ಬೆಂಗಳೂರು: ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ನಿನ್ನೆ ತಾನೇ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರ ಕಾಲೆಳೆದಿದ್ದು, ಇದೀಗ ವಿಡಿಯೋ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇಡೀ ವಿಶ್ವವೇ ಮೋದಿಗೆ ಸೆಲ್ಯೂಟ್ ಹೊಡೆಯುವಾಗ ರಮ್ಯಾ ಅವರು ಹೀಯಾಳಿಸೋದು ಸರಿಯಲ್ಲ. ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್ ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ ಎಂದು ತಿರುಗೇಟು ನೀಡಿದ್ದಾರೆ.
Advertisement
What are your thoughts? pic.twitter.com/b8GcgKL2ih
— Ramya/Divya Spandana (@divyaspandana) April 29, 2019
Advertisement
ವಿಡಿಯೋದಲ್ಲೇನಿದೆ?
ರಮ್ಯಾ ಅವರು ರಾಷ್ಟ್ರೀಯ ಪಕ್ಷದಲ್ಲಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತಾಡೋದು ಸರಿ ಅಲ್ಲ. ಒಬ್ಬ ನಾಯಕನ ಬಗ್ಗೆ ಹೀಯಾಳಿಸಿ ಮಾತಾಡೋದು ತಪ್ಪು ಅನಿಸಿತ್ತು. ಹೀಗಾಗಿ ನಿನ್ನೆ ನಾನು ಟ್ವೀಟ್ ಮಾಡಿದ್ದೆ ಎಂದಿದ್ದಾರೆ.
Advertisement
ರಮ್ಯಾ ಅವರ ಮನಸ್ಥಿತಿ ಹೇಗಿದೆ ಅಂದರೆ, ಪಾಕಿಸ್ತಾನ ಸ್ವರ್ಗ. ಇಂತಹವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ. ಏನೂ ಮಾಡೋದಕ್ಕೆ ಆಗಲ್ಲ. ಹೀಗಾಗಿ ಇನ್ನು ಮುಂದೆಯಾದರೂ ಮೇಡಂ ಅವರು ರಾಜಕಾರಣದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳಲಿ. ರಾಜಕೀಯ ತಜ್ಞರ ಬಳಿ ಹೋಗಿ ಟ್ಯೂಷನ್ ತೆಗೆದುಕೊಳ್ಳಲಿ. ಹೀಗೆ ಕಲಿತರೆ ತುಂಬಾ ಸಹಾಯವಾಗುತ್ತದೆ. ಸಮಾಜಕ್ಕೂ ಹೆಲ್ಪ್ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ.ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ
ನಾಳೆ ವೀಡಿಯೋ ಮೂಲಕ ಉತ್ತರ ಕೊಡುತ್ತಿನಿ. @divyaspandana pic.twitter.com/UmGlg10fOh
— Bullett Prakasha (@BulletPrakash2) April 29, 2019
ಜನರಿಗೆ ಈ ರೀತಿಯ ತಪ್ಪು ಸಂದೇಶಗಳನ್ನು ರವಾನಿಸುವುದು ಸರಿಯಲ್ಲ. ಒಬ್ಬ ವಿಶ್ವನಾಯಕರ ವಿರುದ್ಧ ಮಾತಾಡೋದು ಸರಿಯಲ್ಲ. ಇಡೀ ಜಗತ್ತು ಅವರನ್ನು ಗೌರವದಿಂದ ಕಾಣುತ್ತದೆ. ಸೆಲ್ಯೂಟ್ ಹೊಡೆಯುತ್ತದೆ. ನಮ್ಮ ಭಾರತ ದೇಶ ಎಲ್ಲೋ ಇತ್ತು. ಆದ್ರೆ ಇಂದು ಈ ದೇಶವನ್ನು ಪ್ರಪಂಚದಾದ್ಯಂತ `ಹಿಂದೂಸ್ತಾನ’ ಎಂದು ಹೇಳುವ ಮಟ್ಟಿಗೆ ಇಂದು ಭಾರತವನ್ನು ಅವರು ಬೆಳೆಸಿದ್ದಾರೆ ಅಂದರು.
ಇಂತಹ ಒಬ್ಬ ವಿಶ್ವನಾಯಕನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ, ಅರ್ಹತೆ ಹಾಗೂ ಜವಾಬ್ದಾರಿಯನ್ನು ಬಿಟ್ಟು ಹೊರಬಂದಿದ್ದೀರಿ. ಇದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದಾರೆ.