ಕೊಪ್ಪಳ: ಗಂಗಾವತಿ (Gangavathi) ನಗರದ ಮಹಾರಾಣಾ ಪ್ರತಾಪ್ ಸರ್ಕಲ್‌ನಿಂದ ಜುಲೈ ನಗರದವರೆಗೂ ತಿರುಪತಿ, ಅಯೋಧ್ಯೆಯಲ್ಲಿರುವಂತೆ (Ayodhya) ವಿದ್ಯುತ್ ಕಂಬಗಳನ್ನು ಹಾಕಿದ್ದಕ್ಕೆ ಎಸ್‌ಡಿಪಿಐ (SDPI) ಆಕ್ಷೇಪ ವ್ಯಕ್ತಪಡಿಸಿದೆ.
ಅಯೋಧ್ಯೆ, ತಿರುಪತಿಯ ಮಾದರಿಯಲ್ಲಿ ಗಂಗಾವತಿ ಅಂಜನಾದ್ರಿ (Anjanadri Betta) ಅಭಿವೃದ್ಧಿ ಆಗಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ. ಆದರೆ ಅದೇ ಮಾದರಿಯಲ್ಲಿ ನಗರದ ಬೀದಿ ದೀಪದ ಕಂಬ ಅಳವಡಿಕೆಗೆ ಎಸ್‌ಡಿಪಿಐ ವಿರೋಧ ವ್ಯಕ್ತಪಡಿಸಿದೆ. ಇದು ಕೇವಲ ಒಂದು ಧರ್ಮದ (Religion) ಸಂಕೇತವಾಗಿದೆ. ಇದರಿಂದ ಗಂಗಾವತಿ ನಗರದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಆಗುತ್ತದೆ ಎಂದು ಆರೋಪಿಸಿದೆ. ಇದನ್ನೂ ಓದಿ: MUDA Scam | ಪ್ರಾಸಿಕ್ಯೂಷನ್ ಸಮರದಲ್ಲಿ ಸೈಲೆಂಟ್ ಅಸ್ತ್ರ ಪ್ರಯೋಗಿಸಿದ ರಾಹುಲ್ ಗಾಂಧಿ!
Advertisement
Advertisement
ಹನುಮನ ಜನ್ಮಸ್ಥಳವಾಗಿರುವ ಅಂಜನಾದ್ರಿ ಭಾಗವನ್ನು ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಹಲವು ಬಾರಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರದಲ್ಲೂ ಭರವಸೆ ನೀಡಿದ್ದರು. ಅದರಂತೆ ಈಗ ವಿದ್ಯುತ್ ಕಂಬಗಳನ್ನು ಈಗ ಅಳವಡಿಸಲಾಗುತ್ತಿದೆ. ನಗರದ ಸೌಂದರ್ಯ ಹೆಚ್ಚಿಸಲು ಹಾಕಿರುವ ಈ ದೀಪದ ಕಂಬಗಳ ವಿಚಾರದಲ್ಲಿ ಸದ್ಯ ಎಸ್‌ಡಿಪಿಐ ಖ್ಯಾತೆ ತೆಗೆದಿದ್ದು, ಜನಾರ್ದನ ರೆಡ್ಡಿ ತೀರ್ಮಾನದ ವಿರುದ್ಧ ಗಂಗಾವತಿ ನಗರಸಭೆ ಕಮಿಷನರ್‌ಗೆ ಮನವಿ ಮಾಡಿದೆ. ಇದನ್ನೂ ಓದಿ : Karkala | ಮದ್ಯದಲ್ಲಿ ಮಾದಕ ವಸ್ತು ನೀಡಿ ಅತ್ಯಾಚಾರ – ಗ್ಯಾಂಗ್‌ರೇಪ್ ಶಂಕೆ?
Advertisement
Advertisement
ಗಂಗಾವತಿಯಿಂದ 12 ಕಿಲೋ ಮೀಟರ್ ದೂರದಲ್ಲಿ ಹನುಮ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದವರೆಗೂ ಇದೆ ಮಾದರಿಯಲ್ಲಿ ಬೀದಿ ದೀಪಗಳು ಅಳವಡಿಕೆ ಮಾಡಲಾಗುತ್ತಿದೆ. ಇಲ್ಲಿಗೆ ಲಕ್ಷಾಂತರ ಹನುಮ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಇಂತಹ ಪ್ರವಾಸಿ ಸ್ಥಳದಲ್ಲಿ, ಬೀದಿ ದೀಪಗಳು ಸುಂದರವಾಗಿ ಕಾಣಲಿ ಎಂಬ ಉದ್ದೇಶಕ್ಕೆ ಹಾಕಲಾಗಿದೆ. ಇದರಲ್ಲಿ ಕೋಮು ಸೌಹಾರ್ದತೆ ಕದಡುವ ಅಂಶ ಏನಿದೆ ಎಂದು ಹಿಂದೂ ಮುಖಂಡರು ಪ್ರಶ್ನಿಸಿದ್ದಾರೆ.