ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022 ರ ಪುರುಷರ 96 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ವಿಕಾಸ್ ಠಾಕೂರ್ ಮಂಗಳವಾರ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಈ ಬಾರಿ ಕಾಮನ್‌ವೆಲ್ತ್‌ನ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಲಭಿಸಿದ 8ನೇ ಪದಕವಾಗಿದೆ.
ವಿಕಾಸ್ ಒಟ್ಟು 346 ಕೆಜಿ (ಸ್ನ್ಯಾಚ್‌ನಲ್ಲಿ 155 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ 199 ಕೆಜಿ) ತೂಕವನ್ನು ಎತ್ತಿ ಎರಡನೇ ಸ್ಥಾನ ಗಿಟ್ಟಿಸಿಕೊಂಡರು. 2014ರಲ್ಲಿ ಗ್ಲಾಸ್ಗೋದಲ್ಲಿ ಬೆಳ್ಳಿ ಮತ್ತು 2018ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ಕಂಚು ಗೆದ್ದಿದ್ದ ವಿಕಾಸ್ ಠಾಕೂರ್‌ಗೆ ಇದು ಮೂರನೇ ಕಾಮನ್‌ವೆಲ್ತ್ ಗೇಮ್ಸ್ ಪದಕವಾಗಿದೆ. ಇದನ್ನೂ ಓದಿ: ಇಂದು ಸುವರ್ಣ ದಿನ- ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾರತ
Advertisement
#CommonwealthGames Medalist ????♂️@thakur671 is set to begin his campaign at CWG @birminghamcg22 shortly
He is all pumped up for his event & shares his message for India & fans, listen In ????#Cheer4India#IndiaTaiyaarHai#India4CWG2022 @PMOIndia @ianuragthakur @NisithPramanik pic.twitter.com/WoTMRD85Qp
— SAI Media (@Media_SAI) August 2, 2022
Advertisement
ಇಲ್ಲಿಯವರೆಗೆ ಕಾಮನ್‌ವೆಲ್ತ್ 2022ರ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಒಟ್ಟು 8 ಪದಕ ಬಂದಿದೆ. ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ, ಅಚಿಂತಾ ಶೆಯುಲಿ, ಸಂಕೇತ್ ಸರ್ಗರ್, ಬಿಂದ್ಯಾರಾಣಿ ರಾಣಿ, ಗುರುರಾಜ ಪೂಜಾರಿ, ಹರ್ಜಿಂದರ್ ಕೌರ್ ಹಾಗೂ ಇದೀಗ ವಿಕಾಸ್ ಪದಕ ಗೆದ್ದಿದ್ದಾರೆ. ಇದನ್ನೂ ಓದಿ: ಲಾನ್ ಬಾಲ್ಸ್‌ನಲ್ಲಿ ಇತಿಹಾಸ ಸೃಷ್ಟಿ – ಚಿನ್ನ ಗೆದ್ದ ವನಿತೆಯರು