರೀ ಟಿಕೆಟ್ ಕೇಳಿದಾಗ ಕಂಡಕ್ಟರ್ ಕಕ್ಕಾಬಿಕ್ಕಿಯಾಗಿದ್ದಾರೆ.
Advertisement
Advertisement
ಆಧಾರ್ ಕಾರ್ಡ್ನಲ್ಲಿ ಲಕ್ಷ್ಮೀ ಎಂಬ ಹೆಸರಿದ್ರೂ ಲಿಂಗದ ಜಾಗದಲ್ಲಿ ಪುರುಷ ಎಂದು ಉಲ್ಲೇಖಿಸಲಾಗಿತ್ತು. ಅದರ ಜೊತೆಗೆ ಲಕ್ಷ್ಮೀ ಪುರುಷರ ಬಟ್ಟೆ ಹಾಕಿದ್ದರಿಂದ ಕಂಡಕ್ಟರ್ ಕಂಪ್ಲೀಟ್ ಕನ್ಪ್ಯೂಸ್ ಆಗಿದ್ದರು. ಇದನ್ನೂ ಓದಿ: ಸಾರಿಗೆ ಇಲಾಖೆಯಲ್ಲಿ ಸಂಚರಿಸ್ತಿವೆಯಾ ನಿರುಪಯುಕ್ತ ಬಸ್ಗಳು? – ಸಾರಿಗೆ ಅಧಿಕಾರಿಯಿಂದಲೇ ಹೊರಬಿತ್ತು ಸತ್ಯ
Advertisement
ಹೆಸರು ಲಕ್ಷ್ಮೀ, ಲಿಂಗ ಪುರುಷ ಇದೇನಿದು ಎಂದು ಪ್ರಶ್ನಿಸಿದ ಕಂಡಕ್ಟರ್ಗೆ ಸಿಕ್ಕ ಉತ್ತರ ತೃತೀಯ ಲಿಂಗಿ ಎನ್ನೋದು. ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳಲ್ಲ. ಯಾವಾಗಲೂ ಪುರುಷರ ಬಟ್ಟೆನೇ ಧರಿಸುತ್ತೇನೆ ಎಂದು ಹೇಳಿದ್ದು, ಕೊನೆಗೂ ಮನವರಿಕೆ ಮಾಡಿಕೊಂಡ ಕಂಡಕ್ಟರ್ ಶಕ್ತಿ ಯೋಜನೆಯಡಿ (Shakti scheme) ಫ್ರೀ ಟಿಕೆಟ್ ಕೊಟ್ಟು ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮಿರ್ಚಿ ಬಜ್ಜಿ ತಿನ್ನೋದಕ್ಕೆ ಅಂಬುಲೆನ್ಸ್ ಸೈರನ್ ದುರುಪಯೋಗ – ಎಮರ್ಜೆನ್ಸಿ ಅಂತ ಟ್ರಾಫಿಕ್ ಕ್ಲಿಯರ್ ಮಾಡಿದ್ದ ಪೊಲೀಸರೇ ಶಾಕ್!
Web Stories