– ರಾಜ್ ಕುಟುಂಬವನ್ನು ಶನಿವಾರ ರಾತ್ರಿಯೇ ಒಪ್ಪಿಸಿದ್ದ ಸಿಎಂ
– ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾತ್ರಿ ಬೇರೆ ಯೋಜನೆ
ಬೆಂಗಳೂರು: ಶನಿವಾರ ಸಂಜೆಯವರೆಗೆ ಅಪ್ಪು ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ 11ಕ್ಕೆ ನಡೆಯಬಹುದು ಎಂದು ಹೇಳಲಾಗಿತ್ತು. ಬೆಳಗ್ಗೆವರೆಗೂ ಅಪ್ಪು ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದರೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಡದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾತ್ರಿ ಬೇರೆ ಯೋಜನೆ ಮಾಡಲಾಯಿತು.
ಭಾನುವಾರವಾದ ಇಂದು ತಡವಾಗಿ ಅಪ್ಪು ಅಂತಿಮಯಾನ, ಅಂತ್ಯಕ್ರಿಯೆಗೆ ಸಮಯ ನಿಗದಿ ಮಾಡಿದರೆ ಜನಸ್ತೋಮ ನಿಯಂತ್ರಣ ಕಷ್ಟ ಎಂದು ಭಾವಿಸಿದ ಸರ್ಕಾರ, ಕುಟುಂಬದೊಂದಿಗೆ ಮಾತನಾಡಿ, ನಸುಕಿನ ಜಾವ 3:30ಕ್ಕೆ ಸಾರ್ವಜನಿಕ ದರ್ಶನ ಅಂತ್ಯಗೊಳಿಸಿತು. ಅಷ್ಟಾದರೂ ಕೂಡ ಅಪ್ಪು ಸಂಪಾದಿಸಿದ್ದ ಅಭಿಮಾನಿಗಳ ಸಾಗರ ಕರಗಲೇ ಇಲ್ಲ. ಇವತ್ತು ಬೆಳಗ್ಗಿನ ಜಾವದಿಂದ ಅಂತ್ಯಕ್ರಿಯೆವರೆಗೆ ಸರ್ಕಾರ ಮಾಡಿಕೊಂಡಿದ್ದ ಯೋಜನೆ ಸಾಂಗವಾಗಿ ನಡೆಯಿತು.
Advertisement
Advertisement
ಶನಿವಾರ ರಾತ್ರಿ 9:00 – ರಾಜ್ ಕುಟುಂಬದ ಜೊತೆ ಸಿಎಂ ಸಭೆ
ಕಂಠೀರವ ಕ್ರೀಡಾಂಗಣದಲ್ಲಿ ರಾಜ್ ಕುಟುಂಬ ಸದಸ್ಯರ ಜೊತೆ ಸಿಎಂ ಸಭೆ ನಡೆಸಿದರು. ಬೆಳಕು ಹರಿಯುವ ಮುನ್ನವೇ ಅಂತಿಮ ಯಾತ್ರೆ. ಸೂರ್ಯೋದಯದ ನಂತರ ವಿಧಿವಿಧಾನ ಅಂತ ರಾಜ್ ಕುಟುಂಬವನ್ನು ಸಿಎಂ ಒಪ್ಪಿಸಿದ್ದರು. ಅಪ್ಪು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಗಣ್ಯರಿಗೆ ಈ ಮಾಹಿತಿ ಹೋಗಿತ್ತು.
Advertisement
ಶನಿವಾರ ರಾತ್ರಿ 9:30 – ಪೊಲೀಸರು, ಬಿಬಿಎಂಪಿಗೆ ಸೂಚನೆ
ರಾತ್ರಿ 3:30ರೊಳಗೆ ಸ್ಟೇಡಿಯಂ ಒಳಗೆ ಬಂದವರಿಗೆ ಮಾತ್ರ ಅಂತಿಮ ದರ್ಶನ ಅವಕಾಶ. 4 ಗಂಟೆಗೆಲ್ಲಾ ಅಂತಿಮ ದರ್ಶನ ಅಂತ್ಯ. 4.30ಕ್ಕೆಲ್ಲಾ ಅಂತಿಮ ಯಾನ ಶುರು ಆಗಬೇಕು. ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಕಮೀಷನರ್ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಕಾರ್ಯದ ಹೊಣೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಿಎಂ ಸೂಚನೆ ನೀಡಿದ್ದರು.
Advertisement
ನ. 3:30 – ಸಾರ್ವಜನಿಕ ದರ್ಶನ ಅಂತ್ಯ (ಸ್ಟೇಡಿಯಂ ಒಳಗೆ ಹೋದವರಿಗಷ್ಟೇ ದರ್ಶನ)
ನ. 3:40 – ಅಂತಿಮಯಾತ್ರೆಗಾಗಿ ವಾಹನ ಆಗಮನ (ಕುಟುಂಬಸ್ಥರ ಕಣ್ಣೀರು)
ಬೆ. 4:20 – ವೋಲ್ವೋ ಬಸ್‍ನಲ್ಲಿ ಸ್ಟುಡಿಯೋದತ್ತ ಕುಟುಂಬಸ್ಥರು
ಬೆ. 4:30 – ಪುನೀತ್ ಹಣೆಗೆ ಮುತ್ತಿಟ್ಟ ಸಿಎಂ ( ಕಂಠೀರವ ಸ್ಟೇಡಿಯಂಗೆ ಸಿಎಂ ಆಗಮನ )
ಬೆ. 4:40 – ಅಪ್ಪು ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಯಶ್
ಬೆ. 4:45 – ಶ್ರದ್ಧಾಂಜಲಿ ವಾಹನಕ್ಕೆ ಅಪ್ಪು ಪಾರ್ಥಿವ ಶರೀರ ಶಿಫ್ಟ್
ಬೆ. 4:50 – ಸ್ಟೇಡಿಯಂನಿಂದ ಅಪ್ಪು ಅಂತಿಮ ಯಾತ್ರೆ ಆರಂಭ ಇದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ
ಬೆ. 5:00 – ರಸ್ತೆಗಳಲ್ಲಿ ಜನವೋ ಜನ (ಅಪ್ಪು ಪಾರ್ಥಿವ ಶರೀರ ಇದ್ದ ವಾಹನದ ಹಿಂದೆ ಓಡಿದ ಅಭಿಮಾನಿಗಳು)
ಬೆ. 5:05 – ಮೈಸೂರು ಬ್ಯಾಂಕ್ ವೃತ್ತ ತಲುಪಿದ ಪಾರ್ಥಿವ ಶರೀರ
ಬೆ. 5:20 – ಯಶವಂತಪುರ ಸರ್ಕಲ್ ತಲುಪಿದ ಅಂತಿಮಯಾನ
ಬೆ. 5:30 – ಕಂಠೀರವ ಸ್ಟುಡಿಯೋಗೆ ಗಣ್ಯರ ದಂಡು (ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ವಿಜಯೇಂದ್ರ, ಡಿಕೆಶಿ ಸಹಿತ ಗಣ್ಯರು)
ಬೆ. 5:55 – ಕಂಠೀರವ ಸ್ಟುಡಿಯೋ ತಲುಪಿದ ಅಪ್ಪು ಪಾರ್ಥಿವ ಶರೀರ
ಬೆ.6:05 – ಪುನೀತ್‍ಗೆ ಗಣ್ಯರಿಂದ ಪುಷ್ಪ ನಮನ ಇದನ್ನೂ ಓದಿ: ಅಪ್ಪಾಜಿ ಕುಟುಂಬಸ್ಥರಿಗೆಲ್ಲಾ ಕೋಳಿ, ಕಜ್ಜಾಯ ಅಂದ್ರೆ ಬಹಳ ಪ್ರೀತಿ: ಕುಮಾರ್ ಬಂಗಾರಪ್ಪ
ಬೆ. 6.37 – ಪುನೀತ್ ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರ
ಬೆ. 6:50 – ಕುಟುಂಬಸ್ಥರಿಂದ ಪೂಜೆ
ಬೆ. 7:30 – ಪುನೀತ್ ಅಂತ್ಯಕ್ರಿಯೆ ವಿಧಿವಿಧಾನ ಆರಂಭ
ಬೆ. 7.35 – ಪತ್ನಿ, ಮಕ್ಕಳಿಂದ ಕಣ್ಣೀರ ವಿದಾಯ
ಬೆ. 8:10 – ಅಪ್ಪು ಸಮಾಧಿ ಕಾರ್ಯ ಪೂರ್ಣ
ಬೆ. 8.35 – ಸಮಾಧಿಗೆ ವಿನಯ್ ರಾಜ್‍ಕುಮಾರ್ ಪೂಜೆ
ಬೆ. 8:45 – ಕುಟುಂಬಸ್ಥರಿಂದ ಪೂಜೆ, ನಿರ್ಗಮನ