ಮಂಡ್ಯ: ನಾಗಮಂಗಲದಲ್ಲಿ (Nagamangala) ಗಣೇಶ ಮೂರ್ತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಿಂದ ಹಾನಿಗೊಳಗಾದ ಅಂಗಡಿ ಮಾಲೀಕರಿಗೆ ಕೊನೆಗೂ ಸರ್ಕಾರ ಪರಿಹಾರ ನೀಡಿದೆ.
Advertisement
ನಾಗಮಂಗಲ ಗಲಭೆಯಲ್ಲಿ (Nagamangala Violence) ಹಲವು ಅಂಗಡಿ ಮುಂಗಟ್ಟುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಕಾರಣ ಸುಮಾರು 22 ಮಂದಿ ವ್ಯಾಪಾರಸ್ಥರಿಗೆ ವೃತ್ತಿ ಜೀವನ ನಡೆಸಲು ತೊಂದರೆಯಾಗಿತ್ತು. ಇಂದು (ನ.22) ಸಚಿವ ಚಲುವರಾಯಸ್ವಾಮಿ ತೊಂದರೆಗೀಡಾಗಿದ್ದ ವ್ಯಾಪರಸ್ಥರು ಹಾಗೂ ಅಂಗಡಿ ಮಾಲೀಕರಿಗೆ ಸರ್ಕಾರದಿಂದ (Government) ನೀಡಿದ್ದ ಒಟ್ಟು 76,45,000 ರೂ. ಪರಿಹಾರ ಧನ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ
Advertisement
Advertisement
ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ 22 ಅಂಗಡಿ ಮಾಲೀಕರಿಗೆ 26,45,000 ರೂ. ಹಾಗೂ 22 ಸಣ್ಣಪುಟ್ಟ ವ್ಯಾಪಾರಿಗಳಿಗೆ 47,85,000 ರೂ. ಪರಿಹಾರ ಮಂಜೂರಾತಿ ಪತ್ರವನ್ನು ವಿತರಿಸಿದರು. ಇದನ್ನೂ ಓದಿ: ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ – ರಾತ್ರೋರಾತ್ರಿ ತಲೆ ಎತ್ತಿದೆ ಅಜಿತ್ ಪವಾರ್ ಪೋಸ್ಟರ್
Advertisement
ಸರ್ಕಾರದಿಂದ ಇಂತಹ ಅವಘಡ ಪ್ರಕರಣಗಳಲ್ಲಿ ಸುಮಾರು 10,000 ರೂ. ಮಾತ್ರ ಪರಿಹಾರ ನೀಡಲಾಗುತ್ತಿತ್ತು, ಇದರಿಂದ ವೃತ್ತಿ ಜೀವನ ಪುನಃ ಕಟ್ಟಿಕೊಳ್ಳಲು ಸಾಕಾಗುವುದಿಲ್ಲ ಎಂದು ವರ್ತಕರು ಮನವಿ ಮಾಡಿದ್ದರು. ವರ್ತಕರ ಮನವಿ ಪುರಸ್ಕರಿಸಿದ ಸರ್ಕಾರ ದೊಡ್ಡ ಮೊತ್ತದ ಪರಿಹಾರ ನೀಡಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಸಾಂಗ್ಲಿ ರಸಗೊಬ್ಬರ ಘಟಕದಲ್ಲಿ ಗ್ಯಾಸ್ ಲೀಕ್: ಮೂವರ ಸಾವು, 9 ಮಂದಿ ಆಸ್ಪತ್ರೆಗೆ ದಾಖಲು