ಲಂಡನ್: ಕಾಮನ್‍ವೆಲ್ತ್ ಗೇಮ್ಸ್‌ನ ಪುರುಷರ 109 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ಲವ್‌ಪ್ರೀತ್ ಸಿಂಗ್ ಒಟ್ಟು 355 ಕೆಜಿ ವೇಟ್ ಲಿಫ್ಟ್ ಮಾಡಿ ಕಂಚಿನ ಪದಕ ಗೆದ್ದಿದ್ದಾರೆ.
Advertisement
ಲವ್‌ಪ್ರೀತ್ ಸಿಂಗ್ ಸ್ನ್ಯಾಚ್‍ನಲ್ಲಿ 163 ಕೆಜಿ ಮತ್ತು ಕ್ಲೀನ್ & ಜರ್ಕ್‍ನಲ್ಲಿ 192 ಕೆಜಿ ಸೇರಿ ಒಟ್ಟು 355 ಕೆಜಿ ಭಾರ ಎತ್ತಿ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಈ ಪದಕದೊಂದಿಗೆ ಭಾರತ ವೇಟ್ ಲಿಫ್ಟಿಂಗ್‍ನಲ್ಲಿ ಒಟ್ಟು 9ನೇ ಪದಕ ಗೆದ್ದುಕೊಂಡಿದೆ. ಇದನ್ನೂ ಓದಿ: CWG 2022: ಲಾನ್ ಬಾಲ್ಸ್‌ನಲ್ಲಿ ಚಿನ್ನ – ವರ್ಕೌಟ್ ಆಯ್ತು ಧೋನಿ ಟಿಪ್ಸ್!
Advertisement
Team ???????? wins its 9th ????????♀️ medal through Lovepreet Singh’s ???? in the Men’s 109 KG Category at @birminghamcg22 ! #EkIndiaTeamIndia #B2022 pic.twitter.com/PXijZhHIrK
— Team India (@WeAreTeamIndia) August 3, 2022
Advertisement
ಈ ಮೂಲಕ ಭಾರತ ಒಟ್ಟು 5 ಚಿನ್ನ, 5 ಬೆಳ್ಳಿ, 4 ಕಂಚಿನ ಪದಕ ಸೇರಿ ಒಟ್ಟು 14 ಪದಕ ಗೆದ್ದುಕೊಂಡು 6ನೇ ಸ್ಥಾನದಲ್ಲಿದೆ. ಈ ಬಾರಿ ಕಾಮನ್‍ವೇಲ್ತ್ ಗೇಮ್ಸ್‌ನಲ್ಲಿ ಒಟ್ಟು 9 ಪದಕ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಸಿಕ್ಕಿದೆ. ಈ ಮೊದಲು ಮೀರಾಬಾಯಿ ಚಾನು, ಜೆರೆಮಿ ಲಾಲ್ರಿನ್ನುಂಗಾ, ಅಚಿಂತಾ ಶೆಯುಲಿ, ಸಂಕೇತ್ ಸರ್ಗರ್, ಬಿಂದ್ಯಾರಾಣಿ ರಾಣಿ, ಗುರುರಾಜ್ ಪೂಜಾರಿ, ಹಜಿರ್ಂದರ್ ಕೌರ್, ವಿಕಾಸ್ ಪದಕ ಗೆದ್ದಿದ್ದರು. ಇದನ್ನೂ ಓದಿ: ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಪ್ರಿಯಾ ಮೋಹನ್‍ಗೆ 5 ಲಕ್ಷ ನಗದು ಪುರಸ್ಕಾರ: ನಾರಾಯಣಗೌಡ