ಹಾಸನ: ಕ್ಷುಲ್ಲಕ ಕಾರಣಕ್ಕೆ ಕಂಡಕ್ಟರ್ (Conductor) ಮೇಲೆ ಮಹಿಳೆಯರು ಹಲ್ಲೆ ಮಾಡಿ ಮೊಬೈಲ್ (Mobile) ಒಡೆದು ಹಾಕಿರುವ ಘಟನೆ ಹಾಸನ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ (Bus Stop) ಮಂಗಳವಾರ ರಾತ್ರಿ ನಡೆದಿದೆ.
ಹಾಸನದಿಂದ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಬಸ್ ಪ್ರಯಾಣಿಕರಿಂದ ಸಂಪೂರ್ಣ ಭರ್ತಿಯಾಗಿದ್ದರೂ ಮೂವರು ಮಹಿಳೆಯರು ಬಸ್ ಹತ್ತಿದ್ದಾರೆ. ಈ ವೇಳೆ ನಿರ್ವಾಹಕ ಸೀಟ್ ಇಲ್ಲ, ಯಾರಾದರೂ ಇಳಿಯುವವರಿದ್ದರೆ ಬಸ್ ನಿಲ್ದಾಣದಲ್ಲಿ ಇಳಿಯಿರಿ ಎಂದಿದ್ದಾರೆ. ಬಸ್ ಹೊರಟ ನಂತರ ಮೂವರು ಅನ್ಯಕೋಮಿನ ಮಹಿಳೆಯರು ಬಸ್ ನಿಲ್ಲಿಸಿ ಇಳಿಯುತ್ತೇವೆ ಎಂದಿದ್ದಾರೆ. ಅದಕ್ಕೆ ಕಂಡಕ್ಟರ್ ನಾನು ಅಲ್ಲಿಯೇ ಹೇಳಿದೆ. ಹೀಗೇಕೆ ಮಾಡುತ್ತೀರಿ ಮುಂದೆ ನಿಲ್ಲಿಸುತ್ತೇನೆ ಅಲ್ಲಿ ಇಳಿಯಿರಿ ಎಂದು ನಿರ್ವಾಹಕ ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ತುಮಕೂರಿನಿಂದ ಅಯೋಧ್ಯಾಧಾಮ್‌ಗೆ ಹೊರಟ ವಿಶೇಷ ರೈಲು
Advertisement
Advertisement
ಮನವಿಗೆ ಸ್ಪಂದಿಸದ ಮಹಿಳೆಯರು ಮಾತ್ರ ಚಲಿಸುತ್ತಿದ್ದ ಬಸ್‌ನಿಂದಲೇ ಇಳಿಯುವ ಪ್ರಯತ್ನ ಮಾಡಿದಾಗ ಚಾಲಕ ಬಸ್ ನಿಲ್ಲಿಸಿದ್ದಾರೆ. ಇದರಿಂದ ಕೆರಳಿದ ಮಹಿಳೆಯರು ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಇದನ್ನು ಮೊಬೈಲ್‌ನಲ್ಲಿ ನಿರ್ವಾಹಕ ವಿಡಿಯೋ ಮಾಡಿದ್ದಾರೆ. ಈ ವೇಳೆ ಮೊಬೈಲ್ ಕಸಿದುಕೊಂಡು ಅದನ್ನು ಸಹ ಮಹಿಳೆಯರು ಒಡೆದುಹಾಕಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ದೇಗುಲ ದಂಗಲ್ – ಬಹುಮನಿ ಕೋಟೆಯಲ್ಲಿ ಸೋಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಆಗ್ರಹ
Advertisement
Advertisement
ಈ ವೇಳೆ ಮೂವರು ಅನ್ಯಕೋಮಿನ ಮಹಿಳೆಯರು ಮತ್ತು ಬಸ್ ಚಾಲಕ, ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ನಿರ್ವಾಹಕ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೂವರು ಮಹಿಳೆಯರ ವರ್ತನೆ ಬಗ್ಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ನಿರ್ವಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ ಮೊಬೈಲ್ ಕೊಡಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಸ್ಮೆಟಿಕ್ ಸರ್ಜರಿಗೆ ಬಂದವಳಿಂದ ಲೂಟಿ – ವೈದ್ಯನಿಗೆ 6 ಕೋಟಿ ಪಂಗನಾಮ
ಕಂಡಕ್ಟರ್ ಘಟನೆ ಕುರಿತು ದೂರು ಕೊಡಲು ಮುಂದಾಗಿದ್ದು, ಅನ್ಯಕೋಮಿನ ಮಹಿಳೆಯ ಪತಿ ಸ್ಥಳಕ್ಕೆ ಆಗಮಿಸಿ ನಿರ್ವಾಹಕನಲ್ಲಿ ಕ್ಷಮೆಯಾಚಿಸಿದ್ದಾರೆ. ಬಳಿಕ ಹೊಸ ಮೊಬೈಲ್ ಕೊಡಿಸಿ ಪೊಲೀಸ್ ಠಾಣೆಗೆ ದೂರು ನೀಡದಂತೆ ಮನವಿ ಮಾಡಿಕೊಂಡಿದ್ದಾರೆ. ನಂತರ ಕಂಡಕ್ಟರ್ ಪೊಲೀಸ್ ಠಾಣೆಗೆ ದೂರು ನೀಡದೇ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿಕೊಂಡು ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?