ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಹಾಕಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ ಸೋಲಿಸಿ ಭಾರತದ ಮಹಿಳಾ ತಂಡ ಕಂಚಿನ ಪದಕ ಗೆದ್ದಿದೆ.
Advertisement
ಕಂಚಿನ ಪದಕಕ್ಕಾಗಿ ನಡೆದ ಹೋರಾಟ ಆರಂಭದಿಂದಲೂ ಎರಡು ತಂಡಗಳ ಮಧ್ಯೆ ಜಿದ್ದಾ ಜಿದ್ದಿನಿಂದ ಕೂಡಿತ್ತು. ಭಾರತ ಪ್ರಥಮ ಗೋಲು ಬಾರಿಸಿ ಪಂದ್ಯದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಆ ಬಳಿಕ ನ್ಯೂಜಿಲೆಂಡ್ ಒಂದು ಗೋಲು ಬಾರಿಸಿತು. ಈ ವೇಳೆ ಪಂದ್ಯ 1-1ರಲ್ಲಿ ಸಮಬಲ ಗೊಂಡಿತು. ಫುಲ್ ಟೈಮ್ ಮುಗಿದಾಗ ಪಂದ್ಯ 1-1ರಲ್ಲಿ ಸಮಬಲ ಸಾಧಿಸಿದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಇದನ್ನೂ ಓದಿ: ನನ್ನ ತಪ್ಪುಗಳಿಂದ ರಾಷ್ಟ್ರಗೀತೆ ಮೊಳಗಲಿಲ್ಲ – ಅದು ತಪ್ಪಲ್ಲ ಕ್ಷಮೆ ಕೇಳುವ ಅಗತ್ಯವಿಲ್ಲ: ಮೋದಿ
Advertisement
India Women's won the bronze in the Hockey in Commonwealth Games 2022. #Hockey ????
Remember the name- Savita Puniya???? Defended very well.????✨️ #hockeyindia #CommonwealthGames2022 #india #hockeywomen pic.twitter.com/VNEmfrQPq8
— MERSAL MADHAN (@mersalmadhan06) August 7, 2022
Advertisement
ಪೆನಾಲ್ಟಿ ಶೂಟೌಟ್‍ನಲ್ಲಿ ಭಾರತ ತಂಡದ ನಾಯಕಿ ಮತ್ತು ಗೋಲ್‍ಕೀಪರ್ ಸವಿತಾ ಪುನಿಯಾ ನಾಲ್ಕರಲ್ಲಿ ಮೂರು ಸೇವ್ ಮಾಡಿದ ಪರಿಣಾಮವಾಗಿ ಭಾರತ ತಂಡ ರೋಚಕವಾಗಿ ಗೆದ್ದು ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಭಾರತದ ಪುರುಷರ ಹಾಕಿ ತಂಡ ಕೂಡ ಫೈನಲ್‍ಗೆ ಲಗ್ಗೆ ಇಟ್ಟಿದೆ. ಚಿನ್ನ ಅಥವಾ ಬೆಳ್ಳಿ ಪದಕ ಖಚಿತಗೊಂಡಿದೆ. ಇದನ್ನೂ ಓದಿ: ಇದು ಯಾವ್ ಶಾಟ್ ಗುರು – ಪಂತ್ ಕಾಲೆಳೆದ ನೆಟ್ಟಿಗರು