ಸಾಧು ಕೋಕಿಲಗೆ ಮಾತೃ ವಿಯೋಗ

Public TV
1 Min Read
sadhu kokila collage

ಬೆಂಗಳೂರು: ಸ್ಯಾಂಡಲ್‍ವುಡ್ ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ತಾಯಿ ವಿಧಿವಶರಾಗಿದ್ದಾರೆ.

ಸಾಧು ಕೋಕಿಲಾ ಅವರ ತಾಯಿ ನಿಧನರಾಗಿದ್ದು, ಸ್ವತಃ ಈ ಸುದ್ದಿಯನ್ನು ಸಾಧು ಕೋಕಿಲಾ ಅವರ ಸಹೋದರಿ ಉಷಾ ಕೋಕಿಲಾ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಉಷಾ ಕೋಕಿಲ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ “ನನ್ನ ತಾಯಿ ಇನ್ನಿಲ್ಲ” ಎಂದು ಬರೆದುಕೊಂಡಿದ್ದಾರೆ.

ಉಷಾ ಕೋಕಿಲಾ ತಮ್ಮ ತಾಯಿಯ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕಿ, ನನ್ನ ತಾಯಿ ಇನ್ನಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಮಂಗಳ ಅವರು ಆರ್ಕೇಸ್ಟ್ರಾದಲ್ಲಿ ಗಾಯಕಿ ಆಗಿದ್ದರು. ಸಾಧು ಕೋಕಿಲಾ ತಂದೆಯವರು ಕೂಡ ಪಿಟೀಲು ವಾದ್ಯ ನುಡಿಸುತ್ತಿದ್ದರು.

ಇತ್ತೀಚೆಗೆ ಕಾರ್ಯಕ್ರವೊಂದರಲ್ಲಿ ಸಾಧು ಕೋಕಿಲಾ ಅವರು ತಮ್ಮ ತಾಯಿಯನ್ನು ನೆನೆದು ಭಾವುಕರಾಗಿದ್ದರು. ತೀರ್ಪುಗಾರರಾಗಿರುವ ಸಾಧು ಕೋಕಿಲಾ ಅವರ ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳು 90ರ ದಶಕದ ಹಾಡುಗಳನ್ನು ಹಾಡಿದ್ದರು. ಸ್ಪರ್ಧಿ ಅಪೇಕ್ಷಾ ಪೈ `ಸೇವಂತಿಗೆ ಚೆಂಡಿನಂತಹ ಮುದ್ದು ಕೋಳಿ’ ಎಂಬ ಲಾಲಿ ಹಾಡನ್ನು ಹಾಡಿದ್ದರು.

ಈ ಹಾಡನ್ನು ಕೇಳಿದ ಸಾಧು ಕೋಕಿಲ ಒಂದು ಕ್ಷಣ ಭಾವುಕರಾಗಿ, ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಇದೇ ಹಾಡನ್ನು ಹಾಡುತ್ತಿದ್ದರು. ಸದ್ಯ ಐಸಿಯುನಲ್ಲಿ ನಮ್ಮ ತಾಯಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಲೇ ಸಾಧು ಅವರ ಕಣ್ಣಾಲಿಗಳು ತುಂಬಿಕೊಂಡಿತ್ತು. ಅಮ್ಮನಿಗೆ ಪ್ರಪಂಚದಲ್ಲಿ ಸರಿಸಾಟಿಯಾದದ್ದು ಬೇರೆ ಏನೂ ಇಲ್ಲ. ಈ ಲಾಲಿ ಹಾಡುಗಳು ಪ್ರತಿಯೊಬ್ಬರ ಮನದಾಳಕ್ಕೆ ತಲುಪುತ್ತವೆ ಅಂತ ಕಣ್ಣೀರು ಹಾಕಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *