ಕೊಲಂಬಿಯಾ ವಿಶ್ವವಿದ್ಯಾಲಯ ನನಗೆ ದ್ರೋಹ ಬಗೆದಿದೆ – ಅಮೆರಿಕದಿಂದ ಸ್ವಯಂ ಗಡೀಪಾರಾದ ಭಾರತೀಯ ವಿದ್ಯಾರ್ಥಿನಿ ಅಳಲು

Public TV
2 Min Read
Ranjani Srinivasan 1

– ಸಂಸ್ಥೆಯಲ್ಲಿ ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ: ರಂಜನಿ

ಒಟ್ಟಾವಾ: ಕೊಲಂಬಿಯಾ ವಿಶ್ವವಿದ್ಯಾಲಯ(Columbia University) ನನಗೆ ದ್ರೋಹ ಬಗೆದಿದೆ ಎಂದು ಅಮೆರಿಕಾದಿಂದ (USA,) ಕೆನಡಾಕ್ಕೆ ಸ್ವಯಂ ಗಡೀಪಾರಾದ ಭಾರತೀಯ (India) ವಿದ್ಯಾರ್ಥಿನಿ ರಂಜಿನಿ ಶ್ರೀನಿವಾಸನ್ (37) (Ranjani Srinivasan) ಅಳಲು ತೋಡಿಕೊಂಡಿದ್ದಾರೆ. ನಾನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳನ್ನು ಕಳೆದಿದ್ದೇನೆ. ಕೆಲವೊಮ್ಮೆ ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಸಂಸ್ಥೆಯು ನನ್ನನ್ನು ನಿರಾಸೆಗೊಳಿಸುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ranjani srinivasan

ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇರುವ ಒಂದು ತಿಂಗಳ ಮೊದಲು, ಅಂದರೆ ಡಿಸೆಂಬರ್‌ನಲ್ಲಿ ನನ್ನ ವಿದ್ಯಾರ್ಥಿ ವೀಸಾವನ್ನು (ಎಫ್‌ 1 ವೀಸಾ) ನವೀಕರಿಸಲಾಗಿತ್ತು. ನನ್ನ ಪಿಹೆಚ್‌ಡಿಗೆ ಬೇಕಾದ ಎಲ್ಲಾ ಅರ್ಹತೆಗಳು ಮುಗಿದಿವೆ. ಅದಕ್ಕಾಗಿ ನಾನು ಅಮೆರಿಕದಲ್ಲಿ ಇರಬೇಕಾಗಿಲ್ಲ. ಆದ್ದರಿಂದ, ನಾನು ಕೊಲಂಬಿಯಾಕ್ಕೆ ಮನವಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ದಾಖಲಾತಿಯನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿದ್ದೇನೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

ಅಮೆರಿಕ ಸರ್ಕಾರ ʻಭಯೋತ್ಪಾದನಾ ಬೆಂಬಲಿಗʼ ಎಂಬ ಹಣೆಪಟ್ಟಿ ಕಟ್ಟಿದ್ದರೂ, ನಾನು ಸಕ್ರಿಯವಾಗಿ ಭಾಗಿಯಾಗಿದ್ದೇನೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ಹಂಚಿಕೊಳ್ಳಲಾಗಿಲ್ಲ. ಆರೋಪಗಳಿಗೆ ಕಾರಣಗಳನ್ನು ಸ್ಪಷ್ಟಪಡಿಸಲಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ರಂಜನಿಯವರ ವೀಸಾವನ್ನು ರದ್ದುಗೊಳಿಸಿದಾಗ ಅವರು ಪಿಹೆಚ್‌ಡಿ ಪೂರ್ಣಗೊಳಿಸುವ ಅಂಚಿನಲ್ಲಿದ್ದರು. ಈ ಮೂಲಕ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಫುಲ್‌ಬ್ರೈಟ್ ಸ್ವೀಕರಿಸುವರಿದ್ದರು. ಅಷ್ಟರಲ್ಲಾಗಲೇ ಅವರ ಗಡಿಪಾರಾಗಿದ್ದು, ತೀವ್ರ ನಿರಾಸೆಗೊಳಗಾಗಿದ್ದರು.

ಮಾ.5 ರಂದು ಚೆನ್ನೈನಲ್ಲಿರುವ ಯುಎಸ್ ಕಾನ್ಸುಲೇಟ್‌ನಿಂದ ತಮ್ಮ ವಿದ್ಯಾರ್ಥಿ ವೀಸಾವನ್ನು ಅನಿರ್ದಿಷ್ಟವಾಗಿ ರದ್ದುಪಡಿಸಲಾಗಿದೆ ಎಂಬ ಇಮೇಲ್‌ನ್ನು ರಂಜನಿ ಪಡೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಅಮೆರಿಕ ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅವರ ಮನೆ ಬಾಗಿಲಿಗೆ ಬಂದು ರೂಮ್‌ಮೇಟ್‌ನ್ನು ವಿಚಾರಿಸಿದ್ದರು. ಇದಾದ ಬಳಿಕ ದಾಖಲೆಗಳು, ಅಗತ್ಯ ವಸ್ತುಗಳನ್ನು ತೆಗೆದುಕೊಂಡು ನ್ಯೂಯಾರ್ಕ್‌ನಿಂದ ಕೆನಡಾಕ್ಕೆ ಅವರು ಬಂದಿದ್ದರು. ಈ ಘಟನೆಯ ಬಗ್ಗೆ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಮೆರಿಕ ಎರಡು ವಿಧಾನ ಬಳಸಿ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡುತ್ತದೆ. ಒಂದನೇಯದ್ದು ಅಮೆರಿಕದ ಭದ್ರತಾ ಸಿಬ್ಬಂದಿಯೇ ವಿದೇಶಿ ಪ್ರಜೆಗಳನ್ನು ಬಂಧಿಸಿ ಗಡೀಪಾರು ಮಾಡುತ್ತದೆ. ಸ್ವಯಂ ಗಡೀಪಾರಿನಲ್ಲಿ ಅಮೆರಿಕ ವಿದೇಶಿ ಪ್ರಜೆಗಳನ್ನು ಹೊರಗೆ ದಬ್ಬುವುದಿಲ್ಲ. ಬದಲಾಗಿ ಆ ಪ್ರಜೆಗಳೇ ಅಮೆರಿಕವನ್ನು ತೊರೆಯಬೇಕಾಗುತ್ತದೆ.

ರಂಜನಿ ಶ್ರೀನಿವಾಸನ್ ವಿಮಾನ ನಿಲ್ದಾಣದ ಮೂಲಕ ದೇಶ ತೊರೆಯುತ್ತಿರುವ ವಿಡಿಯೋವನ್ನು ಅಮೆರಿಕದ ಗೃಹ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಎಕ್ಸ್‌ನಲ್ಲಿ ಹಂಚಿಕೊಂಡು, ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವ ಯಾರಾದರೂ ದೇಶದಲ್ಲಿ ಇರಬಾರದು ಎಂದು ಪೋಸ್ಟ್‌ ಮಾಡಿದ್ದರು. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

Share This Article