ಬಳ್ಳಾರಿ: ಸದಾ ಯಾವುದಾದರೂ ಸುದ್ದಿಯಲ್ಲಿರುವ ವಿಮ್ಸ್ (VIMS) ಆಸ್ಪತ್ರೆ (Hospital), ಬಾಲಕನೊಬ್ಬನಿಗೆ ಚಿಕಿತ್ಸೆಯಲ್ಲಿ ಎಡವಟ್ಟು ಮಾಡಿ ಮತ್ತೊಮ್ಮೆ ಸುದ್ದಿಯಾಗಿದೆ. ವಿಷಲ್ ನುಂಗಿದ್ದ ಬಾಲಕನಿಗೆ ಸರಿಯಾದ ಚಿಕಿತ್ಸೆ ನೀಡದೆ ಹಾಗೇ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಬಾಲಕನ ಪೋಷಕರು ಎಸ್‍ಪಿಗೆ ದೂರು ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
8 ವರ್ಷದ ಬಾಲಕನೊಬ್ಬ ಆಟ ಆಡುವಾಗ ವಿಷಲ್ ನುಂಗಿ ಅಸ್ವಸ್ಥನಾಗಿದ್ದ. ಆತನನ್ನು ಪೋಷಕರು ವಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಎರಡು ತಿಂಗಳ ಬಳಿಕ ಮತ್ತೆ ಮಗುವಿಗೆ ಉಸಿರಾಟದ ಸಮಸ್ಯೆಯಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗಲೂ ಚಿಕಿತ್ಸೆ ಕೊಟ್ಟು ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿ ಕಳುಹಿಸಿದ್ದರು. ಇದನ್ನೂ ಓದಿ: ತಲೆಮರೆಸಿಕೊಂಡಿದ್ದ ಹಾಲಶ್ರೀ ಒಡಿಸ್ಸಾದಲ್ಲಿ ಅರೆಸ್ಟ್
Advertisement
Advertisement
ಈಗ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಬೇರೆಡೆ ಚಿಕಿತ್ಸೆಗೆ ಕರೆದೊಯ್ದಾಗ ಶ್ವಾಸಕೋಶದ ಬಳಿ ವಿಷಲ್ ಸಿಲುಕಿರುವುದು ಬೆಳಕಿಗೆ ಬಂದಿದೆ. ಪದೇ ಪದೇ ಮಗು ಅನಾರೋಗ್ಯಕ್ಕೆ ತುತ್ತಾಗಿ ಐದಾರು ತಿಂಗಳು ಆಸ್ಪತ್ರೆಗೆ ಅಲೆದಾಡಿದ ಬಳಿಕ, ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ತೋರಿಸಿದಾಗ ಮಗುವಿನ ಶ್ವಾಸಕೋಶದ ಬಳಿ ವಿಷಲ್ ಇರುವುದು ಪತ್ತೆಯಾಗಿದೆ. ಕೂಡಲೇ ಚಿಕಿತ್ಸೆ ನೀಡಿ ವೈದ್ಯರು ವಿಷಲ್‍ನ್ನು ಹೊರ ತೆಗೆದಿದ್ದಾರೆ.
Advertisement
Advertisement
ಬಳಿಕ ವಿಮ್ಸ್ ವೈದ್ಯರ (Doctor) ವಿರುದ್ಧ ಬಾಲಕನ ತಂದೆ ಗವಿಸಿದ್ದಪ್ಪ ಎಸ್ಪಿಗೆ ದೂರು ನೀಡಿದ್ದಾರೆ. ವಿಮ್ಸ್ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಇದು ಅಸಂಬದ್ಧ, ಪ್ರೇರಿತ- ಕೆನಡಾ ಆರೋಪ ತಿರಸ್ಕರಿಸಿದ ಭಾರತ
Web Stories