ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ ಬಾರಿಸಿದ ಬೌಂಡರಿ ಶಾಟ್ ಒಂದು ಗಮನ ಸೆಳೆಯುತ್ತಿದೆ.
Advertisement
ಪಂತ್ ಹೊಡಿಬಡಿ ದಾಂಡಿಗ. ಕ್ರೀಸ್‌ಗೆ ಬಂದ ನಂತರ ಅಬ್ಬರ ಬ್ಯಾಟಿಂಗ್ ಮೂಲಕ ರನ್ ಹೆಚ್ಚಿಸುವ ಆಕ್ರಮಣ ಶೈಲಿಯ ಆಟಕ್ಕೆ ಪಂತ್ ಫೇಮಸ್. ವಿಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 61 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡ ಬಳಿಕ ಕ್ರೀಸ್‌ಗೆ ಆಗಮಿಸಿದ ಪಂತ್ ಆರಂಭದಿಂದಲೇ ಅಬ್ಬರದಾಟ ಆರಂಭಿಸಿದರು. ವಿಂಡೀಸ್ ಬೌಲರ್‌ಗಳಿಗೆ ಬೌಂಡರಿಗಳ ರುಚಿ ತೋರಿಸುತ್ತ ಸಾಗಿದ ಪಂತ್, ಮೆಕಾಯ್ ಎಸೆದ ಎಸೆತ ಒಂದಕ್ಕೆ ಎಕ್ಸ್ಟ್ರ ಕವರ್ ಶಾಟ್ ಬೌಂಡರಿ ಪ್ರೇಕ್ಷಕರ ಮನಗೆದ್ದಿತ್ತು. ಪಂತ್ ಒಂದು ಕಾಲೆತ್ತಿ ಒಂಟಿ ಕಾಲಿನಲ್ಲಿ ನಿಂತು ಬೌಂಡರಿ ಬಾರಿಸಿದ ಭಂಗಿ ಕಂಡು ಪ್ರೇಕ್ಷಕರು ಬೆರಗಾದರು. ಇತ್ತ ನೆಟ್ಟಿಗರು ಇದು ಯಾವ್ ಶಾಟ್ ಗುರು, ಬ್ಯಾಟಿಂಗ್‍ನಲ್ಲಿ ಯೋಗ ಮಾಡಿದ ಪಂತ್ ಹೀಗೆ ಬಗೆ ಬಗೆಯ ಕಾಮೆಂಟ್ ಮೂಲಕ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಿಕ್ಸ್ ಸಿಡಿಸಿ ಅಫ್ರಿದಿಯನ್ನು ಹಿಂದಿಕ್ಕಿದ ಹಿಟ್‌ಮ್ಯಾನ್ – ಭಾರತಕ್ಕೆ ಸರಣಿ ಜಯ
Advertisement
https://twitter.com/__memeheist__/status/1556123248256897024
Advertisement
ಇತ್ತ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‍ಗಳಿಸಿತು. 192 ರನ್‍ಗಳ ಗುರಿಯನ್ನು ಪಡೆದ ವಿಂಡೀಸ್ 19.1 ಓವರ್‌ಗಳಲ್ಲಿ 132 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವಿಂಡೀಸ್ ವಿರುದ್ಧ 59 ರನ್‍ಗಳ ಜಯ ಸಾಧಿಸಿ 5 ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಇದನ್ನೂ ಓದಿ: CWG 2022: ಚಿನ್ನಕ್ಕೆ ಮುತ್ತಿಟ್ಟ ರವಿ ಕುಮಾರ್ ದಹಿಯಾ, ವಿನೇಶ್ ಫೋಗಟ್ – ಪೂಜಾ ಗೆಹ್ಲೋಟ್‍ಗೆ ಕಂಚು