ಬೆಂಗಳೂರು: ಕಾಂಗ್ರೆಸ್ (Congress) ಶಾಸಕರಿಗೂ ಕಮಿಷನ್ ಬಿಸಿ ತಟ್ಟಿದ್ದು, ಅಸಹನೆ ಬೆಟ್ಟದಷ್ಟಾಗಿದೆ. ಸಿಎಂ ಸಿದ್ದರಾಮಯ್ಯಗೂ (Siddaramaiah) ಶಾಸಕರ ಅಸಮಾಧಾನದ ಬಿಸಿ ತಟ್ಟಿದೆ.
ಬಿಜೆಪಿ ವಿರುದ್ಧ ಪೇ ಸಿಎಂ, 40% ಕಮಿಷನ್ ಆರೋಪದ ಕ್ಯಾಂಪೇನ್ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮುಜುಗರಕ್ಕೀಡು ಮಾಡಿದೆ. ಈಗ ಕಾಂಗ್ರೆಸ್ ಶಾಸಕರಿಂದಲೇ ಕಮಿಷನ್, ಲಂಚಗುಳಿತನದ ಆರೋಪ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆ ನೋವಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಲೂಟಿಕೋರರ ಸರ್ಕಾರ, ಮಾನ ಮರ್ಯಾದೆ ಇದ್ದರೆ ಸಿಎಂ, ಡಿಕೆಶಿ ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ
ಕಮಿಷನ್ (Commission) ಕಿತ್ತಾಟ ಜೋರಾಗುತ್ತಿದ್ದು, ಶಾಸಕ ಬಿ.ಆರ್.ಪಾಟೀಲ್ ಬಳಿಕ ಈಗ ರಾಜು ಕಾಗೆ ಸರದಿ. ಲಂಚಾವತರದ ಬಗ್ಗೆ ಮಾತನಾಡಿ ಹೇಳಿಕೆಗೆ ಈಗಲೂ ಬದ್ಧ ಎಂದು ಬಿ.ಆರ್.ಪಾಟೀಲ್ ಹೇಳಿದರೇ, ಜಮೀರ್ ರಾಜೀನಾಮೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಮತ್ತೊಬ್ಬ ಕಾಂಗ್ರೆಸ್ ಶಾಸಕ ರಾಜು ಕಾಗೆ ಬಹಿರಂಗ ಗುಟುರು ಹಾಕಿದ್ದು, ಕಾಸು ಕೊಟ್ಟು ವರ್ಕ್ ಆರ್ಡರ್ ಪಡೆಯಬೇಕು ಎಂದು ರಾಜೀನಾಮೆ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಉದ್ಯಮಿ ಮೋಹನ್ ದಾಸ್ ಪೈ ಮೇಲೆ FIR ಖಂಡನೀಯ – ಯಡಿಯೂರಪ್ಪ
ಇನ್ನು ಅಸಮಾಧಾನಿತ ಶಾಸಕರನ್ನ ಕರೆದು ಮಾತನಾಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಮುಲಾಮು ಹಚ್ಚುವ ಸಾಧ್ಯತೆಗಳಿವೆ. ಶಾಸಕರ ಆರೋಪಗಳಿಗೆ ಉತ್ತರ ಸಿಗುತ್ತಾ? ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಡಾ.ವಿಷ್ಣುವರ್ಧನ್ 75: ಯಜಮಾನರ ಅಮೃತ ಮಹೋತ್ಸವಕ್ಕೆ ಸಿದ್ಧತೆ
ಕಾಂಗ್ರೆಸ್ ಸರ್ಕಾರಕ್ಕೆ ಕೈ ಶಾಸಕರ ಬಿಸಿ ಏಕೆ?
*ಮೊದಲ ಒಂದೂವರೆ ವರ್ಷ ಗ್ಯಾರಂಟಿ ಯೋಜನೆಗಳತ್ತ ಗಮನ.
*ಸರ್ಕಾರದ ಬೊಕ್ಕಸದಿಂದ ಅನುದಾನ ಒದಗಿಸಲು ಸರ್ಕಸ್.
*ಆಡಳಿತ ಪಕ್ಷದ ಶಾಸಕರುಗಳ ಕ್ಷೇತ್ರಗಳಿಗೂ ಅನುದಾನ ಕೊರತೆ.
*ಹೊಸ ಯೋಜನೆಗಳು, ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲು ದೊರೆಯದ ಮಂಜೂರಾತಿ.
*ಈಗ ಕನಿಷ್ಠ 70ರಿಂದ 80 ಕೋಟಿ ಅನುದಾನ ಕೊಡುವ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ.
*ಈಗ ಮಂಜೂರಾತಿ ಆಗಿರುವ ಯೋಜನೆಗಳಿಗೂ ಕಮಿಷನ್ ಕಾಟ ಆರೋಪ.
*ಶಾಸಕರ ಜೊತೆ ಸಚಿವರ ನಡವಳಿಕೆ ಸರಿ ಇಲ್ಲ ಎಂಬ ಆರೋಪ, ಸಮನ್ವಯತೆ ಕೊರತೆ.
*ಶಾಸಕರುಗಳಲ್ಲಿ ಹೆಚ್ಚಾದ ಅಸಹನೆ, ಬಹಿರಂಗವಾಗಿಯೇ ಸ್ಫೋಟ.