ಬೆಂಗಳೂರು: ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ.
ಟ್ವಿಟರ್ ನಲ್ಲಿ ಸಂತಾಪ ಸೂಚಿಸಿ, ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಗೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
Advertisement
ಶಾಸಕ ರೇಣುಕಾಚಾರ್ಯ ಅವರ ಸೋದರನ ಮಗನ ಸಾವಿನ ಸುದ್ದಿ ಕೇಳಿ ಆಘಾತವಾಯಿತು.
ಮೃತ ಚಂದ್ರಶೇಖರ್ ಅವರ ತಂದೆ-ತಾಯಿ ಮತ್ತು ಸಂಬಂಧಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಅನುಮಾನಾಸ್ಪದವಾಗಿ ಕಾಣುತ್ತಿರುವ ಈ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ.
— Siddaramaiah (@siddaramaiah) November 4, 2022
Advertisement
ಈ ಸಂಬಂಧ ಟ್ವೀಟ್ ಮಾಡಿದ ಅವರು, ಶಾಸಕ ರೇಣುಕಾಚಾರ್ಯ ಅವರ ಸೋದರನ ಮಗನ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಮೃತ ಚಂದ್ರಶೇಖರ್ ಅವರ ತಂದೆ-ತಾಯಿ ಮತ್ತು ಸಂಬಂಧಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅನುಮಾನಾಸ್ಪದವಾಗಿ ಕಾಣುತ್ತಿರುವ ಈ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗ ಗೌರಿಗದ್ದೆಗೆ ಹೋಗಿದ್ದು ನನಗೆ ಗೊತ್ತಿರಲಿಲ್ಲ: ಮೃತ ಚಂದ್ರಶೇಖರ್ ತಾಯಿ
Advertisement
Advertisement
ಕಳೆದ ಭಾನುವಾರದಿಂದ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ನಾಪತ್ತೆಯಾಗಿದ್ದರು. ಆ ಬಳಿಕದಿಂದ ಎಲ್ಲಾ ಕಡೆ ಚಂದ್ರುಗಾಗಿ ಹುಡುಕಾಟ ನಡೆಸಲಾಯಿತು. ಐದು ದಿನದ ಹಿಂದೆ ನಾಪತ್ತೆಯಾಗಿದ್ದ ಚಂದ್ರಶೇಖರ್ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ಮಧ್ಯಾಹ್ನದವರೆಗೂ ಚಂದ್ರು ಅವರನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ
ಆದರೆ ಹೊನ್ನಾಳಿ ಮತ್ತು ನ್ಯಾಮತಿ ಮಾರ್ಗಮಧ್ಯೆ ಬರುವ ಸೊರಟೂರಿನ ತುಂಗಭದ್ರಾ ನದಿಯ ಕಾಲುವೆಯಲ್ಲಿ ಕಾರೊಂದು ಇದೆ ಎಂಬ ಸುದ್ದಿ ಇಡೀ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು. ಕಾಲುವೆ ಮೇಲ್ಭಾಗದಲ್ಲಿ ಕಾರೊಂದರ ಬಿಡಿಭಾಗಳು ಪತ್ತೆ ಆಗಿದ್ದವು. ನುರಿತ ಈಜುಪಟುಗಳು ಮತ್ತು ಅಗ್ನಿಶಾಮಕ ಪಡೆ ಸಿಬ್ಬಂದಿ ಕಾರ್ಯಾರಚಣೆ ನಡೆಸಿ, ಕಾರನ್ನು ಮೇಲಕ್ಕೆ ಎತ್ತಿದರು. ಕಾರಿನಲ್ಲಿ ಚಂದ್ರಶೇಖರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.