ಬೆಂಗಳೂರು: ನಟ ಸುದೀಪ್ ವಿರುದ್ಧ ವಂಚನೆ ಆರೋಪವೊಂದು ಕೇಳಿ ಬಂದಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ.
ದೀಪಕ್ ಮಯೂರ್ ಅವರು ಸುದೀಪ್ ವಿರುದ್ಧ ವಂಚನೆಯ ಆರೋಪವನ್ನು ಮಾಡುತ್ತಿದ್ದಾರೆ. ಈಗ ದೀಪಕ್ ಅವರು ತಮಗೆ ಬರೋಬ್ಬರಿ 90 ಲಕ್ಷ ರೂ. ಹಣ ವಂಚನೆಯಾಗಿದೆ ಎಂದು ಆರೋಪಿಸಿ ಫಿಲ್ಮ್ ಚೇಂಬರ್ ಗೆ ಸುದೀಪ್ ವಿರುದ್ಧ ದೂರು ನೀಡಿದ್ದಾರೆ.
Advertisement
ಘಟನೆ ವಿವರ:
ಖಾಸಗಿ ವಾಹಿನಿಯಲ್ಲಿ ನಟ ಸುದೀಪ್ ನಿರ್ಮಾಣದ `ವಾರಸ್ದಾರ’ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಗಾಗಿ ಸುದೀಪ್ ಅವರು ಚಿಕ್ಕಮಗಳೂರಿನ ಕಾಫಿ ಎಸ್ಟೇಟನ್ನು ಬಾಡಿಗೆ ಪಡೆದುಕೊಂಡಿದ್ದರು. ಈ ಎಸ್ಟೇಟ್ ನ ಮಾಲೀಕರೇ ದೀಪಕ್ ಪಟೇಲ್, ಇವರ ಮನೆ ಮತ್ತು ಜಮೀನನ್ನು ಧಾರಾವಾಹಿಗಾಗಿ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಬಾಡಿಗೆ ನೀಡದೆ ಸುದೀಪ್ ವಂಚನೆ ಮಾಡಿದ್ದಾರೆ ಎಂದು ಮಾಲೀಕ ಆರೋಪಿಸುತ್ತಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಧಾರಾವಾಹಿಗಾಗಿ ಸುದೀಪ್ ಬಗೆ ಬಗೆಯ ಗಿಡ ಕಡಿದು ಗೆಸ್ಟ್ ಹೌಸ್ ನಿರ್ಮಾಣ ಮಾಡಿದ್ದರು. ಆದರೆ ವಾರಸ್ದಾರ ತಂಡ ಅರ್ಧದಲ್ಲೇ ಶೂಟಿಂಗ್ ಪ್ಯಾಕಪ್ ಮಾಡಿ ಹೋಗಿದ್ದಾರೆ. ಧಾರಾವಾಹಿ ಶುರು ಮಾಡಿದಾಗ ಮೊದಲು 50 ಸಾವಿರ ಕೊಟ್ಟಿದ್ದರು. ನಂತರ 1 ಲಕ್ಷ 80 ರೂ. ಸಾವಿರ ಕೊಟ್ಟಿದ್ದಾರೆ. ಆದರೆ ಈಗ ಧಾರಾವಾಹಿ ನಿಂತು 7 ತಿಂಗಳಾಗಿದೆ. ಈಗ ಇದರಿಂದ ಚಿತ್ರ ತಂಡ ಸುಮಾರು 90 ಲಕ್ಷ ರೂ. ಮೌಲ್ಯದ ನಷ್ಟ ಮಾಡಿದೆ. ಚಿಕ್ಕಮಗಳೂರು ಎಸ್‍ಪಿ ಅಣ್ಣಮಲೈ ಅವರಿಗೆ ಈ ಬಗ್ಗೆ ದೂರು ನೀಡಿದ್ದೆ. ಆದರೆ ಅವರು ಮಾತುಕತೆ ಮಾಡಿಸಿದ್ದರು. ಆದರೆ ಏನು ಪ್ರಯೋಜನವಾಗಿಲ್ಲ. ಹಣಕ್ಕಾಗಿ ಪ್ರತಿದಿನವೂ ಮಾಲೀಕ ದೀಪಕ್ ಮಯೂರ್ ಅಲೆಯುತ್ತಿದ್ದಾರೆ. ಕೊನೆಗೆ ಮಂಗಳವಾರ ಫಿಲ್ಮ್ ಚೇಂಬರಿಗೆ ದೂರು ನೀಡಿದ್ದಾರೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಲೀಕ ದೀಪಕ್, ಗಸ್ಟ್ ಹೌಸ್ ನಿರ್ಮಾಣಕ್ಕಾಗಿ ನನ್ನ ಕಾಫಿ ತೋಟವನ್ನು ನಾಶ ಮಾಡಿದ್ದಾರೆ. ನಾನು ಸಾಲ ಮಾಡಿ ಎಲ್ಲವನ್ನು ರೆಡಿ ಮಾಡಿಸಿದ್ದೇನೆ. ಈಗ ನಮಗೆ ಬರೋಬ್ಬರಿ 1 ಕೋಟಿ ರೂ. ಮೇಲೆ ಅಧಿಕವಾಗಿ ನಷ್ಟವಾಗಿದೆ. ನಾನು ಸುದೀಪ್ ಅಭಿಮಾನಿ ಅವರ ಮನವಿ ಮಾಡಿಕೊಂಡಿದ್ದಕ್ಕೆ ಜಾಗ ಬಿಟ್ಟುಕೊಟ್ಟಿದೆ. ಆದರೆ ಸರಿಯಾಗಿ ಟಿಆರ್ ಪಿ ಬಂದಿಲ್ಲ ಎಂದು ಬಾಡಿಗೆಯನ್ನು ಕೊಡದೆ ಸತಾಯಿಸುತ್ತಿದ್ದರು ಎಂದು ಹೇಳಿದ್ದಾರೆ.