ನವದೆಹಲಿ: ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ಜನರಲ್ಲಿ ಬಲವಾದ ಜಾಗೃತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ ಗಾತ್ರ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ಜಾಗತಿಕ ತಂತ್ರಜ್ಞಾನ ಸಂಸ್ಥೆಯೊಂದು ತಿಳಿಸಿದೆ.
ಮಾಹಿತಿಗಳ ಪ್ರಕಾರ 2025ರ ವೇಳೆಗೆ ಕಾಂಡೋಮ್ ಮಾರುಕಟ್ಟೆ $3.70 ಶತಕೋಟಿಗಳಷ್ಟು ವಿಸ್ತಾರಗೊಳ್ಳಲಿದೆ. ಸುಮಾರು ಶೇ.44 ರಷ್ಟು ಬೆಳವಣಿಗೆ ಏಷ್ಯಾ ಫೆಸಿಫಿಕ್‍ನಿಂದ ಹುಟ್ಟಿಕೊಂಡಿದ್ದು, ಚೀನಾ, ಭಾರತ, ಜಪಾನ್ ಪ್ರಮುಖ ಮಾರುಕಟ್ಟೆಗಳಾಗಿದೆ. ಇದನ್ನೂ ಓದಿ: ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೇಟು
ಲೈಂಗಿಕ ರೋಗಗಳ ಬಗ್ಗೆ ಜಾಗೃತಿ ಮೂಡುತ್ತಿರುವುದು, ಹತ್ತಾರು ಕಂಪನಿಗಳ ಮಾರಾಟ, ಆಕಾರ, ಗಾತ್ರ, ಬಣ್ಣ ಮತ್ತು ಫ್ಲೇವರ್‌ಗಳ ವೈಶಿಷ್ಟ್ಯಗಳು ಹಾಗೂ ಜನರಿಗೆ ವೈಯಕ್ತಿಕವಾಗಿ ಗೌಪ್ಯವಾಗಿ ಲಭ್ಯವಾಗುತ್ತಿರುವ ಹಿನ್ನೆಲೆ ಕಾಂಡೋಮ್ ಮಾರುಕಟ್ಟೆ ವಿಸ್ತರಣೆಯಾಗಲು ಪ್ರಮುಖ ಕಾರಣಗಳಾಗಿದೆ.
ಕಾಂಡೋಮ್ ಕಂಪನಿಗಳ ಬ್ರ್ಯಾಂಡಿಂಗ್, ಪ್ರಚಾರ, ಗಮನ ಸೆಳೆಯುವ ಪ್ಯಾಕೇಜಿಂಗ್ ಮತ್ತು ಇ-ಕಾರ್ಮಸ್ ಮೂಲಕ ಗೌಪ್ಯವಾಗಿ ಖರೀದಿಸಲು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆ ಕಾಂಡೋಮ್ ಮಾರಾಟ ಮತ್ತಷ್ಟು ಹೆಚ್ಚಾಗಲು ಕಾರಣಗಳಾಗಿವೆ. ಇದನ್ನೂ ಓದಿ: 13 ವರ್ಷಗಳ ನಂತರ ದೆಹಲಿಯಲ್ಲಿ ಸುದೀಪ್ : ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿದ ಕಿಚ್ಚ