ಚಿಕ್ಕಬಳ್ಳಾಪುರ: ದೂರು ನೀಡಲು ಪೊಲೀಸ್ ಠಾಣೆಗೆ (Police Station) ಹೋದ ದೂರುದಾರನ (Complainant ) ಮೇಲೆಯೇ ಹಲ್ಲೆ ನಡೆಸಿ, ಪೊಲೀಸ್ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸೆಗಿರುವ ಆರೋಪ ಕೇಳಿ ಬಂದಿದೆ.
Advertisement
ಪೊಲೀಸ್ ಠಾಣೆಯಲ್ಲಿಯೇ ದೂರುದಾರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆಯಲ್ಲಿ ನಡೆದಿದೆ. ಇದೀಗ ದೌರ್ಜನ್ಯ ಎಸಗಿದ ಪೊಲೀಸ್ ವಿರುದ್ಧವೇ ಅದೇ ಠಾಣೆಯಲ್ಲಿ ದೂರು ನೀಡಲಾಗಿದೆ. ಇದನ್ನೂ ಓದಿ: ಟೆಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್ ಪ್ರಯಾಣಿಕ ಅರೆಸ್ಟ್
Advertisement
Advertisement
ಹೌದು, ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ದುದ್ದನಹಳ್ಳಿ ಗ್ರಾಮದ ಯುವಕ ಹಾಗೂ ವಕೀಲ (Advocate) ನಿಖಿಲ್ ಎಂಬಾತನ ತೇಜೋವಧೆ, ಚಾರಿತ್ರ್ಯವಧೆ ಮಾಡುವ ಸಲುವಾಗಿ ಅನಾಮಿಕನೋರ್ವ ದುದ್ದನಹಳ್ಳಿ ಗ್ರಾಮದ ಸಮುದಾಯ ಭವನ, ವಾಟರ್ ಟ್ಯಾಂಕ್, ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿ ಗೋಡೆಗಳ ಮೇಲೆ ದೂರುದಾರ ನಿಖಿಲ್ ಹಾಗೂ ಅದೇ ಗ್ರಾಮದ ಮತ್ತೋರ್ವನ ಜೊತೆ ಮದುವೆಯಾಗಿ ಗಂಡನ ಮನೆ ಸೇರಿರುವ ಯುವತಿಗೂ ಅಕ್ರಮ ಸಂಬಂಧ ಇದೆ ಎಂಬುದಾಗಿ ಅಪಪ್ರಚಾರದ ಬರಹಗಳನ್ನು ಬರೆದಿದ್ದಾರೆ.
Advertisement
ಈ ವಿಚಾರವಾಗಿ ನಿಖಿಲ್ ವಿಶ್ವನಾಥಪುರ ಪೊಲೀಸ್ ಠಾಣೆಗೆ (Viswanathpur Station) ತನ್ನ ಸಹೋದರರ ಜೊತೆ ದೂರು ನೀಡಲು ಹೋದಾಗ ದೂರು ಪಡೆಯಬೇಕಾದ ಪೊಲೀಸ್ ದೂರು ಪಡೆಯದೇ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ ಎಂದೇ ಫೇಮಸ್ ಆಗಿದ್ದ ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣು
ವಿಶ್ವನಾಥಪುರ ಪೊಲೀಸ್ ಠಾಣೆಯ (Viswanathpur Station) ಮುಖ್ಯಪೇದೆ ಪುಟ್ಟರಾಜು ವಿರುದ್ಧ ದೂರುದಾರ ನಿಖಿಲ್ ಹಾಗೂ ಸಹೋದರರು ಆರೋಪ ಮಾಡಿದ್ದಾರೆ. ಆರೋಪಕ್ಕೆ ಪುಷ್ಠಿ ನೀಡುವಂತೆ 1 ಆಡಿಯೋ ತುಣುಕು ಹಾಗೂ ವೀಡಿಯೋಗಳನ್ನ ನೀಡಿದ್ದಾರೆ. ಠಾಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಇಲ್ಲ. ನಾಳೆ ಬನ್ನಿ ಅಂದಾಗ, ನಾವು ಡಿಸಿ ಕಡೆಯಿಂದ ಫೋನ್ ಮಾಡಿಸೋಣ ಅಂದಿದ್ದಾರೆ. ಈ ವೇಳೆ ಪುಟ್ಟರಾಜು, ವಿಧಾನಸೌಧಕ್ಕೆ (Vidhan Soudha) ಹೋಗಿ ದೂರು ಕೊಡುವುದಾಗಿ ಹೇಳಿದ್ದಾರೆ. ಈ ವೇಳೆ ಪರಸ್ಪರರ ನಡುವೆ ಮಾತಿನ ಚಕಮಕಿ ವಾಗ್ವಾದ, ನಡೆದು ಮುಖ್ಯಪೇದೆ ಪುಟ್ಟರಾಜು ಅವಾಚ್ಯ ಪದ ಪ್ರಯೋಗ ಸಹ ಮಾಡಿದ್ದಾರೆ ಅಂತ ದೂರುದಾರರು ಆರೋಪಿಸಿದ್ದಾರೆ.
ಇಷ್ಟೆಲ್ಲಾ ಘಟನೆ ನಂತರ ಮರುದಿನ ನಿಖಿಲ್ ನೀಡಿದ್ದ ವೈಯುಕ್ತಿಕ ಚಾರಿತ್ರ್ಯವಧೆ ಸಂಬಂಧ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಆದರೆ ದೂರುದಾರ ನಿಖಿಲ್ ಸದ್ಯ ಮುಖ್ಯಪೇದೆ ಪುಟ್ಟರಾಜು ವಿರುದ್ಧವೂ ದೌರ್ಜನ್ಯ ನಡೆಸಿದ ಆರೋಪದಡಿ ದೂರು ನೀಡಿದ್ದು, ಆ ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಪೇದೆ (Head Constable) ಪುಟ್ಟರಾಜು ವಿರುದ್ಧ ದೂರು ನೀಡುವುದಕ್ಕೆ ದೂರುದಾರ ನಿಖಿಲ್ ಮುಂದಾಗಿದ್ದು, ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.