ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಯ ವಿರುದ್ಧ ಜನರು ಟ್ವಿಟ್ಟರ್ ಮೂಲಕ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಜೆಪಿ ನಗರದ ನಿವಾಸಿಯಾಗಿರುವ ಧನಂಜಯ್ ಪದ್ಮನಾಭಾಚಾರ್ ಈ ಬಗ್ಗೆ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಜೆಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ಅಪಾರ್ಟ್ ಮೆಂಟ್ ಮುಂಭಾಗದ ನೋ ಪಾರ್ಕಿಂಗ್ ಝೋನ್ ನಲ್ಲಿ ಪದೇ ಪದೇ ಆಡಿ ಕಾರನ್ನು ಪಾರ್ಕ್ ಮಾಡಲಾಗುತ್ತದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
Advertisement
ಕೆಲವು ದಿನಗಳಿಂದ ನೋ ಪಾರ್ಕಿಂಗ್ ಸ್ಥಳದಲ್ಲಿಯೇ ಕಾರನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕಾರಿನ ಚಾಲಕನಿಗೆ ಅನೇಕ ಬಾರಿ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಆದರು ಆತ ತಲೆ ಕೆಡಿಸಿಕೊಂಡಿಲ್ಲ. ಮತ್ತೆ ಆ ಜಾಗದಲ್ಲಿ ಕಾರ್ ಪಾರ್ಕಿಂಗ್ ಮಾಡಿದ್ದಾನೆ.
Advertisement
Advertisement
ಕೊನೆಗೆ ಅಲ್ಲಿನ ನಿವಾಸಿಗಳು ಕಾರು ಯಾರದು ಎಂದು ತಿಳಿದುಕೊಳ್ಳಲು ಅವರೇ ಕಾರ್ ನಂಬರ್ ಬರೆದುಕೊಂಡು ಆರ್ ಟಿಓಗೆ ಹೋಗಿ ರೆಕಾರ್ಡ್ ನಲ್ಲಿ ಚೆಕ್ ಮಾಡಿಸಿದ್ದಾರೆ. ಅಲ್ಲಿ ರಕ್ಷಿತ್ ಶೆಟ್ಟಿ ಅವರದ್ದು ಎಂದು ತಿಳಿದು ಬಂದಿದೆ. ಬಳಿಕ ಸಂಚಾರದ ನೀತಿ, ನಿಯಮಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರ ಇರುವುದೇ, ಸ್ಯಾಂಡಲ್ ವುಡ್ ಹೀರೋಗಳಿಗೆ ಬೇರೆ ನಿಯಮವಿದೆಯೇ ಎಂದು ಧನಂಜಯ್ ಅವರು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
Advertisement
ಕೂಡಲೇ ಜನ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ವಿಟ್ಟರ್ ಮೂಲಕ ದೂರು ನೀಡಿದ್ದಾರೆ. ಜವಾಬ್ಧಾರಿ ಯುತ ನಟರೇ ಈ ರೀತಿ ನಡೆದುಕೊಂಡರೆ ಹೇಗೆ ಅಂತಾ ಜನ ಸಾಮಾಜಿಕ ಜಾಲತಾಣದಲ್ಲಿ ನಟನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ರಿಯಲ್ ಲೈಫ್ ನಲ್ಲಿ ಹೀರೋ ಆಗಬೇಕು ರೀಲ್ ಲೈಫ್ ನಲ್ಲಿ ಮಾತ್ರ ಅಲ್ಲ ಎಂದು ಹೇಳಿದ್ದು, ನಟನಿಗೂ ಕಾರ್ ಫೋಟೋ ಪೋಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ.
ಸದ್ಯಕ್ಕೆ ರಕ್ಷಿತ್ ಶೆಟ್ಟಿ ಈ ಕಾರನ್ನು ತಮ್ಮ ಗೆಳೆಯನಿಗೆ ಮಾರಾಟ ಮಾಡಿದ್ದಾರೆ ಅನ್ನೋ ಸುದ್ದಿ ಇದೆ. ಆದರೆ ಆರ್ ಟಿಓ ರೆಕಾರ್ಡ್ ನಲ್ಲಿ ಮಾತ್ರ ನಟ ರಕ್ಷಿತ್ ಶೆಟ್ಟಿ ಹೆಸರು ಇದೆ.
Is this car bearing KA51 MF 6660 belongs to our Super Hero @rakshitshetty?? I am great fan of you sir, but when I see your car getting parked in a No Parking place, I am really thinking how can our super hero repeatedly violate our traffic rules? @blrcitytraffic @tv9kannada pic.twitter.com/dQ4rrdeb5Z
— Dhananjaya Padmanabhachar (@Dhananjaya_Bdvt) August 8, 2018