ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಪುರುಷರ ಟ್ರಿಪಲ್ ಜಂಪ್‍ನಲ್ಲಿ ಭಾರತಕ್ಕೆ ಒಂದೇ ಇವೆಂಟ್‍ನಲ್ಲಿ 2 ಪದಕ ಸಿಕ್ಕಿದೆ. ಎಲ್ದೋಸ್ ಪೌಲ್ ಚಿನ್ನದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.
Advertisement
ಫೈನಲ್‍ನಲ್ಲಿ ಎಲ್ದೋಸ್ ಪೌಲ್ 17.03 ಮೀ. ಹಾರಿ ಚಿನ್ನದ ನೆಗೆ ಬೀರಿದರೆ, ಅಬ್ದುಲ್ಲಾ ಅಬೂಬಕರ್ 17.02 ಮೀ. ಹಾರಿ ಬೆಳ್ಳಿ ಪದಕ ಗೆದ್ದರು. ಈ ನಡುವೆ ಚಿನ್ನಗೆದ್ದ ಎಲ್ಡೋಸ್ ಪೌಲ್‍ಗಿಂತ ಬೆಳ್ಳಿಗೆದ್ದ ಅಬ್ದುಲ್ಲಾ ಅಬೂಬಕರ್ ನೆಗೆತ ಕೇವಲ 1 ಮೀ. ಅಂತರ ಕಂಡುಬಂದಿದ್ದು ವಿಶೇಷವಾಗಿತ್ತು. ಈ ಮೂಲಕ ಭಾರತದ ಟ್ರಿಪಲ್ ಜಂಪ್ ಸ್ಪರ್ಧಿಗಳು 22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಟ್ರಿಪಲ್ ಜಂಪ್‌ನಲ್ಲಿ ಮೂರು ಪದಕಗಳು ಭಾರತದ ಪಾಲಾಗುವ ಸಾಧ್ಯತೆ ಇತ್ತು. ಆದರೆ ಪ್ರವೀಣ್ ಚಿತ್ರವೇಲ್ 16.89 ಮೀ. ಹಾರಿ ಕಂಚಿನ ಪದಕದಿಂದ ವಂಚಿರಾದರು. ಜಹ್-ನ್ಹೈ ಪೆರಿಚೀಫ್ 16.92 ಮೀ. ಹಾರಿ ಕಂಚು ಗೆದ್ದರು. ಇದನ್ನೂ ಓದಿ: CWG-2022: ಭಾರತಕ್ಕೆ ಚಿನ್ನದ ಕಿಕ್ ಕೊಟ್ಟ ಬಾಕ್ಸರ್ಸ್, ಸಿಂಧು ಫೈನಲ್‌ಗೆ ಗ್ರ್ಯಾಂಡ್ ಎಂಟ್ರಿ
Advertisement
Advertisement
This is called total domination! India grabs both gold and silver, just missed the third position by barest of margin.
#CWG22 #triplejump pic.twitter.com/ipJeXVAzZg
— Anuj Deswal (@AnujDeswal013) August 7, 2022
Advertisement
10ನೇ ದಿನದ ಆರಂಭದಲ್ಲಿ ಭಾರತದ ಹಾಕಿ ತಂಡ ಕಂಚಿನ ಪದಕದ ಬೇಟೆಯೊಂದಿಗೆ ಆರಂಭಗೊಂಡ ಪದಕ ಬೇಟೆಗೆ ಬಾಕ್ಸರ್‌ಗಳು 2 ಚಿನ್ನದ ಪದಕ ಗೆದ್ದು ಮೆರುಗು ಹೆಚ್ಚಿಸಿದ್ದಾರೆ. ಈ ಮೂಲಕ ಕೂಟದಲ್ಲಿ ಭಾರತ 16 ಚಿನ್ನ, 12 ಬೆಳ್ಳಿ, 17 ಕಂಚಿನ ಪದಕ ಸೇರಿ ಒಟ್ಟು 45 ಪದಕ ಬಾಚಿಕೊಂಡಿದೆ. ಇದನ್ನೂ ಓದಿ: ಮಹಿಳೆಯರ ಹಾಕಿಯಲ್ಲಿ ರೋಚಕ ಕಾದಾಟ – ಪೆನಾಲ್ಟಿ ಶೂಟೌಟ್‍ನಲ್ಲಿ ಗೆದ್ದು ಕಂಚು ಮುಡಿಗೇರಿಸಿಕೊಂಡ ಭಾರತ