ಶಿವಮೊಗ್ಗ: ಚುನಾವಣೆ ಹೊತ್ತಲ್ಲಿ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪಗೆ ಎದುರಾಗಿದೆ. ಈಶ್ವರಪ್ಪ ಪುತ್ರ ಮತ್ತು ಸೊಸೆ ವಿರುದ್ಧ ಬೆಂಗಳೂರಿನ ಎಸಿಬಿ ಕೇಂದ್ರ ಕಚೇರಿಯಲ್ಲಿ ದೂರು ದಾಖಲಾಗಿದೆ.
ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್, ಸೊಸೆ ಶಾಲಿನಿ ನಿರ್ದೇಶಕರಾಗಿರುವ ಭರಣಿ ಪವರ್ ಪ್ರೈವೆಟ್ ಲಿಮಿಟೆಡ್ ಕಂಪೆನಿ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದಾರೆ ಎಂದು ವಕೀಲ ಕಂ ಆರ್ ಟಿಐ ಕಾರ್ಯಕರ್ತ ವಿನೋದ್ ಬೆಂಗಳೂರಿನಲ್ಲಿರುವ ಎಸಿಬಿ ಕೇಂದ್ರ ಕಚೇರಿಗೆ ದೂರು ನೀಡಿದ್ದಾರೆ. ಸದ್ಯ ಪೂರ್ವ ವಲಯ ಎಸಿಬಿ ಎಸ್ಪಿ ಕಚೇರಿಗೆ ಈ ದೂರನ್ನು ವರ್ಗಾವಣೆ ಮಾಡಲಾಗಿದೆ.
Advertisement
2010ರಲ್ಲಿ ಕಂಪೆನಿ ಕಾಯ್ದೆ ಅನುಸಾರ ನೋಂದಣಿ ಆಗಿರುವ ಭರಣಿ ಪವರ್ ಪ್ರೈವೆಟ್ ಲಿಮಿಟೆಡ್ 2 ಲಕ್ಷದ 76 ಸಾವಿರದ 250 ಷೇರುಗಳನ್ನು ಹೊಂದಿದೆ. 10 ರೂಪಾಯಿ ಮುಖಬೆಲೆಯ ಈ ಷೇರುಗಳನ್ನು 190 ರೂಪಾಯಿ ಪ್ರೀಮಿಯಂ ಮೊತ್ತ ಸೇರಿಸಿ 200 ರೂ.ಗೆ ಮಾರಾಟ ಮಾಡಿದ್ದಾರೆ. ಪಶ್ಚಿಮ ಬಂಗಾಳದ 9 ಕಂಪೆನಿಗಳು ಈ ಷೇರುಗಳನ್ನು ಖರೀದಿಸಿವೆ. ಆದ್ರೆ ಈ 9 ಕಂಪೆನಿಗಳು ನಕಲಿಯಾಗಿದ್ದು, ಪ್ರತಿವರ್ಷ ಲಾಭಗಳಿಸುತ್ತಾ ಹೋಗಿದೆ. ಹೀಗಾಗಿ ಈ ಬಗ್ಗೆ ತನಿಖೆ ಮಾಡಬೇಕೆಂದು ಎಸಿಬಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಲಾಗಿದೆ.