ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಧಾರಣೆ ಏರಿಕೆ ಆಗುತ್ತಿದ್ದಂತೆ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಭಾರೀ ಏರಿಕೆಯಾಗಿದೆ. 19 ಕೆಜಿ ತೂಕದ ಪ್ರತಿ ಸಿಲಿಂಡರ್ ಬೆಲೆ 266 ರೂ. ಏರಿಕೆಯಾಗಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ 2 ಸಾವಿರ ರೂ. ಗಡಿದಾಟಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಕಂಡಿಲ್ಲ.
Advertisement
Advertisement
ಈ ಮೊದಲು 19 ಕೆಜಿ ಸಿಲಿಂಡರ್ ಬೆಲೆ 1,733 ರೂ. ಇದ್ದರೆ ಈಗ ಇದು 2,000.50 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 1,683 ರೂ. ಇದ್ದರೆ ಈಗ ಇದು 1,950 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ಈಗ 2,073.50 ರೂ. ಮತ್ತು ಚೆನ್ನೈನಲ್ಲಿ ಈ ಉತ್ಪನ್ನದ ಬೆಲೆ 2,133 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಅಪ್ಪು ಅಂತ್ಯಕ್ರಿಯೆ ರಹಸ್ಯ ಪ್ಲ್ಯಾನ್ – ಸುರ್ಯೋದಯಕ್ಕೂ ಮುನ್ನ ಅಂತಿಮಯಾನ
Advertisement
ಪೆಟ್ರೋಲ್ ಡೀಸೆಲ್ ಬೆಲೆ 35 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 113.11 ರೂ. ಇದ್ದರೆ, ಡೀಸೆಲ್ ಬೆಲೆ 104.05 ರೂ. ಇದೆ. ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್‌ಗೆ 109.69 ರೂ. ಇದ್ದರೆ ಡೀಸೆಲ್ 98.42 ರೂ.ಗೆ ತಲುಪಿದೆ. ಇದನ್ನೂ ಓದಿ: ಕಚ್ಚಾ ತೈಲ ದರ ಏರಿಕೆ – 150 ರೂ. ಗಡಿ ದಾಟುತ್ತಾ ಪೆಟ್ರೋಲ್ ಬೆಲೆ?
Advertisement
ಪೆಟ್ರೋಲ್, ಡೀಸೆಲ್ ದರ ಮುಂಬೈನಲ್ಲಿ ಕ್ರಮವಾಗಿ 115.50 ರೂ. ಮತ್ತು 106.62 ರೂ. ಇದ್ದರೆ, ಕೋಲ್ಕತ್ತಾದಲ್ಲಿ 110.15 ರೂ. ಮತ್ತು 101.56 ರೂ. ಇದೆ. ಇದನ್ನೂ ಓದಿ: ಅಮೇಜಾನ್‌ಗೆ ಸೇರಿದ ಕಂಟೇನರ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ರಾಬರಿ