ಈ ಹಿಂದೆ ಜಿಯೋ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ ನ್ಲಿ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಕೆಲಸ ಮಾಡಿರುವ ಗುಳಿಕೆನ್ನೆ ಚೆಲುವು, ಕನ್ನಡತಿ ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಗೆ ಪ್ರತಿಷ್ಠಿತ ಕ್ಯಾನ್ ಫೆಸ್ಟಿವೆಲ್ ನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುವಂತಹ ಅವಕಾಶ ಸಿಕ್ಕಿದೆ. ಇಂತಹ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಈ ರೀತಿಯ ಗೌರವ ಸಿಗುವುದು ಅಪರೂಪ. ಹಾಗಾಗಿ ದೀಪಿಕಾ ಪಡುಕೋಣೆ ಇಂಥದ್ದೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ
Advertisement
ಮೇ 17 ರಿಂದ 28ರವರೆಗೆ 2022ರ ಕಾನ್ ಫಿಲ್ಮ್ ಫೆಸ್ಟಿವೆಲ್ ನಡೆಯಲಿದ್ದು, 75ನೇ ಕಾನ್ ಚಲನಚಿತ್ರೋತ್ಸವ ಜ್ಯೂರಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಕಾನ್ ಪೇಜ್ ನಲ್ಲೇ ಘೋಷಿಸಲಾಗಿದೆ. ಅಲ್ಲದೇ ಇವರೊಂದಿಗೆ ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಕೂಡ ಮುಖ್ಯ ತೀರ್ಪುಗಾರರಾಗಿ ಕೆಲಸ ಮಾಡಲಿದ್ದಾರೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ
Advertisement
Advertisement
ಒಟ್ಟು 21 ಸಿನಿಮಾಗಳು ಆಯ್ಕೆಯ ಸುತ್ತಿನಲ್ಲಿದ್ದು, ಎಂಟು ತೀರ್ಪುಗಾರರ ತಂಡವು ಪ್ರಶಸ್ತಿಗಾಗಿ ಸಿನಿಮಾಗಳನ್ನು ಆರಿಸಲಿದೆ. ಮೇ.28 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಆಯ್ಕೆಯಾದ ವಿಜೇತ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.