ಗೋಲ್ಡ್ ಕೋಸ್ಟ್: ಮಹಿಳೆಯರ 45-48 ಕೆಜಿ ವಿಭಾಗದ ಕಾಮನ್ ವೆಲ್ತ್ ಬಾಕ್ಸಿಂಗ್ ನಲ್ಲಿ ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ.
ಫೈನಲ್ಸ್ ನಲ್ಲಿ ಉತ್ತರ ಐರ್ಲೆಂಡ್ ನ ಕ್ರಿಸ್ಟಿನಾ ಒಹಾರಾ ಅವರನ್ನು 5-0 ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
Advertisement
35ರ ಹರೆಯದ ಮೇರಿ ಕೋಮ್ ಅವರು ಭಾರತಕ್ಕೆ 18 ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಇದು ಅವರ ಕಾಮನ್ ವೆಲ್ತ್ ಗೇಮ್ಸ್ ನ ಮೊದಲ ಚಿನ್ನದ ಪದಕವಾಗಿದೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗೆಲ್ಲುವುದು ಒಂದು ಮೈಲಿಗಲ್ಲು. ಚಿನ್ನದ ಪದಕವನ್ನು ಗೆದ್ದಿರುವುದು ವಿಶೇಷ ಸಂತೋಷವಾಗಿದೆ ಎಂದು ಮೇರಿ ಕೋಮ್ ಸಂತಸ ವ್ಯಕ್ತ ಪಡಿಸಿದ್ದಾರೆ.
Advertisement
ಈ ಚಿನ್ನದ ಪದಕ ಹಾಗೂ ಇಲ್ಲಿಯವರಗೆ ಗೆದ್ದಿರುವ ಎಲ್ಲಾ ಪದಕಗಳು ನನಗೆ ಬಹಳ ವಿಶೇಷ. ಪ್ರತಿ ಗೆಲುವಿಗೆ ಬಹಳಷ್ಟು ಶ್ರಮ ಹಾಕಿದ್ದೇನೆ. ಎಲ್ಲಿಯ ತನಕ ಸಧೃಡಳಾಗಿರುತ್ತೇನೋ ಅಲ್ಲಿಯ ತನಕ ಹೀಗೆ ಮುಂದುವರೆಯಲು ಇಚ್ಚಿಸುತ್ತೇನೆ ಎಂದು ತಿಳಿಸಿದರು.
Advertisement
ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರ ಚಿನ್ನದ ಪದಕ ಗೆದ್ದಿದ್ದಾರೆ. 20 ವರ್ಷದ ನೀರಜ್ 86.47ಮೀ ದೂರ ಎಸೆಯುವುದರ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಜಾವೆಲಿನ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಈ ಮೂಲಕ ಭಾರತಕ್ಕೆ 21 ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.