ಬೆಂಗಳೂರು: ಸಿಬಿಐ (CBI) ಕೊಟ್ಟ ಮಾಹಿತಿಗಳ ಆಧಾರದಲ್ಲಿ ಡಿಕೆ ಶಿವಕುಮಾರ್ (DK Shivakumar) ಮೇಲಿನ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆಗೆ ಅಸ್ತು ಎಂದ ಹೈಕೋರ್ಟ್ (High Court) ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐ ಕೊಟ್ಟ ಮಾಹಿತಿಗಳ ಆಧಾರದಲ್ಲಿ ಕೋರ್ಟ್ ತೀರ್ಪು ಕೊಟ್ಟಿರಬಹುದು. ಕೋರ್ಟ್ ಕೂಡಾ 3 ತಿಂಗಳಲ್ಲಿ ತನಿಖೆ ಮುಗಿಸಿ ಎಂದು ಗಡುವು ಕೊಟ್ಟಿದ್ದಾರೆ. ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದರು. ಇದನ್ನೂ ಓದಿ: ಡಿಕೆಶಿ ಅರ್ಜಿ ವಜಾಗೊಂಡಿದ್ದು ಯಾಕೆ? ಹೈಕೋರ್ಟ್ ನೀಡಿದ ಕಾರಣ ಏನು?
ಹೈಕೋರ್ಟ್ ತೀರ್ಪು ಸ್ವಾಗತ ಮಾಡೋದು, ಮಾಡದೇ ಇರೋದು ಮುಖ್ಯ ಅಲ್ಲ. ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿ ಹಲವು ಸಂಸ್ಥೆಗಳಲ್ಲಿ ಹಲವಾರು ತೀರ್ಮಾನಗಳು ಅಗುತ್ತಿರುತ್ತವೆ. ಅದು ರೂಟಿನ್ ವರ್ಕ್‌ನಲ್ಲಿ ನಡೆಯುತ್ತಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಡಿಕೆಶಿ ಮೆರವಣಿಗೆ ನೋಡಿ ಕೇಸ್ ಖುಲಾಸೆ ಅಂದ್ಕೊಂಡಿದ್ದೆ: ಕೆ.ಎಸ್ ಈಶ್ವರಪ್ಪ
ಡಿಕೆಶಿ ತಿಹಾರ್ ಜೈಲಿಗೆ ಹೋಗೋ ಕಾಲ ಹತ್ತಿರ ಬಂದಿದೆ ಎಂಬ ತಮ್ಮ ಹಿಂದಿನ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಡಿಕೆ ತಿಹಾರ್ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದನ್ನು ಬೇರೆ ಕಡೆ ಡೈವರ್ಟ್ ಮಾಡುವುದು ಅನಾವಶ್ಯಕ. ನಾನು ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಕುಮಾರಸ್ವಾಮಿಯವರನ್ನು ರಾಮನಗರದಿಂದ ಗಂಟು ಮೂಟೆ ಕಟ್ಟಿ ಹಾಸನಕ್ಕೆ ಕಳುಹಿಸುತ್ತೇವೆ ಎಂದು ಡಿಕೆ ಹೇಳುತ್ತಿದ್ದರು. ಆಗ ನಮ್ಮ ಕಾರ್ಯಕರ್ತರು ಎದ್ದು ನೀವು ಇಷ್ಟು ಸಾಫ್ಟ್ ಆಗಿದ್ದೀರಾ, ಅವರು ಅಣ್ಣ-ತಮ್ಮಂದಿರು ಗಂಟು ಮೂಟೆ ಕಟ್ಟುಸ್ತೀವಿ ಎಂದು ಹೇಳುತ್ತಾರೆ ಎಂದು ಹೇಳಿದರು. ಆಗ ನಾನು ಸಂತೋಷವಾಗಿ ಹಾಸನಕ್ಕೆ ಹೋಗ್ತೀನಿ. ಅವರು ಎಲ್ಲಿಗೆ ಹೋಗುತ್ತಾರೆ ಎಂದು ಹೇಳಿದ್ದೆ ಅಷ್ಟೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದರು. ಇದನ್ನೂ ಓದಿ: ಆಯುಧ ಪೂಜೆ – ಸರ್ಕಾರಿ ಬಸ್‌ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್
ಕೇಂದ್ರ ಸರ್ಕಾರದಿಂದ ಡಿಕೆಶಿಯವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾಕೆ ಡಿಕೆ ಶಿವಕುಮಾರ್ ಅವರನ್ನು ಕೇಂದ್ರದವರು ಟಾರ್ಗೆಟ್ ಮಾಡುತ್ತಾರೆ? ಮುಂದೆ ಏನಾಗುತ್ತೆ ನೋಡೋಣ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ನಮ್ಮ ದೇಶದಲ್ಲಿ ದರೋಡೆ ಮಾಡುವವನಿಗೂ ಸಹಾನುಭೂತಿ ತೋರಿಸುತ್ತೇವೆ. ತಪ್ಪು ಮಾಡದೇ ಇರೋನು ಹಲವಾರು ಸಮಸ್ಯೆ ಎದುರಿಸುತ್ತಾನೆ. ನಮ್ಮ ದೇಶದ ರಕ್ತದಲ್ಲಿ ಇರುವ ಅನುಕಂಪವನ್ನು ಯಾರು ಹೇಗೆ ಬೇಕಾದ್ರು ಉಪಯೋಗ ಮಾಡಿಕೊಳ್ಳುವ ವಾತಾವರಣ ಇದೆ. ಅದಕ್ಕೆ ನಾನು ಯಾಕೆ ಬಲಿ ಆಗಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ಡಿಕೆಶಿ ಸ್ವಾಗತಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಎಂಟನೇ ಅದ್ಭುತ: ಮುನಿರತ್ನ ವ್ಯಂಗ್ಯ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]