ಇನ್ಮೇಲೆ ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್- ಗೋಬಿಗೂ ಕೃತಕ ಬಣ್ಣ ಬಳಸುವಂತಿಲ್ಲ

Public TV
1 Min Read
Cotton Candy Gobi Manchuri

– ಕಾನೂನು ಉಲ್ಲಂಘಿಸಿದರೆ 10 ಲಕ್ಷ ದಂಡ, 7 ವರ್ಷ ಜೈಲು

ಬೆಂಗಳೂರು: ಕಲರ್ ಕಾಟನ್ ಕ್ಯಾಂಡಿಯನ್ನು (Cotton Candy) ನಿಷೇಧ ಮಾಡಿ ಆಹಾರ ಮತ್ತು ಸುರಕ್ಷತಾ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಗೋಬಿ ಮಂಚೂರಿಯಲ್ಲಿ ಕೂಡ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಇತ್ತೀಚೆಗೆ ಕ್ಯಾನ್ಸರ್ ಸೇರಿದಂತೆ ಆರೋಗ್ಯ ಹಾಳಾಗುತ್ತಿದೆ. ಬೀದಿ ಬದಿ, ಹೊಟೇಲ್ ಊಟದ ಮೇಲೆ ಜನ ಹೆಚ್ಚು ಅವಲಂಬನೆ ಆಗುತ್ತಿದ್ದಾರೆ. ಆಹಾರ ಸರಿಯಾದ ರೀತಿ ಸೇವನೆ ಆಗದಿದ್ದರೆ ಅನಾರೋಗ್ಯ ಹೆಚ್ಚಾಗುತ್ತಿದೆ. ಹೆಚ್ಚು ಕೊಬ್ಬಿನಾಂಶ, ಉಪ್ಪು, ಸಕ್ಕರೆ, ಹೆಚ್ಚಿರೋ ಆಹಾರದಿಂದ ದುಷ್ಪರಿಣಾಮ ಇದೆ ಎಂದರು.

ಎರಡು ಪದಾರ್ಥಗಳಾದ ಕಾಟನ್ ಕ್ಯಾಂಡಿ ಮತ್ತು ಗೋಬಿ (Gobi Manchuri) ಸ್ಯಾಂಪಲ್ ಕಲೆಕ್ಟ್ ಮಾಡಲಾಯಿತು. ಬೀದಿ ಬದಿ, ಹೊಟೇಲ್ ಗಳಲ್ಲಿ ಗೋಬಿಯ 171 ಮಾದರಿ ಸಂಗ್ರಹ ಮಾಡಲಾಯಿತು. ಇದರಲ್ಲಿ 107 ಕೃತಕ ಬಣ್ಣ ಬಳಕೆ ಆಗಿದೆ. ರೋಡಮೈನ್ ಬಿ, ಟಾರ್ ಟ್ರಾಸೈನ್ ಸ್ಯಾಂಪಲ್ ನಲ್ಲಿ ಸಿಕ್ಕಿದೆ. ರೋಡಮೈನ್ ಕ್ಯಾನ್ಸರ್ ಗೆ ಕಾರಣವಾಗಿದೆ. ಇದನ್ನ ಬಳಕೆ ಮಾಡಲು ಪರ್ಮಿಷನ್ ಇಲ್ಲ. ಮಕ್ಕಳು ಕಾಟನ್ ಕ್ಯಾಂಡಿ ಹೆಚ್ಚಾಗಿ ಸೇವನೆ ಮಡ್ತಾ ಇದ್ದಾರೆ ಎಂದು ಹೇಳಿದರು.

gobi 65 2

ಟಾರ್ ಟ್ರಾಸೈನ್ ಬಳಕೆಗೆ ಅಪ್ರೂವಲ್ ಇದೆ. ಆದರೆ ಗೋಬಿಯಂತಹ ಪ್ರಿಪೇರ್ ಫುಡ್ ನಲ್ಲಿ ಇದು ಬಳಕೆ ಇಲ್ಲ. 107 ಸ್ಯಾಂಪಲ್ ನಲ್ಲಿ 12 ಟಾರ್ ಟ್ರಾಸೈನ್ ಸಿಕ್ಕಿದೆ. ಸನ್ ಸೆಟ್ 33 ಸಿಕ್ಕಿದೆ ಇದ್ಯಾವುದನ್ನು ಫುಡ್ ಗಳಲ್ಲಿ ಬಳಕೆ ಮಾಡುವಂತಿಲ್ಲ.  ಹೀಗಾಗಿ ಕಾನೂನು ಪ್ರಕಾರ ಉಲ್ಲಂಘನೆ ಮಾಡಿದವರಿಗೆ 10 ಲಕ್ಷ ದಂಡ, 7 ವರ್ಷ ಶಿಕ್ಷೆಗೆ ಅವಕಾಶ ಇದೆ. ಪ್ಲೇನ್ ಕಾಟನ್ ಕ್ಯಾಂಡಿ ತಯಾರಿ ಮಾಡಬಹುದು. ಆದರೆ ಕಲರ್ ಕಾಟನ್ ಕ್ಯಾಂಡಿ ಮಾತ್ರ ಮಾರಾಟ ಮಾಡುವಂತಿಲ್ಲ ಎಂದು ಗುಂಡೂರಾವ್ ತಿಳಿಸಿದರು.

Share This Article