ಲಂಡನ್: ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‌ಗೆ ಇಂದು ಅದ್ಧೂರಿ ತೆರೆ ಬೀಳಲಿದೆ.
Advertisement
ಜುಲೈ 28ರಂದು ಆರಂಭಗೊಂಡ ಕ್ರೀಡಾಕೂಟ ಯಶಸ್ವಿಯಾಗಿ 11ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಮಾರೋಪ ಸಮಾರಂಭದೊಂದಿಗೆ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ. ಕ್ರೀಡಾಕೂಟದ ಅಂತ್ಯದ ಮುನ್ನದಿನವಾದ ನಿನ್ನೆ 10ನೇ ದಿನ ಭಾರತ ಒಂದೇ ದಿನ 5 ಚಿನ್ನ, 3 ಬೆಳ್ಳಿ, 7 ಕಂಚಿನ ಪದಕ ಸೇರಿ 15 ಪದಕಗಳನ್ನು ಬೇಟೆಯಾಡಿತ್ತು. ಈ ಮೂಲಕ ಒಟ್ಟು 52 ಪದಕಗಳೊಂದಿಗೆ ಪಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬಾಕ್ಸಿಂಗ್‍ನ 51 ಕೆಜಿ ಪುರುಷ ವಿಭಾಗದಲ್ಲಿ ಅಮಿತ್, 48 ಕೆಜಿ ಮಹಿಳೆಯರ ವಿಭಾಗದಲ್ಲಿ ನೀತು, 50 ಕೆಜಿ ಮಹಿಳೆಯರ ವಿಭಾಗದಲ್ಲಿ ನಿಖಾತ್ ಜರೀನ್ ಬಂಗಾರಕ್ಕೆ ಮುತ್ತಿಟ್ಟರು. ಪುರುಷರ ಟ್ರಿಪಲ್ ಜಂಪ್‍ನಲ್ಲಿ ಭಾರತಕ್ಕೆ ಚಿನ್ನ-ಬೆಳ್ಳಿ ಎರಡೂ ಸಿಕ್ಕಿತ್ತು. ಕಂಚಿನ ಪದಕ ಕೂಡ ಸ್ವಲ್ಪದರಲ್ಲಿ ಕೈತಪ್ಪಿತ್ತು. ಆ ಬಳಿಕ ಕ್ರಿಕೆಟ್‍ನಲ್ಲೂ ಕೂಡ ರೋಚಕ ಹೋರಾಟದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿತ್ತು. ಇದನ್ನೂ ಓದಿ: ವಿಂಡೀಸ್ ವಿರುದ್ಧದ ಕೊನೆಯ T20 ಪಂದ್ಯಕ್ಕೆ ರೋಹಿತ್ ಚಕ್ಕರ್ – ಕಾಮನ್‍ವೆಲ್ತ್ ಫೈನಲ್ ನೋಡಲು ಹಾಜರ್
Advertisement
Advertisement
ಇಂದು ಕೊನೆಯ ದಿನದ ಆಟ ಬಾಕಿ ಉಳಿದಿದ್ದು, ಇಂದು ಕೂಡ ಪದಕ ಬೇಟೆಯಾಡುವ ಸಾಧ್ಯತೆ ಇದೆ. ಈವರೆಗೆ ಭಾರತ 11 ಚಿನ್ನ, 15 ಬೆಳ್ಳಿ, 22 ಕಂಚಿನ ಪದಕ ಸೇರಿ ಒಟ್ಟು 55 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಕೊನೆಯ ದಿನ ಭಾರತ ಪಿ.ವಿ ಸಿಂಧು ಮತ್ತು ಪುರುಷರ ಹಾಕಿಯಲ್ಲಿ ಚಿನ್ನ ಗೆಲ್ಲುವ ವಿಶ್ವಾಸಲ್ಲಿದ್ದು, ಈ ಮೂಲಕ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್‍ನ್ನು ಕೆಳಗಿಳಿಸಿ ಮೇಲೆರುವ ತಕವದಲ್ಲಿದೆ. ಇದೀಗ ನ್ಯೂಜಿಲೆಂಡ್ 19 ಚಿನ್ನ, 12 ಬೆಳ್ಳಿ, 17 ಕಂಚು ಸೇರಿ ಒಟ್ಟು 48 ಪದಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇನ್ನೊಂದು ಚಿನ್ನದ ಪದಕ ಗೆದ್ದರೆ ಭಾರತ 4ನೇ ಸ್ಥಾನಕ್ಕೆ ತಲುಪಲಿದೆ. ಪದಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆನಡಾ ಇದ್ದು ಈ ಸ್ಥಾನಗಳಲ್ಲಿ ಮುಂದುವರಿಯುವುದು ಬಹುತೇಕ ಖಚಿತಗೊಂಡಿದೆ. ಇದನ್ನೂ ಓದಿ: Well Done Girls: ಗೋಲ್ಡ್ ಜಸ್ಟ್ ಮಿಸ್ – ಚೊಚ್ಚಲ ಪ್ರಯತ್ನದಲ್ಲೇ ಬೆಳ್ಳಿಗೆದ್ದ ವನಿತೆಯರು
Advertisement
ಬರ್ಮಿಂಗ್‍ಹ್ಯಾಮ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ 72 ಕಾಮನ್‍ವೆಲ್ತ್ ರಾಷ್ಟ್ರಗಳ 5000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿದ್ದರು. ಭಾರತದಿಂದ 214 ಸ್ಪರ್ಧಿಗಳು ವಿವಿಧ ಸ್ಪರ್ಧೆಯಲ್ಲಿ ಕಣಕ್ಕಿದಿದ್ದರು.