CrimeDistrictsKalaburagiKarnatakaLatestMain Post

ಬಿಸಾಡಿದ ಮಚ್ಚು ತೋರಿಸುತ್ತೇನೆಂದು ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗೆ ಗುಂಡೇಟು

Advertisements

ಕಲಬುರಗಿ: ಕಾಂಗ್ರೆಸ್ ಮುಖಂಡ ಗಿರೀಶ್ ಕಂಬಾನೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಹಳ್ಳಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಶಹಬಾದ್ ಪಟ್ಟಣದ ಹೊರವಲಯದಲ್ಲಿ ಫೈರಿಂಗ್ ಮಾಡಲಾಗಿದ್ದು, ವಿಜಯ್ ಹಳ್ಳಿ ಬಲಗಾಲಿಗೆ ಗುಂಡು ತಗುಲಿದೆ. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಪಿಎಸ್‍ಐ ಸುವರ್ಣಾ ಅವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ 

ಜುಲೈ 11 ರಂದು ಶಹಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಗಿರೀಶ್ ಕಂಬಾನೂರ ಕೊಲೆಯಾಗಿತ್ತು. ಕೊಲೆಯ ಆರೋಪದ ಹಿನ್ನೆಲೆ ನಿನ್ನೆ ವಿಜಯ್‍ನನ್ನ ಬಂಧಿಸಿದ ಪೊಲೀಸರು, ಇಂದು ಬೆಳಗ್ಗೆ 7:30ರ ಸುಮಾರಿಗೆ ಕೊಲೆಗೆ ಬಳಸಿದ ಮಾರಕಾಸ್ತ್ರವೊಂದು ಬಿಸಾಡಿದ ಸ್ಥಳ ತೋರಿಸಲು ಆರೋಪಿಯನ್ನು ಕರೆದೊಯ್ದಿದ್ದರು.

ಪಿಎಸ್‍ಐ ಮೇಲೆ ಹಲ್ಲೆ
ತಾನು ಬಿಸಾಡಿದ ಮಚ್ಚು ತೋರಿಸಿದ ಆರೋಪಿ ವಿಜಯ್, ಅದೇ ಮಚ್ಚಿನಿಂದ ಪಿಎಸ್‍ಐ ಸುವರ್ಣಾ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತನಿಖಾ ಅಧಿಕಾರಿ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆದ್ರೂ ತಪ್ಪಿಸಿಕೊಳ್ಳಲು ಯತ್ನ ಮುಂದುವರೆಸಿದಾಗ ಆರೋಪಿ ವಿಜಯ್ ಬಲಗಾಲಿಗೆ ಒಂದು ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:  ಯೋಧರು ಸೇರಿ ಐವರ ಪ್ರಾಣ ಉಳಿಸಿದ ಮೃತ ಮಹಿಳೆಯ ಅಂಗಾಂಗ 

ಜೈಲಿನಲ್ಲಿದ್ದು ಧಮ್ಕಿ
ಎರಡು ವರ್ಷದ ಹಿಂದೆ ಗಿರೀಶ್ ಕಂಬಾನೂರ ಅಣ್ಣ ಸತೀಶ್ ಕೊಲೆ ಕೂಡಾ ಇದೆ ಆರೋಪಿ ವಿಜಯ್ ಮಾಡಿದ್ದ. ಕೊಲೆಯ ನಂತರ ಜೈಲಿನಿಂದಲೇ ಕಂಬಾನೂರ ಕುಟುಂಬಕ್ಕೆ ಬೇದರಿಕೆ ಹಾಕೋದು ಸೇರಿದಂತೆ ಈತನ ವಿರುದ್ಧ ಒಟ್ಟು ಆರು ಪ್ರಕರಣಗಳು ದಾಖಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ತಿಳಿಸಿದ್ದಾರೆ.

Live Tv

Leave a Reply

Your email address will not be published.

Back to top button