ಲಂಡನ್: 22ನೇ ಕಾಮನ್‌ವೆಲ್ತ್ ಕ್ರಿಡಾಕೂಟ ಪ್ರಾರಂಭವಾಗಿ ಇಂದು 10ನೇ ದಿನವಾಗಿದ್ದು, ಭಾರತೀಯ ಕ್ರೀಡಾಪಟುಗಳು ಒಂದಾದಮೇಲೊಂದರಂತೆ ಪದಕಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಇದೀಗ ಪುರುಷರ ನಡಿಗೆ ಸ್ಪರ್ಧೆಯಲ್ಲಿ ಸಂದೀಪ್ ಕುಮಾರ್ ಹಾಗೂ ಮಹಿಳೆಯರ ಜಾವೆಲಿನ್ ಸ್ಪರ್ಧೆಯಲ್ಲಿ ಅನು ರಾಣಿ ಕಂಚನ್ನು ಗೆದ್ದಿದ್ದಾರೆ.
ಸಂದೀಪ್ ಕುಮಾರ್ ಅವರು ಪುರುಷರ 10,000 ಮೀ. ಫೈನಲ್ ವಾಕ್ ರೇಸ್‌ನಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ. ಭಾರತವನ್ನು ಪ್ರತಿನಿಧಿಸಿದ ಸಂದೀಪ್ ಕಾಮನ್‌ವೆಲ್ತ್ ಗೇಮ್ಸ್ 2022ರ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇದನ್ನೂ ಓದಿ: CWG 2022: ಟ್ರಿಪಲ್ ಜಂಪ್‍ನಲ್ಲಿ ಡಬಲ್ ಧಮಾಕ – ಎಲ್ದೋಸ್ ಪೌಲ್‍ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್‌ಗೆ ಬೆಳ್ಳಿ
Advertisement
Advertisement
ಶನಿವಾರವಷ್ಟೇ ಮಹಿಳೆಯರ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಗೆದ್ದಿದ್ದರು. ಇಂದು ಪುರುಷರ ನಡಿಗೆ ಸ್ಪರ್ಧೆಯಲ್ಲಿ ಸಂದೀಪ್ ಕುಮಾರ್ 10,000 ಮೀ. ಅನ್ನು ಕೇವಲ 28:49.21 ಸಮಯದಲ್ಲಿ ಕ್ರಮಿಸಿ ಕಂಚನ್ನು ಬಾಚಿಕೊಂಡಿದ್ದಾರೆ.
Advertisement
Advertisement
ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಅನು ರಾಣಿ ಪಾತ್ರರಾಗಿದ್ದಾರೆ. 60 ಮೀ. ದೂರಕ್ಕೆ ಜಾವೆಲಿನ್ ಎಸೆದ ಅನು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: CWG-2022: ಭಾರತಕ್ಕೆ ಚಿನ್ನದ ಕಿಕ್ ಕೊಟ್ಟ ಬಾಕ್ಸರ್ಸ್, ಸಿಂಧು ಫೈನಲ್‌ಗೆ ಗ್ರ್ಯಾಂಡ್ ಎಂಟ್ರಿ