ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಶ್ವೇಶ್ವರ ರಾವ್ (Actor Visweswara Rao) ನಿಧನರಾಗಿದ್ದಾರೆ. ಡೇನಿಯಲ್ ಬಾಲಾಜಿ (Daniel Balaji) ನಿಧನದ ಶಾಕ್ ಬೆನ್ನಲ್ಲೇ ವಿಶ್ವೇಶ್ವರ ರಾವ್ ವಿಧಿವಶರಾಗಿರೋದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಸಾಕಷ್ಟು ಕಾಮಿಡಿ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ವಿಶ್ವೇಶ್ವರ ರಾವ್ ಅವರು ಅನಾರೋಗ್ಯದಿಂದ ಏಪ್ರಿಲ್ 2ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಹಲವು ದಿನಗಳಿಂದ ವಿಶ್ವೇಶ್ವರ ರಾವ್ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಹಠಾತ್ ನಿಧನ ಕುಟುಂಬಕ್ಕೆ ಶಾಕ್ ನೀಡಿದೆ. ನಟನ ನಿಧನಕ್ಕೆ ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಶೀಘ್ರದಲ್ಲೇ ಅಮೆರಿಕದ ಹುಡುಗನ ಜೊತೆ ರಶ್ಮಿ ಗೌತಮ್ ಮದುವೆ
ಅಂದಹಾಗೆ, ವಿಕ್ರಮ್ ಸೂರ್ಯ ನಟನೆಯ ‘ಪಿತಾಮಗನ್’ ಚಿತ್ರದಲ್ಲಿ ಲೈಲಾ ತಂದೆಯ ಪಾತ್ರದಲ್ಲಿ ವಿಶ್ವೇಶ್ವರ ರಾವ್ ನಟಿಸಿದ್ದಾರೆ. ಬಾಲನಟನಾಗಿ 150ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.