ನವದೆಹಲಿ: ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಅವಿವಾಹಿತ ಮಹಿಳೆಯರು ಮತ್ತು ಸೆಕ್ಸ್ ವರ್ಕರ್ ಗಳಲ್ಲಿ ಕಾಂಡೋಮ್ ಬಳಕೆ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕೈಗೊಂಡ ಅಧ್ಯಯನ ಸಮೀಕ್ಷೆ ತಿಳಿಸಿದೆ.
2015-16ರಲ್ಲಿ ಆರೋಗ್ಯ ಸಚಿವಾಲಯ ಅಧ್ಯಯನ ನಡೆಸಿದ್ದು, 10 ವರ್ಷಗಳಲ್ಲಿ ಅವಿವಾಹಿತ ಮಹಿಳೆ ಮತ್ತು ಸೆಕ್ಸ್ ವರ್ಕರ್ ಗಳಲ್ಲಿ ಶೇ.2 ರಿಂದ ಶೇ.12 ರಷ್ಟು ಕಾಂಡೋಮ್ ಬಳಕೆ ಹೆಚ್ಚಾಗಿದೆ. ಒಟ್ಟಾರೆಯಾಗಿ ಕಾಂಡೋಮ್ ಬಳಕೆಯ ಜಾಗೃತಿಯಿಂದಾಗಿ ಒಂದು ದಶಕದಲ್ಲಿ ಆರು ಪಟ್ಟರಷ್ಟು ಹೆಚ್ಚಾಗಿದ್ದು, 15 ರಿಂದ 49 ವಯಸ್ಸಿನ ಅವಿವಾಹಿತ ಮಹಿಳೆಯರು ಕಾಂಡೋಮ್ ಬಳಸುತ್ತಾರೆ. ಇದರಲ್ಲಿಯೂ 20 ರಿಂದ 24 ವಯಸ್ಸಿನ ಯುವತಿಯರಲ್ಲಿ ಕಾಂಡೋಮ್ ಬಳಕೆಯ ಪ್ರಮಾಣ ಹೆಚ್ಚಾಗಿದೆ ಎನ್ನುವ ಅಂಶ ಪ್ರಕಟವಾಗಿದೆ.
Advertisement
ಸಮೀಕ್ಷೆಯಲ್ಲಿ 8 ಪುರುಷರಲ್ಲಿ ಮೂವರು ಸುರಕ್ಷಿತ ಲೈಂಗಿಕತೆ ಗೆ ಆಸಕ್ತಿ ತೋರಿಸುತ್ತಾರೆ. ಇನ್ನು ಮಹಿಳೆಯರು ತಮ್ಮ ಪ್ರೊಫೆಶನಲ್ ಲೈಫ್ ಗಾಗಿ ಗರ್ಭ ನಿರೋಧಕ ಸಾಧನಗಳನ್ನು ಬಳಸಿಕೊಳ್ಳಲು ಮುಂದಾಗುತ್ತಿದ್ದಾರೆ. ಗರ್ಭ ನಿರೋಧಕ ಸಾಧನಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ದೇಶದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದೆ.
Advertisement
Advertisement
Advertisement
ದೇಶದ ಶೇ.99ರಷ್ಟು ಮಹಿಳೆಯರು ಮತ್ತು 15 ರಿಂದ 49 ವಯಸ್ಸಿನ ಪುರುಷರು ಯಾವುದೋ ಒಂದು ಮಾದರಿಯ ಗರ್ಭ ನಿರೋಧಕ ಸಾಧನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವಿವಾಹಿತ ಮಹಿಳೆ ಹಾಗು 15ರಿಂದ 49 ವಯಸ್ಸಿನ ಮಹಿಳೆಯರ ಗರ್ಭನಿರೋಧಕ ಪ್ರಮಾಣ ಶೇ.54 ಹೊಂದಿದೆ. ಆದ್ರೆ ಶೇ.10 ರಷ್ಟು ಮಹಿಳೆಯರು ಮಾತ್ರ ಆಧುನಿಕ ಲೈಂಗಿಕ ಸುರಕ್ಷಾ ವಿಧಾನ (ಕಾಂಡೋಮ್, ಮಾತ್ರೆ, ಡಯಾಫ್ರಾಗಮ್, ಐಯುಡಿ) ಗಳನ್ನು ಬಳಸುತ್ತಿದ್ದು ಹೆಚ್ಚಿನ ಸಂಖ್ಯೆಯ ಮಹಿಳೆಯರು ಹಳೆಯ ಅಥವಾ ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಕಾಂಡೋಮ್ ಪರಿಣಾಮ: ಶೇ.61ರಷ್ಟು ಪುರಷರು ಸರಿಯಾದ ರೀತಿಯಲ್ಲಿ ಕಾಂಡೋಮ್ ಬಳಕೆ ಮಾಡುತ್ತಿರುವುದಾಗಿ ಎಂದು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಕಾಂಡೋಮ್ ಬಳಕೆ ಜನನ ಪ್ರಮಾಣ ತಗ್ಗಿಸಲು ಅತ್ಯಂತ ಸಹಕಾರಿಯಾಗಿದೆ. ಶೇ.25 ರಷ್ಟು ಪುರುಷರು ಕೆಲವೊಂದು ಸಮಯದಲ್ಲಿ ಸರಿ ವಿಧಾನದಲ್ಲಿ ಕಾಂಡೋಮ್ ಬಳಸುವುದರಿಂದ ಜನನ ಪ್ರಮಾಣ ನಿಯಂತ್ರಿಸಲು ಸಾಧ್ಯವಾಗುತ್ತದೆ ಅಂತಾ ಒಪ್ಪಿಕೊಂಡಿದ್ದಾರೆ.
ಅತಿಹೆಚ್ಚು, ಕಡಿಮೆ ಎಲ್ಲಿ?
ಮಣಿಪುರ, ಬಿಹಾರ ಮತ್ತು ಮೇಘಾಲಯ ರಾಜ್ಯಗಳಲ್ಲಿ ಶೇ.24 ರಷ್ಟು ಜನರು ಮಾತ್ರ ಗರ್ಭ ನಿರೋಧಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಶೇ.76 ರಷ್ಟು ಜನ ಗರ್ಭ ನಿರೋಧಕ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ದೇಶದಲ್ಲಿಯೇ ಪಂಜಾಬ್ ಮೊದಲ ಸ್ಥಾನದಲ್ಲಿದೆ. ಇನ್ನೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಕ್ಷದ್ವೀಪ (ಶೇ.30) ಕಡಿಮೆ ಜನ ಕಾಂಡೋಮ್ ಬಳಸಿದರೆ, ಚಂಡೀಗಢದಲ್ಲಿ ಶೇ.74ರಷ್ಟು ಜನ ಬಳಸುತ್ತಿದ್ದಾರೆ.
ಮದುವೆಯಾದ ಮೂರರಲ್ಲಿ ಇಬ್ಬರು ಮಹಿಳೆಯರು ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಳ್ಳಲು ಇಚ್ಚಿಸುತ್ತಾರೆ. ಶೇ.11 ರಷ್ಟು ಮಹಿಳೆಯರು ಜನನ ಪ್ರಮಾಣದಲ್ಲಿ ಅಂತರವನ್ನು ಕಾಯ್ದುಕೊಳ್ಳುತ್ತಿದ್ದರೆ, ಶೇ.55 ರಷ್ಟು ಮಹಿಳೆಯರು ಜನನ ಮಿತಿಯನ್ನು ನಿಯಂತ್ರಿಸಬೇಕೆಂದು ಇಷ್ಟಪಡುತ್ತಿದ್ದಾರೆ. ನವ ವಿವಾಹಿತ ಮಹಿಳೆಯರಲ್ಲಿ ಗರ್ಭ ನಿರೋಧಕ ವಿಧಾನಗಳ ಬಳಕೆ ಜಾಗೃತಿ ಹೆಚ್ಚಾಗುತ್ತಿದ್ದು, ಬಳಕೆಯ ಪ್ರಮಾಣವು ಶೇ.54 ರಿಂದ ಶೇ.66 ರಷ್ಟು ಏರಿಕೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-4) ಈ ಬಾರಿ ಜನಸಂಖ್ಯಾ ವಿಜ್ಞಾನದ ಅಂತರರಾಷ್ಟ್ರೀಯ ಸಂಸ್ಥೆ ಜಂಟಿಯಾಗಿ ಈ ಸರ್ವೆಯನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ 6,01,509 ಮನೆಗಳನ್ನು ಸಂದರ್ಶಿಸಿ ಅಂಕಿ ಅಂಶಗಳನ್ನು ಸಿದ್ಧಪಡಿಸಿದ್ದು, ಶೇ.98 ರಷ್ಟು ಜನರು ಪೂರಕವಾದ ಉತ್ತರಗಳನ್ನು ನೀಡಿದ್ದಾರೆ.
https://www.youtube.com/watch?v=xZ8FspbauWY